ಪ್ರಸ್ತುತ

ಗೋಲ್ಡನ್ ಟೈಮ್

TID| House Husband| Ft. Ankit Bathla, Chandani Bhagwanani - YouTube

ಸ್ಮಿತಾ ರಾಘವೇಂದ್ರ

ಅಬ್ಬಬ್ಬಾ ಅಂದ್ರೆ ಮೂರುದಿನ ಇರಬಹುದಪ್ಪಾ ಮನೆಲಿ ಅದಕ್ಕಿಂತ ಹೆಚ್ಚಿಗೆದಿನ ಬಾಗಿಲುಹಾಕಿ ಕೂರಲು ಅಸಾಧ್ಯ..ಆದರೆ ಬರೋಬ್ಬರಿ ಇಪ್ಪತ್ತೊಂದು ದಿನಗಳಕಾಲ ಮಹಾಮಾರಿ ಕೋವಿಡ್ 19 ತೊಲಗಿಸಲು ಮನೆಯೇ ಮದ್ದು ಎಂದು,ಜನಹಿತಕ್ಕಾಗಿ ಜಾರಿಮಾಡಿದ ಸರ್ಕಾರದ ನಿಯಮ ಪಾಲಿಸದೇ ಇರಲು ಸಾಧ್ಯವಿಲ್ಲ..
ಲಕ್ಷಣರೇಖೆ ಹಾಕಿ ಬಾಗಿಲು ಹಾಕಿ ಕೊಳ್ಳುವದು ಉತ್ತಮ ಕೆಲಸ ಆದರೆ ಅದೆಷ್ಟು ಜನರಿಗೆ ಒಳಗೊಳಗೇ ಕಸಿವಿಸಿ,ದಿಗಿಲು,ಇನ್ನೇನು ಬದುಕೇ ಮುಗಿಯಿತೇ!? ಎನ್ನುವ ಭಾವ,ಬಾಗಿಲು ಹಾಕಿ ಕೂತು ಏನು ಮಾಡುವದು ಎನ್ನುವ ಗೊಣಗು.
ತಲೆ ಕೆಡಿಸಿಕೊಳ್ಳಬೇಡಿ ಅಯ್ಯೋ ಹೇಗೆ ಈ ಇಪ್ಪತ್ತೊಂದು ದಿನ ಕಳೆಯಲಪ್ಪಾ!? ಅಂತ ತಲೆಯಮೇಲೆ ಸೂರು ಬಿದ್ದವರಂತೆ ಆಡಬೇಡಿ.
ಇಂತಹ ಉತ್ತಮ ಅವಕಾಶ ಮತ್ತೆ ನಮ್ಮ, ನಿಮ್ಮ ಜೀವನದಲ್ಲಿ ಬರಲಾರದು.
ಗೃಹ ಬಂಧನವಲ್ಲ ಗೃಹವಾಸ
ಇದು ನಮ್ಮದೇ ಒಳಿತಿಗಾಗಿ ಎಂದು ಮನಃಪೂರ್ವಕವಾಗಿ ಸ್ವಾಗತಿಸಿ.
ಒಂದಿಷ್ಟು ನಿಯಮ ಹಾಕಿ ಕೊಳ್ಳಿ ಸದುಪಯೋಗ ಪಡಿಸಿಕೊಳ್ಳುವತ್ತ ಮನಸು ವಾಲಲಿ.

  • ಎಲ್ಲರೂ ಮನೆಯಲ್ಲಿಯೇ ಇರುವದರಿಂದ ಮನೆಯ ಹೆಂಗಸರಿಗೆ ಸಹಜವಾಗಿಯೇ ಕೆಲಸಗಳು ಜಾಸ್ತಿಯಾಗುತ್ತವೆ,ಅಡುಗೆ ಮನೆಯಲ್ಲಿ ತಾಯಿಯ ಜೊತೆ ಹೆಂಡತಿಯ ಜೊತೆ ಸಹಕರಿಸಿ.
    ಮನೆಯ ಹೆಣ್ಣುಮಕ್ಕಳಿಗೆ ಅಡುಗೆ ಕಲಿಯಲು ಉತ್ತಮ ಅವಕಾಶ.
    *ಎಷ್ಟೋದಿನಗಳಿಂದ ಉಳಿದೇಹೋದ ಕೆಲಸಗಳನ್ನು ಕೈಗೆತ್ತಿಕೊಳ್ಳಿ
    *ಒಳ್ಳೆಯ ಪುಸ್ತಕಗಳನ್ನು ಓದಿ
    *ಮಕ್ಕಳು ಮನೆಯೊಳಗೇ ಬಂದಿಯಾಗಿರಲು ಇಷ್ಟ ಪಡಲಾರರು ಅವರನ್ನು ಸಂಭಾಳಿಸುವದೇ ಒಂದು ದೊಡ್ಡ ಸವಾಲು
    ಮನೆಯ ಪ್ರತಿಯೊಂದು ಸದಸ್ಯರೂ ಮಕ್ಕಳೊಂದಿಗೆ ಹೆಚ್ಚು ಹೆಚ್ಚು ಸಮಯಕಳೆಯಿರಿ.
    ಅನವಶ್ಯಕ ರೇಗು ಮಕ್ಕಳನ್ನು ಘಾಸಿಗೊಳಿಸದಿರಲಿ.
    *sslc ಮಕ್ಕಳಿಗೆ ಪರೀಕ್ಷೆ ಮುಗಿಯದ ಕಾರಣ ಅವರು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ ಸದಾ ಅವರಿಗೆ ಧೈರ್ಯ ತುಂಬುತ್ತಿರಿ
  • ಸಂಬಂಧಗಳನ್ನು ಆಪ್ತವಾಗಿ ನೋಡಿ
    ಮುನಿಸು ವೈಮನಸ್ಸುಗಳಿಗೆ ಅವಕಾಷ ನೀಡದಿರಿ.
    *ಹೀಗೆ ಇಷ್ಟು ದಿನಗಳಕಾಲ ಇಡೀ ಮನೆ ಸದಸ್ಯರು ಒಟ್ಟಿಗೆ ಇರುವ ಅವಕಾಶ ಜೀವನದಲ್ಲಿ ಮತ್ತೆ ಬರಲಾರದು ಎಂಬುದನ್ನು ಅರಿತುಕೊಳ್ಳಿ.
  • ನೆನಪಿರಲಿ ಮತ್ತೆ ನಾವು ಅದೇ ಬ್ಯೂಸಿ ಬ್ಯೂಸಿ ಜೀವನಕ್ಕೆ ತರೆದುಕೊಳ್ಳಲೇಬೇಕು ಓಡುವ ಕಾಲದೊಂದಿಗೆ ದಾವಂತದಲಿ ಓಡಲೇಬೇಕು
    ಪ್ರತಿಯೊಬ್ಬರಿಗೂ ಈ ಕಾಲ ಗೋಲ್ಡನ್ ಸಮಯ.
    ಸದುಪಯೋಗಪಡಿಸಿಕೊಳ್ಳಿ.
    *ಮನೆಯ ಸದಸ್ಯರೆಲ್ಲ ಕೂತು ಸುದ್ದಿ ಹೇಳಿ, ಆಟವಾಡಿ, ಪರಸ್ಪರ ಅರ್ಥ ಮಾಡಿಕೊಳ್ಳಿ,
  • ಅದೆಷ್ಟೋ ಜನರು ಏನೂ ಕೆಲಸ ಇಲ್ವಲ್ಲಾ ಎಂದು ಮೂರು ಹೊತ್ತು ಮೊಬೈಲ್ ನಲ್ಲಿ ಮುಳುಗಿ ಸಾಮಾಜಿಕ ತಾಣದಲ್ಲಿ ಅನವಶ್ಯಕ ಸುದ್ದಿಗಳಿಗೆ ಇಂಬು ಕೊಡುತ್ತಾ ಸಮಯ ಕಳೆಯುತ್ತಾರೆ.
    ಖಂಡಿತವಾಗಿ ಈ ತಪ್ಪು ಮಾಡಬೇಡಿ.
    ಮತ್ತಷ್ಟು ಮೊಬೈಲ್ ದಾಸ್ಯತ್ವಕ್ಕೆ ಬಲಿಯಾಗದಿರಿ.
    ಕೊನೆಯದಾಗಿ ಈ ಗೃಹವಾಸ ಶಾಶ್ವತವಲ್ಲ ನಾವು ದೇಶದ ಒಳಿತಿಗಾಗಿ ನಿಯಮಪಾಲನೆ ಮಾಡುತ್ತಿದ್ದೇವೆ.ಸಣ್ಣ ಪುಟ್ಟ ಕಷ್ಟಗಳನ್ನು ಸಹಿಸಿಕೊಳ್ಳೋಣ ತಾಳ್ಮೆ ಕಳೆದುಕೊಳ್ಳದಿರೋಣ ಎಂದು ನಿರ್ಧಾರಮಾಡಿ..
    ಮುಖ್ಯವಾಗಿ ಮುನಿಸು ಜಗಳಗಳಿಗೆ ಯಾವುದೇ ಅವಕಾಶ ಕೊಡಲಾರೆ ಎಂದು ಪ್ರತಿಯೊಬ್ಬರೂ ಮನದೊಳಗೇ ಶಪಥ ಕೈಗೊಳ್ಳಿ..
    ಖುಷಿಯಾಗಿ ಕಳೆಯಿರಿ.
  • *************

One thought on “ಪ್ರಸ್ತುತ

Leave a Reply

Back To Top