ಗಾಂಧಿಯೇ ಮೊದಲ ಕವಿತೆ

ಗಾಂಧಿಯೇ ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ ರೇಶ್ಮಾಗುಳೇದಗುಡ್ಡಾಕರ್ ಅಂದು ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಮನೆಯ ಕಡೆ ಪಯಣ ಬೆಳಸಿದ್ದೆ . ನನ್ನ ಪ್ರೀತಿಯ ಲೇಡಿ ಬರ್ಡ ನೊಂದಿಗೆ.   ಮತ್ತೆ ಒಂದು ಘಂಟೆ ಕಳೆದು ಲ್ಯಾಬ್ ಗೆ ಹೋಗ ಬೇಕಾಗಿತ್ತು . ಸರ ಸರ ಮನೆಗೆ ಬಂದು ನನ್ನ ಸೈಕಲ್ ಅಂಗಳದಲ್ಲೆ ಬಿಟ್ಟು ಒಳಗೆ ಬಂದೆ “ಬಾಬಾ ರೇಶ್ಮಾ ಹೊಸತು ಪತ್ರಿಕೆ ಎರಡು ಬಂದಿದೆ ನೋಡು “.ಎಂದು ನನಗೆ ತಂದು ಕೊಟ್ಟರು .ತಂದೆಯವರಿಗೂ ಪತ್ರಿಕೆ ನೋಡಿ ಅಚ್ಚರಿಯಾಗಿದೆ .ನಾನು ಕವಿತೆ ಕಳಿಸಿರುವ […]

ಮೊದಲ ಕವನ

ಮೊದಲ ಕವಿತೆಯ ರೋಮಾಂಚನ ಎ ಎಸ್. ಮಕಾನದಾರ 80ರ ದಶಕದ ಕೊನೆ ಅಂಚಿನಲಿ ನಿರಂತರ ಸಾಹಿತ್ಯ ವೇದಿಕೆ ಗಜೇಂದ್ರಗಡ ದಲ್ಲಿ ಹುಟ್ಟಿಕೊಂಡಿತು. ಹುಬ್ಬಳ್ಳಿ ಗುಂಡಪ್ಪ ಪುಂಡಲೀಕ ಕಲ್ಲಿಗನೂರ್  ಇಬ್ಬರೂ ಹಿರಿಯರು ಕವನ ಕುಂಜ ಸಂಪಾದಿತ ಕವನ ಸಂಕಲನ ಪ್ರಕಟಿಸಿದರು. ಹುಬ್ಬಳ್ಳಿ ಗುಂಡಪ್ಪ ಗುಂಡಿನ ಗಿರಾಕಿ. ನಾನಾಗ ವೈನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದೆ. ಅಂಗಡಿ ಬಾಗಿಲು ತೆರೆದೊಡನೆ ಮೊದಲ ಗಿರಾಕಿ ಗುಂಡಪ್ಪ. ಬಗಲಲ್ಲಿ ಹತ್ತಾರು ಪತ್ರಿಕೆ ತರುತ್ತಿದ್ದರು. ಗುಂಡಿನ ಮತ್ತು ಏರಿದಂತೆ ಕಾವ್ಯಝರಿ ಸರಾಗವಾಗಿ ಬರುತ್ತಿತ್ತು. ಬೆಳಿಗ್ಗೆ […]

