ಡಾ.ಅಂಬೇಡ್ಕರ್ ವಾದದ ಆಚರಣೆ

ಪುಸ್ತಕ ಸಂಗಾತಿ

ಡಾ.ಅಂಬೇಡ್ಕರ್ ವಾದದ ಆಚರಣೆ

ಡಾ.ಅಂಬೇಡ್ಕರ್ ವಾದದ ಆಚರಣೆ
ಲೇಖಕರು– ಡಾ.ಸಿ.ಜಿ.ಲಕ್ಷ್ಮೀಪತಿ
ಪುಟಗಳು– 104
ಪುಸ್ತಕದ ಬೆಲೆ– 68 ರೂಪಾಯಿಗಳು
ಪ್ರಕಾಶನ– ಚಾರು ಪ್ರಕಾಶನಅಡ್ರೆಸ್– # 83, ಪ್ರೈಡ್ ಪ್ಲಾಜಾ ಕಾಂಪ್ಲೆಕ್ಸ್, ಆದರ್ಶ ಕಾಲೇಜ್ ಹತ್ತಿರ, 5 ನೇ ಮುಖ್ಯ ರಸ್ತೆ. ಬೆಂಗಳೂರು.

‘ಡಾ.ಅಂಬೇಡ್ಕರ್ ವಾದದ ಆಚರಣೆ’ ಎಂಬ ಪುಸ್ತಕವು,  ಮತ್ತು ಆ ಪುಸ್ತಕ ಬರೆದ ಡಾ.ಸಿ.ಜಿ.ಲಕ್ಷೀಪತಿ ಅವರ ಬಗೆಗೆ ಒಂದಿಷ್ಟು..!

ಸಿ.ಜಿ. ಲಕ್ಷ್ಮೀಪತಿ ಅವರು ಸದ್ಯ ಬೆಂಗಳೂರಿನ ವಿ.ಎಚ್.ಸಿ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ನಲ್ಲಿಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು. ಕನಕಪುರದ ರೂರಲ್ ಕಾಲೇಜು, ಕನ್ನಡ ವಿಶ್ವವಿದ್ಯಾಲಯ ಹಾಗೂ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನಾನುಭವವಿದೆ.

ತುಮಕೂರು ಜಿಲ್ಲೆಯ ಮಧುಗಿರಿಯ ಟಿ.ವಿ.ವಿ. ಕಾಲೇಜಿನಲ್ಲಿ ಪದವಿ ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಂತರ್ ಶಿಸ್ತೀಯ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಮುಗಿಸಿದರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ‌ ಪಡೆದರು.

ಅವರ ಕೃತಿಗಳೆಂದರೆ ಕ್ಯಾಸ್ಟ್ ಕೆಮಿಸ್ಟ್ರಿ, ಚಿತ್ರಲೆ ವೃಕ್ಷ (ಭಾರತದ ಲೈಂಗಿಕತೆಯ ಸಾಂಸ್ಕೃತಿಕ ಕಥನ), ಥಾಯ್  ಲ್ಯಾಂಡ್ ಎಂಬ ಮುಗುಳ್ನಗೆ (ಪ್ರವಾಸ ಕಥನ), ನಿಜ ಭ್ರಮೆಗಳ ರೂಪಕ (ಲೇಖನಗಳ ಸಂಗ್ರಹ), ಮತಾಂತರ ಸತ್ಯಾನ್ವೇಷಣೆ  (ಸಂಪಾದನೆ), ಕರ್ನಾಟಕದ ಸಮಾಜಶಾಸ್ತ್ರ (ಪಿಎಚ್ ಡಿ ಮಹಾಪ್ರಬಂಧದ ಪುಸ್ತಕ ರೂಪ), ಅಂಬೇಡ್ಕರ್ ವಾದದ ಆಚರಣೆ, ಆಧುನಿಕೋತ್ತರ ಮತ್ತು ಮಾರ್ಕ್ಸ್ ವಾದೋತ್ತರ. ಹೀಗೆಯೇ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಸಾಹಿತ್ಯದ ಕೆಲಸದ ಜೊತೆಗೇಗೆನೇ ಜೀವನ ಹೋರಾಟ ಸಾಗಿದೆ..!

# ಈಗ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’ ಕುರಿತು ಚರ್ಚಿಸೋಣ…–

ದಮನಿತರ ಬಿಡುಗಡೆ ಮಾರ್ಗ ಈ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’..!

ಪಾರಂಪರಿಕ ಸಮಾಜಶಾಸ್ತ್ರಜ್ಞರಿಗಿಂತ ವಿಭಿನ್ನವಾದ ಲೋಕದೃಷ್ಟಿಯಲ್ಲಿ ಆಲೋಚಿಸುವ ಚಿಂತಕರಲ್ಲಿ ಒಬ್ಬರಾದ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’ ಎಂಬ ಪುಸ್ತಕ. ಮೊದಲಿಗೇ ವಿಶಿಷ್ಟವಾದ ಕೃತಿ ನೀಡುತ್ತಿರುವ ಡಾ.ಸಿ.ಜಿ.ಲಕ್ಷ್ಮೀಪತಿಯವರು ಮೊದಲಿಗೆ ಪ್ರಸಂಸಾರ್ಹರು.

