ಸಿದ್ಧಿಸಿತೆನಗೆ ” ಸಿದ್ಧರ ಬೆಟ್ಟ “ಯಾನ

ಸಿದ್ಧಿಸಿತೆನಗೆ ” ಸಿದ್ಧರ ಬೆಟ್ಟ “ಯಾನ

ಪ್ರವಾಸ ಕಥನ ಸಿದ್ಧಿಸಿತೆನಗೆ  -ಸಿದ್ಧರ ಬೆಟ್ಟ ಯಾನ ಚಂದ್ರಮತಿ ಪುರುಷೋತ್ತಮ್ ಭಟ್     ಬಹುದಿನದ ಬಯಕೆ, ನೋಡಲೇ ಬೇಕೆಂಬ ತುಡಿತದ ಜೊತೆಗೆ ನಲವತ್ತರ ಹರೆಯ ದಾಟಾಯ್ತು ಈಗಲೂ ನೋಡದಿದ್ದರೆ ಇನ್ನು ಯಾವಾಗ ನೋಡೋದು ಅನ್ನೋ ಅನಿಸಿಕೆ. ನನ್ನ ಮಗಳು ಹಾಗೂ ಅವಳ ಗೆಳೆಯರು ಬರ್ತೀರ ಆಂಟಿ ಸಿದ್ಧರ ಬೆಟ್ಟಕ್ಕೆ ಅಂದಾಕ್ಷಣ ವೈ ನಾಟ್ ! ಎಂದು ‘ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ‘ ಅಂತ ಹುಂ ಎಂದು ಹೊರಟೇ ಬಿಟ್ಟೆ. […]

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ 1) ವಾತ್ಸಲ್ಯ ತಾಯಿ ಸೆರಗುಅಂಬರವು ನಾಚಿತುವಾತ್ಸಲ್ಯ ಸಿರಿ. 2) ವಿಸ್ಮಿತ ಸುಖ ಕನಸು :ಕಂದಮ್ಮನ ಮೊಗದಿ :ದೇವ ವಿಸ್ಮಿತ. 3) ಚೆಲವು ಇಳೆ ಚೆಲವು :ಹಸಿರಿನ ಸಿರಿಯು,ನೆಮ್ಮದಿ ಬಿಡು. 4) ಮಧು ಮುತ್ತಿನ ಮಧು :ಮತ್ತೇರಿತು ದುಂಬಿಗೆ,ಶೃಂಗಾರ ಮಾಸ 5) ಹೃದಯ ಖಾಲಿ ಆಗಿತ್ತು :ಕನಸಿಲ್ಲದ ಮನ,ಬೆಂದ ಹೃದಯ. 6) ಸೀಮಂತ ಧರೆ ಸೀಮಂತ :ಹಕ್ಕಿಯ ಗಾನ ಸಭೆ,ನಾಚಿದ ಪ್ರಭೆ. 7) ಹೊಂಬಿಸಿಲು ಕಿರುನಗೆಯು :ಹೊಂಬಿಸಿಲು ಬಾಳಿಗೆ,ಸ್ವರ್ಗವು ಇಲ್ಲೇ. 8) ಹೂ ಬನ […]

ಡಾ.ಅಂಬೇಡ್ಕರ್ ವಾದದ ಆಚರಣೆ

ಪುಸ್ತಕ ಸಂಗಾತಿ ಡಾ.ಅಂಬೇಡ್ಕರ್ ವಾದದ ಆಚರಣೆ ಡಾ.ಅಂಬೇಡ್ಕರ್ ವಾದದ ಆಚರಣೆಲೇಖಕರು– ಡಾ.ಸಿ.ಜಿ.ಲಕ್ಷ್ಮೀಪತಿಪುಟಗಳು– 104ಪುಸ್ತಕದ ಬೆಲೆ– 68 ರೂಪಾಯಿಗಳುಪ್ರಕಾಶನ– ಚಾರು ಪ್ರಕಾಶನಅಡ್ರೆಸ್– # 83, ಪ್ರೈಡ್ ಪ್ಲಾಜಾ ಕಾಂಪ್ಲೆಕ್ಸ್, ಆದರ್ಶ ಕಾಲೇಜ್ ಹತ್ತಿರ, 5 ನೇ ಮುಖ್ಯ ರಸ್ತೆ. ಬೆಂಗಳೂರು. ‘ಡಾ.ಅಂಬೇಡ್ಕರ್ ವಾದದ ಆಚರಣೆ’ ಎಂಬ ಪುಸ್ತಕವು,  ಮತ್ತು ಆ ಪುಸ್ತಕ ಬರೆದ ಡಾ.ಸಿ.ಜಿ.ಲಕ್ಷೀಪತಿ ಅವರ ಬಗೆಗೆ ಒಂದಿಷ್ಟು..! ಸಿ.ಜಿ. ಲಕ್ಷ್ಮೀಪತಿ ಅವರು ಸದ್ಯ ಬೆಂಗಳೂರಿನ ವಿ.ಎಚ್.ಸಿ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ನಲ್ಲಿಸಮಾಜಶಾಸ್ತ್ರ ವಿಭಾಗದ […]

ಕಾಡುವ ಹಕ್ಕಿ.