ಕಟ್ಟುವ ಮುಕ್ತತೆ

ಲೇಖನ ನೂತನ ದೋಶೆಟ್ಟಿ ೧೯೮೫ ಮಿಖೈಲ್ ಗೋರ್ಬಚೇವ್ ಸೋವಿಯತ್ ರಷ್ಯಾ ಒಕ್ಕೂಟದ ಕೊನೆಯ ಅಧ್ಯಕ್ಷರಾಗಿ ಗ್ಲಾಸ್‌ನೊಸ್ಟ್ (ಮುಕ್ತತೆ) ಹಾಗೂ ಪೆರೆಸ್ಟ್ರೋಯಿಕ ಅಂದರೆ ಅದುವರೆಗೂ ಇದ್ದ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಎರಡು ನೀತಿಗಳನ್ನು ಹುಟ್ಟು ಹಾಕಿದರು. ಇದರ ಫಲವಾಗಿ ೧೯೨೨ರ ಡಿಸೆಂಬರಿ ನಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದ ಸೋವಿಯತ್ ರಷ್ಯಾ ಒಕ್ಕೂಟ ಶಿಥಿಲವಾಗಿ ಛಿದ್ರ ಛಿದ್ರವಾಯಿತು.೬೩ ವರ್ಷಗಳವರೆಗೆ ಅಮೇರಿಕಾಕ್ಕೆ ಸೆಡ್ಡು ಹೊಡೆದು ನಿಂತಿದ್ದ ‘ಸೂಪರ್ ಪವರ್’ ರಾಷ್ಟ್ರ ಹೇಳ ಹೆಸರಿಲ್ಲದಂತಾಯಿತು. ರಷ್ಯಾ ಕ್ರಾಂತಿಯ ಹರಿಕಾರನಾಗಿದ್ದ […]

ಮಾಯಾ ಜಗತ್ತಿನ ಚಕ್ರವ್ಯೂಹದಲ್ಲಿ ಸಿಲುಕಿ

ಲಹರಿ ಡಾ. ಅಜಿತ್ ಹರೀಶಿ ವಾತಾವರಣ ಥಂಡಿಯಿಂದ ಕೂಡಿದೆ. ಮನಸ್ಸು ದುಪ್ಪಡಿ ಹೊದ್ದು ಮಲಗಿದೆ. ನಿನ್ನೆ ಒಂದೇ ದಿನಕ್ಕೆ ವಾಟ್ಸಾಪ್ ಗುಂಪೊಂದರಿಂದ ನಾಲ್ಕು ಜನ ಲೆಫ್ಟ್ ಆದರು. ಹೋದ ವರ್ಷ ಜುಲೈ ತಿಂಗಳಲ್ಲೇ ನಾನು ಎಲ್ಲ ಗ್ರೂಪ್ ಗಳಿಂದ ಹೊರಹೋಗಿದ್ದೆ. ಮತ್ತೆ ಕೆಲವು ಗ್ರೂಪ್ ಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಮರಳಿದ್ದೆ. ಅವರೂ ಮರಳಬಹುದು. ವಾತಾವರಣ, ವಾಟ್ಸಾಪು ಮತ್ತು ಮಾನಸಿಕತೆಯ ಜೊತೆಗೆ ಈ ಬಾರಿ ಕೊರೋನ ಯಾಡೆಡ್ ಫ್ಲೇವರ್ರು. ಫೇಸ್ಬುಕ್ ನಮ್ಮನೆ ದೇವರು! ಬೆಳಿಗ್ಗೆ ಫೇಸ್ಬುಕ್ ಮುಂದೆ ಕುಳಿತು […]