ಚರಿತ್ರೆಯುದ್ದಕ್ಕೂ ಮತ್ತು ಪ್ರಸ್ತುತ ಸಂದರ್ಭದಲ್ಲೂ ಶೋಷಕರ ಕಬಂಧ ಬಾಹುವಿನಲ್ಲಿ ಸಿಲುಕಿ ನಲಗುತ್ತಿರುವ ದಲಿತರು ಒಂದು ಕಡೆ. ಇನ್ನೊಂದು ಕಡೆ ಹಿಂದುಳಿದ ವರ್ಗದವರು. ಅಲ್ಲದೇ ಮಹಿಳೆಯರು, ದಮನಿತರನ್ನು ಬಿಡುಗಡೆಗೊಳಿಸಲು ಇರುವ ಏಕೈಕ ಮಾರ್ಗ ‘ಅಂಬೇಡ್ಕರ್ ವಾದದ ಕ್ರಿಯಾಚರಣೆ’ಯಾಗಿದೆ.

**************************************

ಆದರೆ ಅಂಬೇಡ್ಕರ್ ವಾದದ ಆಚರಣೆಯನ್ನು ಜನರು ತಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ಅನುಸರಿಸಬೇಕು ಎನ್ನುವುದಕ್ಕೆ ವಾರ್ಗಸೂಚಿಯಾಗಿಯೂ ಆಗಿದೆ ಈ ಪುಸ್ತಕ.

ಅಂಬೇಡ್ಕರ್ ವಾದವು ತಾಂತ್ರಿಕವಾಗಿ ಪಠಣದ ಆಚರಣೆ ಮಾತ್ರವಾಗದೇ ಶೋಷಕರ ಅಂದರೆ ಬ್ರಾಮಣ್ಯ ಪ್ರಜ್ಞೆಯ ವಿರುದ್ಧ ಸತತವಾಗಿ ಸೆಣಸಾಡುವ ಮೂಲಕ ದಮನಿತರ ಪರವಾದ ಆಶಯಗಳನ್ನು ಈಡೇರಿಸುವಲ್ಲಿ ಮತ್ತು ಶೋಷಣೆಯಿಂದ ಬಿಡುಗಡೆಗೊಳಿಸುವಲ್ಲಿ ಅಂಬೇಡ್ಕರ್ ವಾದದ ತಿಳಿವು ಈ ಪುಸ್ತಕದಲಿದೆ ಅದರ ತಿಳುವು.

ಅರವು ಮತ್ತು ಕ್ರಿಯಾಶೀಲತೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುವ ಪ್ರಣಾಳಿಕೆಯಂತಿದೆ ಈ ಅಂಬೇಡ್ಕರ್ ವಾದದ ಪುಸ್ತಕವು.

ಕಿರಿದರಲ್ಲಿ ಹಿರಿದನ್ನು ಹೇಳುವ ಈ ಹೊತ್ತಿಗೆಯನ್ನು ಪ್ರತಿಯೊಬ್ಬರೂ ಓದಲೇಬೇಕಾದ ಮಹತ್ವದ ಸಂಗತಿಗಳನ್ನು ಒಳಗೊಂಡಿದೆ ಈ ಪುಸ್ತಕ.

ಮನುವಾದ ಸಂಸ್ಕೃತಿಯ ಪ್ರಣೀತ ಬ್ರಾಹ್ಮಣ್ಯಶಾಹಿಯ ಆಕ್ರಮಣಕಾರಿತನವನ್ನು ಹಿಮ್ಮೆಟ್ಟಿಸುವ, ಅದರಿಂದ ಬಿಡುಗಡೆಗೊಳ್ಳುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ವಾದ ಒಂದು ಅಸ್ತ್ರವಾಗಬಲ್ಲದು ಎನ್ನುವುದು ಇಲ್ಲಿನ ಬರಹಗಳೆಲ್ಲವೂ ವಿವರಿಸುತ್ತವೆ.

ಅಷ್ಟೇ ಅಲ್ಲದೇ ಡಾ.ಸಿ.ಜಿ.ಲಕ್ಷ್ಮೀಪತಿಯವರು ‘ಅಂಬೇಡ್ಕರ್ ವಾದದ ಆಚರಣೆ’ಯು ಮಾರ್ಷಲ್ ಆರ್ಟ್ಸ್ ಇದ್ದಹಾಗೆ. ಎದುರಾಳಿಯನ್ನು ಮಣಿಸುವಾಗ ಒಂದೇ ಒಂದು ತಂತ್ರ ಬಳಸುದಿಲ್ಲ ಅಂಬೇಡ್ಕರ್ ವಾದವು ಎಂದು ವಿವರಿಸುತ್ತಾರೆ ಡಾ.ಸಿ.ಜಿ.ಲಕ್ಷ್ಮೀಪತಿ ಅವರು.

