ಲೇಖನ
ಶಾಹು ಮಹಾರಾಜ್ ಎಂಬ
ಜೀವಪರ ರಾಜ
ಆಶಾ. ಎಸ್
ಶಾಹು ಮಹಾರಾಜರು ಹುಟ್ಟಿದ್ದು 1874 ಜುಲೈ 26ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್‌ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ಶಿವಾಜಿಯವರ ಗೌರವ ಪದವಿಯಾದ ‘ಛತ್ರಪತಿ’ ಬಿರುದು ಮಹಾರಾಜ ಶಾಹುರವರಿಗೆ ಸ್ವಾಭಾವಿಕವಾಗಿ ಸಂದಿತು.
ಛತ್ರಪತಿ ಶಾಹು ಮಹಾರಾಜ್ ಹುಟ್ಟಿದ ಊರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್. ಸಾಕುತಾಯಿ ಆನಂದಿಬಾಯಿ. ತಾತ ಕಾಗಲ್ ಗ್ರಾಮದ ಪ್ರಸಿದ್ದ ವ್ಯಕ್ತಿ ಯಶವಂತರಾವ್ ಘಾಟ್ಗೆ. ಪತ್ನಿ ಲಕ್ಷೀಬಾಯಿ. ಮಕ್ಕಳು ರಾಧಾಬಾಯಿ, ೩ನೇ ರಾಜಾರಾಮ್, ಶ್ರೀಮಾನ್ ಮಹಾರಾಜಕುಮಾರ್ ಶಿವಾಜಿ ಮತ್ತು ರಾಜಕುಮಾರಿ ಅವುಬಾಯಿ. ಇವರು ವಿದ್ಯಾಭ್ಯಾಸವನ್ನು ರಾಜಕೋಟೆಯ ರಾಜಕುಮಾರ್ ಕಾಲೇಜಿನಲ್ಲಿ ಮಾಡಿದರು.
ಇವರು ಮೂಲತಃ ಕುಣುಬಿ(ಕುರುಬ) ಸಮುಧಾಯಕ್ಕೆ ಸೇರಿದವರಾಗಿರುತ್ತಾರೆ. ಕೊಲ್ಲಪುರದ ಮಹಾರಾಣಿ ಆನಂಧಿಬಾಯಿರವರು ಮಾರ್ಚ್ 11, 1884ರಂದು ಶಾಹುರವರನ್ನು ದತ್ತು ಸ್ವೀಕಾರ ಮಾಡಿಕೊಳ್ಳುತ್ತಾರೆ.
ಮಹಾರಾಜರ ಮೀಸಲಾತಿಯ ವಿಚಾರವನ್ನು ಬಹುತೇಕ ಬ್ರಾಹ್ಮಣರು ವಿರೋಧ ಮಾಡುತ್ತಿರುತ್ತಾರೆ, ಬೇಸೆತ್ತ ಕೆಲವು ಗೂಂಡಗಳಿಂದ ಮಹಾರಾಜರನ್ನು ಕೊಲೆ ಮಾಡುವ ಪ್ರಯತ್ನವು ನಡೆಯುತ್ತದೆ. ಶಾಹುರವರಿದ್ದ ರೈಲಿಗೆ ಬಾಂಬನ್ನು ಸಹ ಇಡಲಾಗುತ್ತದೆ ಆದರೆ ಆ ಕೊಲೆಯ ಪ್ರಯತ್ನವು ವಿಫಲವಾಗಿಬಿಡುತ್ತದೆ.
ಒಮ್ಮೆ ಮಹಾರಾಜರು ಅರಮನೆಯ ಆವರಣದಲ್ಲಿ ಗಾಳಿ ಸಂಚಾರ (walking) ಮಾಡುತ್ತಿರುತ್ತಾರೆ.
ಆ ಸಮಯದಲ್ಲಿ ಗಣಪತಿರಾವ್ ಎಂಬ ಬ್ರಾಹ್ಮಣ ವಕೀಲ ಶಾಹುರವರನ್ನು ಕಾಣಲು ಬರುತ್ತಾರೆ ಮೀಸಲಾತಿಯ ಬಗ್ಗೆ ಚರ್ಚೆ ಮಾಡುತ್ತಾ ಅರ್ಹತೆಯಿಲ್ಲದವರಿಗೆಲ್ಲಾ ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಹಾಗೂ ಎಲ್ಲಾ ರಂಗಗಳಲ್ಲೂ ನೀವು ಮೀಸಲಾತಿ ಕೊಟ್ಟರೆ ಪ್ರತಿಭೆಗೆ ದಕ್ಕೆಯುಂಟಾಗುವುದಿಲ್ಲವೇ? ಎಂದು ಮಹಾರಾಜರನ್ನು ಪ್ರಶ್ನಿಸುತ್ತಾನೆ.
ಆಗ ಶಾಹು ಮಹಾರಾಜರು ಓ ನಿಮಗೆ ಆ ರೀತಿ ಅರ್ಥವಾಗಿದೆಯೇ ಬನ್ನಿ ನನ್ನ ಜೊತೆ ಎಂದು ಆ ವಕೀಲನನ್ನು ಕರೆದುಕೊಂಡು ಸಂಚಾರ ಮಾಡುತ್ತಾ ಮಾಡುತ್ತಾ ಅರಮನೆಯ ಆವರಣದಲ್ಲಿ ಕುದುರೆಗಳನ್ನು ಕಟ್ಟಿರುವ ಜಾಗಕ್ಕೆ ತಲುಪುತ್ತಾರೆ ಅಲ್ಲಿ ಕುದುರೆಗಳನ್ನು ಗುಂಪು ಗುಂಪುಗಳಾಗಿ ಮಾಡಿ ಮೇವನ್ನು ಹಾಕಲಾಗಿರುತ್ತದೆ. ಇದನ್ನು ಗಮನಿಸಿದ ಮಹಾರಾಜರು ಯಾರಲ್ಲಿ ಈ ಕುದುರೆಗಳನ್ನು ಕಟ್ಟಿದವರು ಎಂದಾಗ ಸ್ಥಳದಲ್ಲೇ ಇದ್ದ ಕುದುರೆಗಳನ್ನು ನೋಡಿಕೊಳ್ಳುವವನು ನಾನೇ ಪ್ರಭು ಎನ್ನುತ್ತಾನೆ.
ಆಗ ಮಹಾರಾಜರು ಅವನನ್ನು “ಏನಯ್ಯ ನಿನಗೆ ಬುದ್ಧಿ ಇದೆಯಾ? ಕುದುರೆಗಳನ್ನು ಏಕೆ ಈ ರೀತಿ ಗುಂಪುಗುಂಪುಗಳನ್ನಾಗಿ ವಿಂಗಡನೆ ಮಾಡಿ ಬೇರೆ ಬೇರೆ ಕಡೆ ಮೇವನ್ನಕಿದ್ದೀಯಾ? ಎಲ್ಲಾ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬಹುದಾ ಗಿತ್ತಲ್ಲವೇ? ಎಂದು ಪ್ರಶ್ನಿಸಿ ಜೊತೆಯಲ್ಲಿದ್ದ ವಕೀಲನನ್ನು ಕೇಳುತ್ತಾರೆ ಗಣಪತಿರಾವ್ ರವರೇ ನಾನು ಕೇಳಿದ್ದು ಸರಿ ತಾನೆ? ಎಂದಾಗ ಆ ವಕೀಲ ಹೌದು ಮಹಾರಾಜರೇ ನೀವು ಕೇಳಿದ್ದು ಸರಿಯಾಗಿದೆ.