ಕಾಡುವ ಹಕ್ಕಿ ಅಬ್ಳಿ,ಹೆಗಡೆ ಹಾಡು ಹಕ್ಕಿಯೊಂದು  ನಿತ್ಯಕಾಡುತಿದೆ  ‘ಹಾಡು ನೀನು’ಎಂದು.          ಗಂಟಲೊಣಗಿದರೆ         ಕಂಠನುಲಿಯದದು         ಹಾಡಲೇಗೆ ಇಂದು..?    ಮರ್ಮವರಿಯದೆ   ಧರ್ಮ,ಕರ್ಮಗಳ   ನಡುವೆ ಬಂಧಿ ನಾನು.          ಹಾರಲಾಗದಿದೆ         ಭಾರ ರೆಕ್ಕೆಯಿದೆ         ಹೊರಗೆ ಬಂದರೂನು.    ನೋವು,ಹಿಂಸೆಗಳು   ಸುತ್ತ ಕುಣಿಯುತಿವೆ   ಕೊಳ್ಳಿ ದೆವ್ವದಂತೆ.           ಹಸಿರು ಪ್ರಕ್ರತಿಯಾ          ತಂಪು,ಸೊಂಪುಗಳು          ಒಡಲ ಬೆಂಕಿಯಂತೆ.    ಹರಿವನದಿಯಂತೆ   ಬದುಕು ಸರಿಯುತಿದೆ   ಸೆಳವು ಈಜಲಾರೆ.            ಖುಷಿಯ ಬಾನಿನಲಿ           ಹಾಡಿ,ತೇಲುವದು           ಎಂತೋ…?ಹೇಳಲಾರೆ.    ಭಾವ ಬತ್ತಿಹುದುಖುಷಿಯು ಸತ್ತಿಹುದು   ಬರದು ಮಧುರಗೀತೆ.            […]

ಪ್ರೇಮಪತ್ರ

ಪ್ರೇಮಪತ್ರ ಕಂಡಕ್ಟರ್ ಸೋಮು. ಕಿರುಬೆರಳಿನಂತವಳೇ,      ಅಲ್ಲಿ ಗಿಳಿಯೊಂದು ಮಾತನಾಡುತ್ತದೆ, ಆ ಮಾತು ಎಷ್ಟು ಅರ್ಥಗರ್ಭಿತವೆಂದರೆ ಮನುಷ್ಯರ ಮಾತೂ ಕೂಡ ಅಲ್ಲಿ ಅರ್ಥ ಕಳೆದುಕೊಳ್ಳುತ್ತದೆ. ಕಾರಣ ಅದು ಕಾಡಿನಲ್ಲಿದೆ; ನೀನು ನಾಡಿನಲ್ಲಿ ಇರುವೆ!?        ನನ್ನ ಪತ್ರದ ಪ್ರತಿ ಒಕ್ಕಣೆಯಲ್ಲೂ ಹೀಗೆ ನಿನ್ನ ಕಾಲು ಎಳೆಯದಿದ್ದರೆ ನಮ್ಮ ಪ್ರೇಮಕ್ಕೆ ಲವಲವಿಕೆಯಿರುವುದಿಲ್ಲ. ನಿನ್ನ ಮರೆತು ಗಿಳಿಯ ಸಂಗತಿ ಏಕೆ ಹೇಳಿದೆ ಎಂದು ಮುನಿಸೆ? ನಿನ್ನ ಮುನಿಸಿನಲ್ಲೂ ಒಂದು ಚೆಲುವಿದೆ. ಗಿಳಿ ಮುನಿಸಿಕೊಳ್ಳ್ದದಿದ್ದರೂ ಕೊಕ್ಕು ಮಾತ್ರ ಕೆಂಪಗಿದೆ, ನಿನಗೆ ಮುನಿಸು […]

