ಕವಿತೆ
ಸುನೀತ ಕುಶಾಲನಗರ
ಎಲ್ಲೆಡೆ ಗವ್ ಎನ್ನುವಾಗಲೂ
ಅದೇನೋ ಧ್ಯಾನ
ಮನೆಯೊಳಗಿದ್ದರೂ ನುಗ್ಗಿ
ಬರುವ ಕವಿತೆ
ಆಕಾಶದಂತೆ ಆವರಿಸಿ
ನಿತ್ಯ ಬೆಳದಿಂಗಳು
ಋತುಚಕ್ರ ಉರುಳಿದಂತೆ
ಋತುಸ್ರಾವ ವ್ಯತ್ಯಾಸ
ಬಣ್ಣದ ಕನಸುಗಳಿಗೆ
ಅದೆಷ್ಟು ಕೂಸುಗಳ ಕೇಕೆ
ಜತೆಯಾದ ಕ್ಷಣ ಕ್ಷಣವೂ
ಕಣ ಕಣಕೂ ಹಿತ
ಮತ್ತೊಮ್ಮೆ ಬದುಕಿಬಿಡೆಂದು
ಚಾಚುವ ಕೈ
ಕಣ್ಣ ಸುತ್ತಿದ ಬಳೆಯಾಕಾರದ
ಕಪ್ಪನೂ ನೇವರಿಸುವ
ಕೂದಲ ಬಣ್ಣದ ಲೇಪನಕೆ
ಹೊಸ ಹೊಳಪು
ಭೂತ ಭವಿಷ್ಯದ
ಹಂಗ ತೊರೆವ ವರ್ತಮಾನ
ತೀರಾ ಖಾಸಗಿ ಬದುಕೇ
ಆದರೂ ಸದ್ದಿಲ್ಲದೆ
ಮುಟ್ಟುಗೋಲಾಗುವ ಮುಟ್ಟಿಗೂ
ಹುಟ್ಟುತ್ತಿದೆ ಹೊಸಹುರುಪು
ದಿನ,ದಿನಾಂಕಗಳ
ಗಡಿದಾಟಿ ಬರುವ
ಲವಲವಿಕೆಯ ಮತ್ತು.
******************
ಚೆನ್ನಾಗಿದೆ.. ಋತುಚಕ್ರಗಳ ವ್ಯತ್ಯಾಸ ಹಿಡಿದಿಡುವ ಕವಿತೆ.
Very nice
ಚೆನ್ನಾಗಿದೆ ಸುನೀತ
Thank you sangaati
Endu nimma kavithegala noduva odina kuthuhaladava
Akshaya
ಕವನ ಚನ್ನಾಗಿದೆ. ದಿನ, ದಿನಾಂಕ ಗಳು ಗಡಿದಾಟಿ….. ಅಮೋಘ ಸಾಲುಗಳು..
ವಂದನೆಗಳು.
ಕವನ ತುಂಬಾ ಚೆನ್ನಾಗಿದೆ.
ಚಂದದ ಕವಿತೆ.
ತುಂಬಾ ಚೆಂದದ ಕವಿತೆ….
ಮೇಲು ನೋಟಕ್ಕೆ ಯಾವುದೋ ಕ್ರಾಂತಿಕಾರಿ ಸ್ತ್ರೀ ಸಂವೇದನೆಯ ಕವಿತೆ ಎಂದೆನಿಸುವ ಈ ಕವಿತೆ ಒಂದು ವಿಭಿನ್ನವಾದ ಅಭಿವ್ಯಕ್ತಿಯಾಗಿದೆ. ಋತುಸ್ರಾವ ಒಂದು ಪ್ರಕೃತಿ ಸಹಜವಾದ ಪ್ರಕ್ರಿಯೆಯಾಗಿದ್ದರೂ, ಸಮಾಜದಲ್ಲಿ ಅದೊಂದು ಅವ್ಯಕ್ತ, ಅಮುಕ್ತ ಸಂಗತಿಯೆನಿಸಿಬಿಟ್ಟಿದೆ. ಅಂತಹ ವಸ್ತುವೊಂದನ್ನು ಕವಿ ನಿರ್ಭಿಡೆಯಿಂದ ಬಳಸಿಕೊಂಡಿರುವುದನ್ನು ಮುಕ್ತವಾಗಿ ಮೆಚ್ಚಲೇಬೇಕು. ಇದು ಒಂದು ಕ್ರಾಂತಿಕಾರಿ ಕವಿತೆಯೇನೋ ಎಂದು ಪೂರ್ವಾಗ್ರಹವಾಗಿ ಓದಲು ತೊಡಗಿದರೆ, ಕೊನೆಯಲ್ಲಿ, ಬದುಕಿನ ‘ಋತುಚಕ್ರ’ದ ತಿರುವನ್ನು ಹೊಸಹುರುಪಿನೊಂದಿಗೆ ಒಪ್ಪಿಕೊಂಡ, ಲವಲವಿಕೆಯ ಹೆಣ್ಣೊಬ್ಬಳ ಚಿತ್ರಣ ಮನದಲ್ಲಿ ಮೂಡಿಸಿ ಯಾಮಾರಿಸಿ ಕಚಗುಳಿ ಇಡುತ್ತದೆ ಈ ಕವಿತೆ. ಕವಿತೆ ಮನದಲ್ಲಿ ‘ಲವಲವಿಕೆಯ ಮತ್ತ’ನ್ನು ಮೂಡಿಸಿದರೆ ಅದು ಯಶಸ್ವಿಯಾದಂತೆಯೆ. ಇಲ್ಲಿನ ಹೆಣ್ಣಂತೂ ‘ಭೂತ ಭವಿಷ್ಯದ’ ಹಂಗು ತೊರೆದು, ‘ಮುಟ್ಟು ಮುಟ್ಟುಗೋಲಾದರೂ’ ಹೊಸ ‘ಹುರುಪಿನಿಂದ’ ‘ಮತ್ತೊಮ್ಮೆ ಬದುಕಿಬಿಡುವ,’ ‘ದಿನ,ದಿನಾಂಕಗಳ’ ಗಡಿದಾಟಿಹೋದರೂ ಬಣ್ಣದ ಕನಸುಗಳೊಡನೆ ‘ವರ್ತಮಾನ’ದಲ್ಲಿ ಬದುಕುವಾಕೆ. ಇದೇ ಧೋರಣೆ ಬೇಕಿರುವುದು ಇಂದಿನ ಹೆಂಗಳೆಯರಿಗೆ. ಋತುಸ್ರಾವದ ಕಿರಿಕಿರಿಯನ್ನು ಅದು ನೀಡುವ ಮನೋದೈಹಿಕ ವೇದನೆಯನ್ನು (ಅದರಲ್ಲೂ ಋತುಚಕ್ರ ನಿಲ್ಲುವ ಸಂದರ್ಭದಲ್ಲಿ) ಆ ಸಂಕಟವನ್ನು ಋಣಾತ್ಮಕವಾಗಿ ನೋಡದೆ ಧನಾತ್ಮಕವಾಗಿ ಪರಿಭಾವಿಸಿರುವುದು ಈ ಕವಿತೆಯ ವಿಶೇಷತೆ. ಇದೇ ಈ ಕವಿತೆಯ ಶಕ್ತಿ ಕೂಡ. ಇದರಿಂದಾಗಿಯೇ ಇದೊಂದು ಜೊಳ್ಳು ರಚನೆಯೆನಿಸದೆ ಮನಮುಟ್ಟುವ ಘನ ರಚನೆಯಾಗಿದೆ.
Sunitakka, ಒಳ್ಳೆ ಕವಿತೆ
Very nice
ತುಂಬಾ ಚೆನ್ನಾಗಿದೆ ಕವಿತೆ. ಮೇಡಂ
ಋತುಚಕ್ರದ ನಂತರದ ಮಾನಸಿಕ ಒತ್ತಡದಲ್ಲೂ ಮುಂದಿರುವ ದಿನಗಳನ್ನ ಭರವಸೆಯ ಕಂಗಳಿಂದ ಕಾಣುವ ಕವನ.
ಕವಿತೆ ಚೆನ್ನಾಗಿದೆ ಸುನಿತಾಕ್ಕ..
ನನಗನ್ನಿಸತ್ತೆ ಸುನೀತಕ್ಕ, ಒಂದು ಎರಡು ಹೆಡೆದು ಆ ಮಕ್ಕಳು ದೊಡ್ಡವರಾಗ್ತಾ ಹೋದ ಹಾಗೆ ತೊಟ್ಟಿಲು ತೂಗಬೇಕೆನ್ನುವ ಹಂಬಲ ಮತ್ತೆ ಮತ್ತೆ ಕಾಡೋದು ಸುಳ್ಳ ಇರಲಾರದು….ಮತ್ತೆ ನಿಸರ್ಗಮಾತೇನೇ retirement ಕೊಡ್ತಾಳಲ್ಲ ಆಗ ಮತ್ತೊಮ್ಮೆ ಬದುಕಿಬಿಡೆಂದು ಚಾಚುವ ಕೈ…..ಕಾಡತ್ತೆ.ಚೆನ್ನಾಗಿದೆ ಕವಿತೆ