ಮೂರು ಭಾಗಗಳಲ್ಲಿ ಹರಡಿಕೊಂಡಿರುವ ಈ ಕೃತಿಯ ಮೂದಲ ಭಾಗದಲ್ಲಿ ಅಂಬೇಡ್ಕರ್ ವಾದದ ವಿವರಣೆ. ಸೈದ್ಧಾಂತಿಕತೆಯನ್ನು ವಿವರಿಸಿದರೆ ಎರಡನೇ ಭಾಗದಲ್ಲಿ ಹೆಸರಾಂತ ಚಿಂತಕರಾದ ಪಾರ್ವತೀಶ್ ಬಿಳಿದಾಳೆ ಅವರ ಹಿನ್ನುಡಿ ಇದೆ. ಸುದೀರ್ಘವಾದ ಹಿನ್ನುಡಿಯು ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಈ ಬರಹದ ಆಳ-ಅಗಲ ಮತ್ತು ವೈಶಿಷ್ಟ್ಯವನ್ನು ಬಹಳ ಗಂಭೀರವಾಗಿ ಬರೆದ ಭಾಷ್ಯವಾಗಿದೆ. ಮತ್ತೂ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಆಲೋಚನೆಯ ಮುಂದುವರಿಕೆಯೂ ಆಗಿದೆ. ಹಾಗಾಗಿ ಕೃತಿಯನ್ನು ಪ್ರತಿಯೊಬ್ಬರೂ, ಅದರಲ್ಲೂ ಯುವಜನತೆ ಓದಲೇಬೇಕಾದ ಕೃತಿಯಾಗಿದೆ.

ಮೂರನೇ ಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ಆಕಾಶದೆತ್ತರಕ್ಕೆ ಬೆಳೆದ, ಆಲದ ಮರದಂತೆ ಆವರಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಭವ, ಅಧ್ಯಯನದ ಅಘಾದತೆ, ಗಂಭೀರತೆ, ವಿಸ್ತಾರ, ಓದಿನ ವ್ಯಾಪಕತೆಯ ಹರವು ಎಂಥದ್ದು ಎನ್ನುವುದನ್ನು ತಿಳಿಯಪಡಿಸುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ತಮ್ಮ ಬರಹದಲ್ಲಿ ದಾಖಲಿಸಿದ ಉಲ್ಲೇಖಗಳ ಮಾಹಿತಿಯನ್ನು ನೀಡಿರುವುದು ಅವರ ಘನತೆಯನ್ನೂ ಮತ್ತಷ್ಟೂ ಹೆಚ್ಚಿಸುತ್ತದೆ..!

ಎಲ್ಲರೂ ಕೊಂಡು ಓದಿ ಕ್ರಿಯಾಶೀಲ ಆಚರಣೆಗೆ ಕಿಂಚಿತ್ತಾದರೂ ತೊಡಗಿಸಿಕೊಂಡರೆ ಆ ಮೂಲಕ ಮೂಲಕ ಅಂಬೇಡ್ಕರ್ ಅವರ ತಿಳಿವಿಗೂ, ಕೃತಿಕಾರರ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಬರಹಕ್ಕೂ ಗೌರವ ತಂದಂತಾಗುತ್ತದೆ ಅಂತ ಹೇಳುತ್ತಾ ಈ ವಿಮರ್ಶಾ ಬರಹ ಮುಗಿಸುತ್ತೇನೆ…

******************************

ಕೆ.ಶಿವು.ಲಕ್ಕಣ್ಣವರ

One thought on “ಡಾ.ಅಂಬೇಡ್ಕರ್ ವಾದದ ಆಚರಣೆ

  1. ನಾನು ಈ ಪುಸ್ತಕವನ್ನು ಓದಿದ್ದೇನೆ.ತುಂಬಾ ಚೆನ್ನಾಗಿದೆ ಸರ್ ಅವರ ಬರಹ. ಅದರಲ್ಲಿ ಸಾಮಾಜಿಕ ಬಂಡವಾಳದ ಬಗ್ಗೆ ನನಗೆ ತುಂಬಾ ಇಷ್ಟ ಆಯಿತು. ನಿಮ್ಮ ವಿಮರ್ಶಾ ಬರಹ ತುಂಬಾ ಚೆನ್ನಾಗಿದೆ ಸರ್. ಇನ್ನೊಮ್ಮೆ ಬುಕ್ ಓದಬೇಕು ಅನಸ್ತೀದೆ ಸರ್

Leave a Reply

Back To Top