ಕೊನೆಯಲ್ಲಿ

ಕವಿತೆ

ನಂದಿನಿ ಹೆದ್ದುರ್ಗ

ಕಳಚಿಕ್ಕೊಳ್ಳುತ್ತಲೆ ಹೋಗುತ್ತದೆ
ಹೀಗೇ
ಒಂದೊಂದೇ ಒಂದೊಂದೇ ಬಂಧ.

ಬಿಡಿಸಲಾಗದ್ದು ಎನ್ನುವಾಗಲೇ
ಹೊರಡುತ್ತದೆ ಬಿಟ್ಟು

ಕಣ್ಮರೆಯಾಗುವುದೋ
ಕಣ್ಣಳತೆಯಲ್ಲೇ ಇದ್ದೂ
ಬೇಕೆನಿಸದೆ ಹೋಗುವುದೊ
ಕಣ್ಣು ಕೈಯಿಗೆ ನಿಲುಕಿದರೂ
ಎದೆಗೆ ಇಳಿಯದೇ ಹೋಗುವುದೊ
ಬೇಕೆನಿಸಿದರೂ ಝಾಡಿಸಿ
ಹೊರಡುವುದೊ..

ಕಳಚುತ್ತಲೇ ಹೋಗುತ್ತದೆ…
ಇದ್ದಿತೆಂಬುದರ ಕುರುಹು
ಕ್ರಮೇಣ ಇಲ್ಲವಾಗಿ..

ಒಂಟಿ ಕೊಂಡಿಯೊಂದು
ಕೊರಳೆತ್ತಿ‌ ನೋಡುತ್ತಿದೆ
ಈಗ
ಸುತ್ತೆಲ್ಲಾ ಕ್ಷೀಣವಾಗಿ

*************************


2 thoughts on “ಕೊನೆಯಲ್ಲಿ

Leave a Reply

Back To Top