ಕವಿತೆಯೆಂಬ ಪುಳಕದ ಧ್ಯಾನ

ಮೊದಲ ಕವಿತೆಯ ರೋಮಾಂಚನ ಸ್ಮಿತಾ ಅಮೃತರಾಜ್ ನಿಜ  ಹೇಳಬೇಕೆಂದರೆ  ನಾನೊಬ್ಬಳು ಕವಯತ್ರಿ ಆಗುತ್ತೇನೆ ಅಂತ ಕನಸು ಮನಸಿನಲ್ಲೂ ಅಂದು ಕೊಂಡವಳಲ್ಲ. ಈಗಲೂ ಹಾಗನ್ನಿಸುತ್ತಿಲ್ಲ.  ಆದರೆ ಕೆಲವೊಮ್ಮೆ ಹುಕಿ ಹುಟ್ಟಿ ಗೀಚಿದ ಎರಡು ಸಾಲು ಅಲ್ಲಿಲ್ಲಿ ಕಾಣಿಸಿಕೊಂಡು, ಕೇಳಿಸಿಕೊಂಡು, ಅದನ್ನೇ ಕವಿತೆ ಅಂತ ಭ್ರಮಿಸಿ ನನಗೆ ಕವಯತ್ರಿ ಅನ್ನುವ ಬಿರುದಾಂಕಿತವನ್ನ ಅವರಿವರು ಯಾವುದೇ ಕವಡೆ ಕಾಸಿಲ್ಲದೆ ಪುಕ್ಕಟೆ ಕೊಟ್ಟು ಗೌರವಾದರದಿಂದ ನೋಡುವಾಗ, ನಾನು ಅದನ್ನು ಸುಖಾ ಸುಮ್ಮಗೆ ಅಲ್ಲಗಳೆದರೆ ಅದು ಸಾಹಿತ್ಯ ಲೋಕಕ್ಕೇ ಮಾಡುವ ಅಪಚಾರವಲ್ಲವೇ? ಅಂತ ನನ್ನೊಳಗೆ […]

ಬೇರುಗಳು

ಕವಿತೆ ಪೂರ್ಣಿಮಾ ಸುರೇಶ್ ನಸುಕಿನ ಮೌನಹಳೆಯ ಹಾದಿಗೆಹೆಜ್ಜೆ ಜೋಡಿಸಿದೆ ಅದೇಆಚೆ ಬದಿ ಅಶ್ವತ್ಥ ಈ ಬದಿ ಆಲ ಆಲದ ಜಟಿಲ ಬಿಳಲುಗಳುನೇತಾಡಿದ್ದುಮಣ್ಣ ಪಾದಗಳು ತೇಲಿ ಅಗಸವಸ್ಪರ್ಶಿಸಿಮುದಗೊಂಡಿದ್ದುಎಲೆ ಮರೆಯ ಗೂಡಿನ ಹಕ್ಕಿಗಳಗಂದರ್ವವಾಣಿಗೆ ಪ್ರತಿಧ್ವನಿಸಿದ್ದೂಗುಲಾಬಿ ಅಂಗೈ ದೊರಗು ಸೆಳೆತಕೆಕೆಂಪಾಗಿದ್ದುಪುಟ್ಟ ಉರಿ ಸುಡುತ್ತಿದ್ದರೂ ಆಕರ್ಷಣೆ ! ಮತ್ತೆಮತ್ತೆತೂಗಿ ಬಿದ್ದದ್ದುತರಚಿದ್ದು.. ಈ ಅಶ್ವತ್ಥ!ಪುಟ್ಟ ಮನಸಿಗೆ ನಿಲುಕದದೊರಗು ದೇಹಆಗಸದ ಅಖಂಡ ಮೌನಕೆತನ್ನ ಧ್ಯಾನ ತುಣುಕುಗಳ ಸಿಲುಕಿಸಿಅನುಸಂಧಾನಗೈವಎಲೆಗಳು ಸುತ್ತು ಸುತ್ತಿದ್ದುಹತ್ತಿರದ ಪುಟ್ಟಗಿಡದ ಹಸಿರಪರಪರ ಎಳೆದುಹರಿದುಮನೆಯಾಟಕೆ ಅಡುಗೆತಯಾರಾಗಿದ್ದು.. ಕೈಗೆ ಹಸಿರು ರಸಕಾಲಲ್ಲಿ ಮಣ್ಣು ತೇವ ಆಲ-ಅಶ್ವತ್ಥಆಳಕ್ಕಿಳಿಸುತ್ತವೆಬೇರುಒಳಕೂಗುಅಕ್ಷರವಾಗಲು ತುಡಿಯುತ್ತವೆ.ಬೆಳಕಾಗಿ […]