ಅವನು ಆ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬೇಕಿತ್ತು ಎನ್ನುತ್ತಾನೆ. ಆಗ ಸೇವಕನು ಮಹಾರಾಜರ ಪ್ರಶ್ನೆಗಳನ್ನು ಉದ್ದೇಶಿಸಿ “ಮಹಾರಾಜರೇ ಈ ಕುದುರೆಗಳಲ್ಲಿ ಕೆಲವು ವಯಸ್ಸಾಗಿರುವ ಕುದುರೆಗಳಿವೆ, ಗಾಯಗಳಾಗಿ ಪೆಟ್ಟು ಮಾಡಿ ಕೊಂಡಿರುವ ಕುದುರೆಗಳಿವೆ, ಸಣ್ಣ ಪ್ರಾಯದ ಕುದುರೆಗಳಿವೆ ಹಾಗೂ ದಷ್ಟಪುಷ್ಟವಾದ ಬಲಿಷ್ಟವಾಗಿರುವ ಕುದುರೆಗಳಿವೆ ಈ ಎಲ್ಲಾ ಕುದುರೆಗಳನ್ನು ಒಂದೇ ಕಡೆ ಸೇರಿಸಿ ಮೇವನ್ನಾಕಿದರೆ ಯಾವ ಕುದುರೆಗಳಿಗೆ ಹೆಚ್ಚು ಶಕ್ತಿ ಇದೆಯೋ ಅಂದರೆ ದಷ್ಟಪುಷ್ಟವಾದ ಕುದುರೆಗಳು ಮೇವೆಲ್ಲಾ ತಿಂದು ಬಿಡುತ್ತವೆ. ಆಗ ವಯಸ್ಸಾದ ಕುದುರೆಗಳಿಗೆ, ಗಾಯಗಳಾಗಿರುವ ಕುದುರೆಗಳಿಗೆ, ಸಣ್ಣ ಪ್ರಾಯದ ಕುದುರೆಗಳಿಗೆ ಮೇವು ಸಿಗದೇ ದುರ್ಬಲವಾಗಿ ಹಸಿವಿನಿಂದಲೇ ಸತ್ತು ಹೋಗುತ್ತವೆ.
ಆದ್ದರಿಂದ ವಯಸ್ಸಾದ ಕುದುರೆಗಳಿಗೆ ಒಂದು ಕಡೆ, ಸಣ್ಣ ಪ್ರಾಯದ ಕುದುರೆಗಳಿಗೆ ಒಂದು ಕಡೆ, ಗಾಯಗೊಂಡಿರುವ ಕುದುರೆಗಳಿಗೆ ಒಂದು ಕಡೆ, ಬಲಿಷ್ಟ ಕುದುರೆಗಳಿಗೊಂದು ಕಡೆ ಮೇವನ್ನಾಕಿದ್ದೇನೆ ಆಗ ಎಲ್ಲಾ ಕುದುರೆಗಳಿಗೂ ಮೇವು ಸಿಗುತ್ತದೆ” ಎಂದು ಉತ್ತರಿಸುತ್ತಾನೆ. ಆಗ ಆ ಬ್ರಾಹ್ಮಣ ವಕೀಲನಿಗೆ ಮೀಸಲಾತಿಯ ಬಗ್ಗೆ ಅರ್ಥವಾಗಿ “ಮಹಾರಾಜರೇ ದಯವಿಟ್ಟು ಕ್ಷಮಿಸಿ ಈಗ ನಿಮ್ಮ ಮೀಸಲಾತಿಯ ಬಗ್ಗೆ ನನಗೆ ಸಂಪೂರ್ಣವಾಗಿ ಅರ್ಥವಾಯಿತೆಂದು” ಅಲ್ಲಿಂದ ಹೊರಟುಹೋಗುತ್ತಾನೆ.
********************
ಸೊಗಸಾದ ಪ್ರಸ್ತುತಿ… ಇಂತಹ ವಿಚಾರಗಳ ಕುರಿತು ಮತ್ತಷ್ಟು ಬರೆಯಿರಿ.
ಅದ್ಭುತ ಅದ್ಭುತ
ಜೂನ್ 26 ಶಾಹು ಮಹಾರಾಜ್ ಜನ್ಮದಿನ
ನೀವು ಜುಲೈ 26 ಎಂದು ಬರೆದಿದ್ದೀರಿ
ಜೂಲೈ 26 ಸರಿಯಾದ ಜನ್ಮ ದಿನಾಂಕ.
Google ನಲ್ಲಿ ತಪ್ಪು ಮಾಹಿತಿ ಇದೆ.