ಕರುಣಾಳು ಬಾ ಬೆಳಕೆ
ಜ್ಞಾನದ ಸುದೀಪ ಹೊತ್ತಿಸಿ
ಅಜ್ಞಾನದ ತಮವ ಓಡಿಸಿದ
ಕರುಣಾಳು ಬೆಳಕು ಬುದ್ಧ
ಮತ್ತೊಮ್ಮೆ ಅವತರಿಸಿ ಬಾ
ಬುದ್ಧ ಪೂರ್ಣಿಮೆ
ತನ್ನ 29ನೇ ವಯಸ್ಸಿನಲ್ಲಿಯೇ ಸತ್ಯವನ್ನು ಹುಡುಕುತ್ತಾ ಪ್ರಪಂಚ ಪರ್ಯಟನೆ ಕೈಗೊಂಡ ಮಹಾನ್ ವ್ಯಕ್ತಿ ಬುದ್ಧ. ಬಡವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವನು. ಮೋಕ್ಷ ಸಾಧಿಸಲು ಕರುಣೆ ಮತ್ತು ಶಾಂತಿಯ ಮಾರ್ಗದಲ್ಲಿ ಸಾಗಬೇಕು ಎಂದು ಲೋಕಕ್ಕೆ ಸಾರಿದಾತ.
‘ಸ್ಟ್ರಗಲ್ ಫಾರ್ ಬರ್ತ್’, ‘ಸ್ಟ್ರಗಲ್ ಫಾರ್ ಎಗ್ಸಿಸ್ಟೆನ್ಸಿ’ಯ ಜೊತೆಯಲ್ಲಿ ಈಗ ಮಗಳು, ಸೊಸೆ, ಅಕ್ಕತಂಗಿ, ಅತ್ತಿಗೆ-ನಾದಿನಿ, ಹೆಂಡತಿ, ಅಮ್ಮನ ಪಾತ್ರಗಳನ್ನು ನಿರ್ವಹಿಸುತ್ತಿರುವ ಬಹಳ ಹೆಣ್ಣುಮಕ್ಕಳಿಗೆ ‘ಆದರ್ಶ ಗೃಹಿಣಿ’ಯ ಕಾಲ್ಪನಿಕ ಚೆಕ್ ಲಿಸ್ಟ್ ಗಳಲ್ಲಿನ ಮಾದರಿಗಳಿಗೆ ಒಗ್ಗಿಕೊಳ್ಳುವುದು ಬಹಳ ತ್ರಾಸದಾಯಕ.
ಬಾಗಿಲು ಮುಚ್ಚಿದಾಗ
ಕವಿತೆ ಬಾಗಿಲು ಮುಚ್ಚಿದಾಗ ಅಬ್ಳಿ,ಹೆಗಡೆ ಗಟ್ಟಿಮುಟ್ಟಾದ ಬಾಗಿಲಿಗೆ, ಸುಂದರ,ಕಲೆಯಚಿತ್ತಾರ. ..ಕದಮುಚ್ಚಿ,ಚಿಲಕ ಹಾಕಿದರೂ ಅಭದ್ರ.ಮುರಿಯಲೂ ಬಹುದು ಸೋಲಿನ ‘ಭೂತ’ಗಳು. ಒಳಬರುವ ಹೆದರಿಕೆ,ರಾತ್ರಿ, ಬಾನಂಗಳದಲ್ಲಿ ಆಡುವ- ಮಕ್ಕಳ ತುಂಟಾಟಕ್ಕೆ ಸೋತು, ಹೈರಾಣಾದ, ಅಸಹಾಯಕ ತಾಯಿ,ಚಂದ್ರ- ಒಡೆದು,ಪುಡಿ,ಪುಡಿಯಾಗಿಸಿ, ಒಳಬರಬಹುದು ಚಿಲಕ- ವಿದ್ದರೂ.ಕಣ್ಣಕೋರೈಸುವ, ಸೂರ್ಯನ ಪ್ರಖರ ತೇಜ- ದೆದುರು,ಕೈಕಟ್ಟಿ ಕುಳಿತ, . ಕಳಾಹೀನ ಲಾಂದ್ರ. ಅಭೇದ್ಯವಾದರೂ,ಭೇದಿಸಬಹುದು, ಗಟ್ಟಿಮನಸ್ಸುಗಳ,ಹ್ರದಯಗಳ. […]
ಪರಿಸರ ಯೋಧ ಸುಂದರಲಾಲ್ ಬಹುಗುಣ..!