ಕನ್ನಡಾಂಬೆ

ಕವಿತೆ ಕನ್ನಡಾಂಬೆ ಚಂದ್ರಮತಿ ಪುರುಷೋತ್ತಮ್ ಭಟ್ ಕರುನಾಡ ತಾಯೆ ಭುವನೇಶ್ವರೀ ಅಮ್ಮಾ ಕರುಣೇಶ್ವರೀಕರವ ಮುಗಿದು ಕೇಳುವೆನು ಕರುಣಿಸು ಬಾ ಕರುಣಾಮಯೀ ಬಲಗೈಯಲ್ಲಿ ದೀಪ ಹಿಡಿದ ಜ್ಞಾನದಾತೆ ಅಮ್ಮಾ ನೀನುಎಡಗೈಯಲ್ಲಿ ಪತಾಕೆ ಹಿಡಿದ ನ್ಯಾಯದೇವಿ ಅಮ್ಮಾ ನೀನು ಫಲಪುಷ್ಪ ಭರಿತಳಾಗಿ ಗಿರಿಯನೇರಿ ನಿಂತ ಅಮ್ಮಾ ನೀನುನಮ್ಮೆಲ್ಲರ ಪೊರೆಯುತಿರುವ ಅನ್ನದಾತೆ ಅಮ್ಮಾ ನೀನು ಅದೆಂಥ ಸ್ವರ್ಗ ಸುಖವು ಅಮ್ಮಾ ಜನ್ಮ ಕೊಟ್ಟ ನಿನ್ನ ಮಡಿಲುಮೇಲುಕೀಳು ಎಣಿಸದೆ ದಯಾಮಯಿಯಾದ ಅಮ್ಮಾ ನೀನು ಅದೆಷ್ಟು ಅಂದ ಚೆಂದ ನನಗೆ ನಿನ್ನ ಅಮ್ಮಾ ಎಂದು […]

ಗಜಲ್‌

ಗಜಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿ ಧಿಕ್ಕರಿಸಿದವನಿಗಾಗಿ‌ ನೆನೆಯುತ್ತಿರುವೆ ನಾನೇಕೆ ಹೀಗೆಒಂದು ನುಡಿ ಆಡದವನಿಗಾಗಿ ಕೂಗುತ್ತಿರುವೆ ನಾನೇಕೆ ಹೀಗೆ ಬರುವನೆಂದು ಪಾರಿಜಾತ ಹೂಗಳನ್ನು ಹಾಸಿದ್ದೆ ಹಾದಿಗುಂಟಒಳಗೆ ಹೆಜ್ಜೆ ಇಡದವನಿಗಾಗಿ ಕಾಯುತ್ತಿರುವೆ ನಾನೇಕೆ ಹೀಗೆ ಹೊಂಗೆ ಮರದಲ್ಲಿ ದುಂಬಿಗಳ ಚಲ್ಲಾಟ ಕಂಡು ಉದ್ವೇಗಗೊಂಡೆಇರುಳೆಲ್ಲಾ ಅವನಿಗಾಗಿ ಕನವರಿಸುತ್ತಿರುವೆ ನಾನೇಕೆ ಹೀಗೆ ಹಂದರದ ಬಳ್ಳಿಯಲಿ ತುಂಬಿ ನಲಿಯುತಿದೆ ಸಿಹಿ ಬಂಡು ಹೀರುತ್ತಾತುಟಿಗೆ ಮಧು ಹಚ್ಚದವನಿಗಾಗಿ ಭಜಿಸುತ್ತಿರುವೆ ನಾನೇಕೆ ಹೀಗೆ ಒಂಟಿ ಕೋಗಿಲೆ ವಸಂತಾಗಮಕೆ ಸಂತಸದಲಿ ಹಾಡುತಿದೆ” ಪ್ರಭೆ “ಮಿಡಿಯದ ಹೃದಯ ಮಿಲನಕ್ಕಾಗಿ […]

ವಾರದ ಕವಿತೆ

ಹೊಸ್ತಿನ ಹಗಲು ಫಾಲ್ಗುಣ ಗೌಡ ಅಚವೆ ಬಯಲು ಗದ್ದೆಯ ಹೊಸ ಭತ್ತದ ಕದರುರೈತರ ಬೆವರ ಬಸಿಯುವ ಕಯಿಲುಕಂಬಳಕಿಂಪಿನ ಪಾಂಗಿನ ಅಮಲುಹೊಡತಲೆ ಹಗಣದ ಕವಳದ ಸಾಲುಆಚರಿಸುತಿದೆ ಹೊಸ್ತಿನ ಹಗಲು. ನೇಗಿಲ ಮೊನೆಯಲಿ ಸಸಿಬುಡ ಬೇರುಕದರಿನ ನಡುವಲಿ ಗಂಧದ ಹೂವುಮಣ್ಣಲಿ ಹುದುಗಿದ ಎರೆಹುಳ ಪಾಡುಹರಡಿದ ಗಿಣಿಗಳ ಹಾಡಿನ ಜಾಡುಆಚರಿಸುತಿದೆ ಹೊಸ್ತಿನ ಹಗಲು. ಮಣ್ಣಿನ ಬಣ್ಣದ ಮನಸಿನ ತೆವಲುಕೆಂದರಕಿ ಹೂವಿನ ಕಮಾನು ಹೊಸಿಲುಹೂಡುವ ಎತ್ತಿನ ಅಡಸಲ ಕವಲುಹೂನೀರಾಡಿದ ಹೊಸ ಭತ್ತದ ತೆನೆಗಳುಆಚರಿಸುತಿದೆ ಹೊಸ್ತಿನ ಹಗಲು. ಒಳಗಿನ ಅಕ್ಕಿಯ ಮಡಕೆಯ ಕೊರಳುಅಂಗಳದಲ್ಲಿನ ಒನಕೆಯ […]