ನಾ ಬರೆದ ಮೊದಲ ಕವನ

ಮೊದಲ ಕವಿತೆಯ ರೋಮಾಂಚನ ಸಾಹಿತ್ಯದ ಕಡೆಗೆ ನನ್ನ ಒಲವು ಚಿಕ್ಕವಳಿರುವಾಗಿಂದಲೇ ಇದೆ. ಅಂದರೆ ಕಥೆ, ಕಾದಂಬರಿ ಓದುವುದು. ಕವನ ಬರೆಯುವುದಿರಲಿ ಓದುವದೂ ನನ್ನ ಅಳವಲ್ಲವೆಂದುಕೊಂಡವಳು ನಾನು. ಅಂತಹ ದರಲ್ಲಿ ಈಗ ನಾನು ಪ್ರಕಟಿಸಿದ ಎಂಟು ಕೃತಿಗಳಲ್ಲಿ, ಐದು ಕವನ ಸಂಕಲನಗಳು. ನನಗೇ ಆಶ್ಚರ್ಯವಾಗುತ್ತದೆ! ಗದ್ಯ ಓದುತ್ತಿರುವಾಗ ಸಾಮಾಜಿಕ, ಐತಿಹಾಸಿಕ,ಪತ್ತೇದಾರಿ ಕಾದಂಬರಿ, ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಭಂದ ಇತ್ಯಾದಿ ನನ್ನ ಓದಿನ ಪರಿಮಿತಿಯಲ್ಲಿ ಇರುತ್ತಿತ್ತು. ಸ್ನೇಹಿತರು ಕವನ ಓದಲು ಪುಸಲಾಯಿಸಿದರು. ಉಹುಂ, ಕಣ್ಣೆತ್ತಿ ನೋಡಿರಲಿಲ್ಲ. ಆದರೆ ನಿವೃತ್ತಿ ಹೊಂದಿದ ಮೇಲೆ […]

ಎಂದೂ ಸಾಕೆನಿಸದ ನೆಲದ ನಂಟು, ಸಮುದ್ರದ ಪ್ರೀತಿ

ಅಂಕಣಬರಹ ಪುಸ್ತಕ- ಬಾನಸಮುದ್ರಕೆ ಗಾಳನೋಟ ಲೇಖಕರು- ಪ್ರವೀಣ ಬೆಲೆ ೮೦/- ಪ್ರಕಾಶನ-ಸಲೀಲ ಪುಸ್ತಕ ಚಿಕ್ಕವನಿರುವಾಗ ಬಟ್ಟೆಯ ಸ್ಟ್ಯಾಂಡ್‌ನಲ್ಲಿರುವ ಬಟ್ಟೆಗಳನ್ನೆಲ್ಲ ಒಂದೆಡೆ ಗುಡ್ಡೆಹಾಕಿಕೊಂಡು ಬೆಚ್ಚಗೆ ಮಲಗುತ್ತಿದ್ದ ಮಗನಿಗೆ ಈಗ ಆತ ಹಾಗೆ ಮಾಡುತ್ತಿದ್ದ ಎಂದರೆ ನಂಬುವುದಿಲ್ಲ. ಮಲಗುವಾಗ ನಾನು ಬೆಳ್ಳಿಗ್ಗೆ ಬೇಗ ಏಳಬೇಕಾದಾಗಲೆಲ್ಲ ಅವನ ಪಕ್ಕ ನನ್ನ ಉಪಯೋಗಿಸಿದ ಉಡುಪುಗಳನ್ನು ಇಡುತ್ತಿದ್ದೆ. ಅದನ್ನೇ ತಬ್ಬಿಕೊಂಡು ಆತ ಹಾಯಾಗಿ ಮಲಗಿಬಿಡುತ್ತಿದ್ದ. ಕೆಲವೊಮ್ಮೆ ಬಟ್ಟೆ ಇಡದಿದ್ದಾಗ ಎದ್ದು ಅಳಲು ಪ್ರಾರಂಭಿಸುತ್ತಿದ್ದ. ಪ್ರವೀಣ ಅವರ ಬಾನಸಮುದ್ರಕೆ ಗಾಳನೋಟ ಎನ್ನುವ ಸಂಕಲನದ ಮೊದಲ ಕವನವನ್ನು […]