ಕೊರೋನ ಅಬ್ಬರದಲ್ಲಿ ಇಂತಹ ಮಹಾನ್ ಚೇತನವನ್ನು ಕಳೆದುಕೊಂಡಿರುವುದು ನಮ್ಮ ದೌರ್ಭಾಗ್ಯವೇ ಸರಿ. ಅವರ ದೇಹಕ್ಕೆ ಸಾವಾಗಿರಬಹುದು. ಆದರೆ ಅವರು ಹಾಕಿಕೊಟ್ಟ ಪರಿಸರ ಚಳವಳಿಯ ಕಾವು ನಿರಂತರವಾಗಿರುತ್ತದೆ.
ಮತ್ತೆ ಹುಟ್ಟಿ ಬಾ ಬುದ್ದ
ಕವಿತೆ ಮತ್ತೆ ಹುಟ್ಟಿ ಬಾ ಬುದ್ದ ಅಭಿಜ್ಞಾ ಪಿ ಎಮ್ ಗೌಡ ಅಜ್ಞಾನವೆಂಬ ಕಗ್ಗತ್ತಲ ನಾಡಲಿಬರೀ ಬೆತ್ತಲೆಯಬೇತಾಳಗಳದ್ದೆ ಸದ್ದುಗದ್ದಲ….ಸ್ವಾರ್ಥವೆಂಬ ಪೈಶಾಚಿಕ ಜಗದೊಳಗೆಭ್ರಷ್ಟತೆಯ ತಿಮಿಂಗಲಗಳೆಒದ್ದಾಡುತಿವೆ ಆಸೆಯೆಂಬಐಭೊಗದ ಲಾಲಸೆಯೊಂದಿಗೆಝಣಝಣ ಕಾಂಚಾಣದವೇಷತೊಟ್ಟು.!ನಿನ್ನಾದರ್ಶಕೆವಿರುದ್ಧ ಪಣತೊಟ್ಟು ನಿಂತಿಹ ನಾಡಿಗೆಮತ್ತೆ ಹುಟ್ಟಿ ಬರುವೆಯಾ ಬುದ್ಧ.?….. ನೀ ಹೇಳಿದೆ ಬುದ್ಧ ಗುರುವೆಂದರೆಬರಿ ವ್ಯಕ್ತಿಯಲ್ಲ ಶಕ್ತಿಯೆಂದು.!ಇಂದು ಆ ವ್ಯಕ್ತಿಗೆಬೆಲೆಯು ಇಲ್ಲ ನೆಲೆಯು ಇಲ್ಲ.!ಮುಂದೆ ಗುರಿಯೂ ಇಲ್ಲಗುರುವಿನಾಶೀರ್ವಾದವೂ ಇಲ್ಲದೆಸಾಗುತಿಹ ಹಿಂಡು ಅಹಂನಮದವೇರಿದ ಸಲಗಗಳಂತಾಗಿದೆ.!ಅತಿಯಾಸೆಯ ಫಲಶೃತಿಧರಣಿಯೊಡಲ ಗರ್ಭಸೀಳಿಅಜ್ಞಾನದ ಅಮಲಲಿಸದಾ ತೂಕಡಿಸುತಿಹ ನಾಡಿಗೆನೀ ಮತ್ತೆ ಹುಟ್ಟಿ ಬರುವೆಯಾ ಬುದ್ಧ.!… ನಿನ್ನೆಯ ಆದರ್ಶಗಳು ಸಂದೇಶಗಳುಭಾಷಣಕಾರನ […]
ಶಾಹು ಮಹಾರಾಜ್ ಎಂಬ ಜೀವಪರ ರಾಜ
ಲೇಖನ ಶಾಹು ಮಹಾರಾಜ್ ಎಂಬ ಜೀವಪರ ರಾಜ ಆಶಾ. ಎಸ್ ಶಾಹು ಮಹಾರಾಜರು ಹುಟ್ಟಿದ್ದು 1874 ಜುಲೈ 26ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್‌ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ಶಿವಾಜಿಯವರ ಗೌರವ ಪದವಿಯಾದ ‘ಛತ್ರಪತಿ’ ಬಿರುದು ಮಹಾರಾಜ ಶಾಹುರವರಿಗೆ ಸ್ವಾಭಾವಿಕವಾಗಿ ಸಂದಿತು. ಛತ್ರಪತಿ ಶಾಹು ಮಹಾರಾಜ್ ಹುಟ್ಟಿದ ಊರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್. ಸಾಕುತಾಯಿ […]
ಮಹಾಪಯಣಿಗ
ಕವಿತೆ ಮಹಾಪಯಣಿಗ ಡಾ. ಗುರುಸಿದ್ಧಯ್ಯಾ ಸ್ವಾಮಿ ಚೀನಾದ ಮೆನ್-ಪಾಪ್-ಕು ಹಳ್ಳಿಯ ಕುವರಯುವನಾಗೆ ಬೌದ್ಧನಾದ ಯುವಾನ್ ಚಾಂಗ್ಭಾರತದ ಬುದ್ಧ ನಿಧಿ ಕೈ ಮಾಡಿ ಕರೆಯಲುಬುದ್ಧ ನಾಡಿನತ್ತ ಅಡಿ ಇಟ್ಟ ಮಹಾಪಯಣಿಗ ಊಹಿಸಲಾಗಿದ ಕಷ್ಟಗಳ ಬೆನ್ನೇರಿ ಹೊರಟಕುದುರೆ ಒಂಟೆ ಹೇಸರಗತ್ತೆಗಳನೇರಿ ನಡೆದಕಾಲ್ನಡಿಗೆಯಲ್ಲೂ ದಾಟಿ ಮುನ್ನಡೆದ ಧೀರ ಮರುಭೂಮಿ ಹಿಮ ಪರ್ವತ ಗಿರಿಕಂದರಗಳ ಹರ್ಷ ತುಂಬಿತವನಿಗೆ ಹರ್ಷವರ್ಧನನ ಭೆಟ್ಟಿಸಂದರ್ಶಿಸಿದ ಹತ್ತು ಹಲವು ಬೌದ್ಧ ಪೀಠಗಳಓದಲು ಕಲಿತ ಸಂಸ್ಕೃತ ಪಾಲಿ ಭಾಷೆಗಳಸಂಗ್ರಹಿಸಿದ ಅನುವಾದಿಸಿದ ಹಸ್ತಪ್ರತಿಗಳ ಕಪಿಲವಸ್ತು ಪಾಟಲಿಪುತ್ರ ನಾಲಂದಾಗಳಿಗೆಭೆಟ್ಟಿ ಇತ್ತ ನಾಗಾರ್ಜುನ ಕೊಂಡಾದಿಗಳಿಗೆಕಾಂಚಿ […]
ಮೌಲ್ಯಗಳ ಕಡೆಗಾಣಿಸುವ ಮನಸಿಗೆ ಸರಿ- ತಪ್ಪುಗಳ ವಿವೇಚನೆ ಇರುವುದಿಲ್ಲ.ಸರಿ — ತಪ್ಪುಗಳ ವಿವೇಚನೆಯಿಲ್ಲದ ಬದುಕು ತಾನೂ ಬೆಳಗದು ಇತರರ ಬದುಕನ್ನೂ ಬೆಳಗಿಸದು.
ಅಂಬೇಡ್ಕರ್
ಆತ್ಮ ಚರಿತ್ರೆ ಬರೆಯಲು ಸಮಯ ಎಲ್ಲಿದೆ?’ ಎಂಬುದು ಅಂಬೇಡ್ಕರ್ ಅವರ ಬಗೆಹರಿಯದ ಪ್ರಶ್ನೆಯಾಗಿತ್ತು. ‘ನನ್ನ ಜನರಿಗೊಂದು ಮಾತೃಭೂಮಿ ಇಲ್ಲ’ ಎಂದ ಬಾಬಾಸಾಹೇಬರು,ಮಾತು ಸೋತ ಎಲ್ಲರಿಗೂ ಮಾತೃಭೂಮಿಯ ಹಕ್ಕು ಕೊಟ್ಟವರು, ಅವರು ಬರೆದದ್ದೆಲ್ಲ ಆತ್ಮಚರಿತ್ರೆಯೇ ಆದೀತು.