ಕೊನೆ ಆಗುವ ಮೊದಲು

ಕವಿತೆ ಕೊನೆ ಆಗುವ ಮೊದಲು ಅಕ್ಷತಾ‌ ಜಗದೀಶ ಬಿಸಿಲು‌‌ ಕುದುರೆ ಬೆನ್ನತ್ತಿಓಡಿದೆ ಮನವು ಕಾಲ್ಕಿತ್ತಿಬಯಸಿದ್ದು‌ ಎಲ್ಲಿಯು ಸಿಗದೆ ಹೋಯ್ತುಕಾದ ಜೀವಕೆ ಈಗ ಸುಸ್ತಾಯ್ತು… ಕಾಲವದು‌ ಕಣ್ಮುಂದೆ ಕರಗುತಿದೆಕೈಗೆ ಸಿಲುಕದೆ ಮರೆಯಾಗುತಿದೆಎಲ್ಲವೂ ‌ಬಹುಬೇಗ ಸಾಗುತಿದೆನಾನೇಕೋ ನಿಧಾನವಾದೆನೋ ಎನಿಸುತಿದೆ……. ಎಲ್ಲೋ ಒಂದು ಸಣ್ಣ ‌ಹೊಳಪುಪದೇ ಪದೇ ಅದೇ ಹಳೆ ನೆನಪುಬಾಡಿ ಹೊಗುವ ಮೊದಲೆ ಹೂ..ಮುಡಿ ಸೇರಲಾರದ ನೋವು.. ಮರುಭೂಮಿಯಲ್ಲಿ ಕಾಣಬಹುದೇ ಒರತೆ…ಸಣ್ಣ ಆಸೆ ಇಟ್ಟು‌ ಬರೆದೆ ಈ ಕವಿತೆಕಳಿಸಿ‌ಕೊಡುವೆ ದೇವ ಈ ಬರಹ‌ ನಿನಗೆಹೊಸ‌ ಚಿಲುಮೆ ‌ಉಕ್ಕಲಿ‌ಬಾಳಿಗೆ‌ ಪೂರ್ಣವಿರಾಮ ಇಡುವ […]

ನಾನು ದೀಪ ಹಚ್ಚುತ್ತೇನೆ

ಕವಿತೆ ನಾನು ದೀಪ ಹಚ್ಚುತ್ತೇನೆ ಕಾಡಜ್ಜಿ ಮಂಜುನಾಥ ನಾನು ದೀಪ ಹಚ್ಚುತ್ತೇನೆಮನದ ಕಹಿಗಳು ದಹಿಸಿಹೋಗಲೆಂದು ನಾನು ದೀಪ ಹಚ್ಚುತ್ತೇನೆದ್ವೇಷದ ಯೋಚನೆಗಳುಸುಟ್ಟು ಹೋಗಲೆಂದು ನಾನು ದೀಪ ಹಚ್ಚುತ್ತೇನೆಪ್ರೀತಿಸುವ ಮನಗಳುಹೆಚ್ಚಾಗಲೆಂದು ನಾನು ದೀಪ ಹಚ್ಚುತ್ತೇನೆಜಾತೀಯತೆಯ ಬೀಜಗಳುನಾಶವಾಗಲೆಂದು ನಾನು ದೀಪ ಹಚ್ಚುತ್ತೇನೆಧರ್ಮದ ಹೆಸರಿನಲ್ಲಿ ನಡೆಯುವದೌರ್ಜನ್ಯ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆಬಡವರ ಮನೆಮಗಳ ಮೇಲೆ‌ಅತ್ಯಾಚಾರ ನಿಲ್ಲಲೆಂದು‌ ನಾನು ದೀಪ ಹಚ್ಚುತ್ತೇನೆಧನಿಕರ ದುಡ್ಡಿನ ದರ್ಪಹೊಗೆಯಾಗಿ ಕರಗಲೆಂದು ನಾನು ದೀಪ ಹಚ್ಚುತ್ತೇನೆಉನ್ನತ ಶಿಕ್ಷಣ ಪಡೆದವರು ಮಾಡುವಗುಲಾಮಗಿರಿಯ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆನೊಂದವರಿಗೆ ನ್ಯಾಯಸಿಗಲೆಂದು ನಾನು ದೀಪ […]

Back To Top