ಧ್ಯಾನ

ಕವಿತೆ ಸುನೀತ ಕುಶಾಲನಗರ ಎಲ್ಲೆಡೆ ಗವ್ ಎನ್ನುವಾಗಲೂಅದೇನೋ ಧ್ಯಾನಮನೆಯೊಳಗಿದ್ದರೂ ನುಗ್ಗಿಬರುವ ಕವಿತೆ ಆಕಾಶದಂತೆ ಆವರಿಸಿನಿತ್ಯ ಬೆಳದಿಂಗಳುಋತುಚಕ್ರ ಉರುಳಿದಂತೆಋತುಸ್ರಾವ ವ್ಯತ್ಯಾಸಬಣ್ಣದ ಕನಸುಗಳಿಗೆಅದೆಷ್ಟು ಕೂಸುಗಳ ಕೇಕೆಜತೆಯಾದ ಕ್ಷಣ ಕ್ಷಣವೂಕಣ ಕಣಕೂ ಹಿತಮತ್ತೊಮ್ಮೆ ಬದುಕಿಬಿಡೆಂದುಚಾಚುವ ಕೈಕಣ್ಣ ಸುತ್ತಿದ ಬಳೆಯಾಕಾರದಕಪ್ಪನೂ ನೇವರಿಸುವಕೂದಲ ಬಣ್ಣದ ಲೇಪನಕೆಹೊಸ ಹೊಳಪುಭೂತ ಭವಿಷ್ಯದಹಂಗ ತೊರೆವ ವರ್ತಮಾನತೀರಾ ಖಾಸಗಿ ಬದುಕೇಆದರೂ ಸದ್ದಿಲ್ಲದೆಮುಟ್ಟುಗೋಲಾಗುವ ಮುಟ್ಟಿಗೂಹುಟ್ಟುತ್ತಿದೆ ಹೊಸಹುರುಪುದಿನ,ದಿನಾಂಕಗಳಗಡಿದಾಟಿ ಬರುವಲವಲವಿಕೆಯ ಮತ್ತು. ******************

ಕೊನೆಯಲ್ಲಿ

ಕವಿತೆ ನಂದಿನಿ ಹೆದ್ದುರ್ಗ ಕಳಚಿಕ್ಕೊಳ್ಳುತ್ತಲೆ ಹೋಗುತ್ತದೆಹೀಗೇಒಂದೊಂದೇ ಒಂದೊಂದೇ ಬಂಧ. ಬಿಡಿಸಲಾಗದ್ದು ಎನ್ನುವಾಗಲೇಹೊರಡುತ್ತದೆ ಬಿಟ್ಟು ಕಣ್ಮರೆಯಾಗುವುದೋಕಣ್ಣಳತೆಯಲ್ಲೇ ಇದ್ದೂಬೇಕೆನಿಸದೆ ಹೋಗುವುದೊಕಣ್ಣು ಕೈಯಿಗೆ ನಿಲುಕಿದರೂಎದೆಗೆ ಇಳಿಯದೇ ಹೋಗುವುದೊಬೇಕೆನಿಸಿದರೂ ಝಾಡಿಸಿಹೊರಡುವುದೊ.. ಕಳಚುತ್ತಲೇ ಹೋಗುತ್ತದೆ…ಇದ್ದಿತೆಂಬುದರ ಕುರುಹುಕ್ರಮೇಣ ಇಲ್ಲವಾಗಿ.. ಒಂಟಿ ಕೊಂಡಿಯೊಂದುಕೊರಳೆತ್ತಿ‌ ನೋಡುತ್ತಿದೆಈಗಸುತ್ತೆಲ್ಲಾ ಕ್ಷೀಣವಾಗಿ *************************

Back To Top