ಅಪ್ಪು ನೆನಪಲ್ಲಿಷ್ಟು ಕವಿತೆಗಳು
ಅಪ್ಪು ನೆನಪಲ್ಲಿಷ್ಟು ಕವಿತೆಗಳು ಗಜಲ್ ನಾನೊಂದು ಪ್ರಶ್ನೆ ಕೇಳುವೆ ಸರಿ ಉತ್ತರ ಹೇಳುವೆಯೇನು ವಿಧಿಯೇಅನ್ಯಾಯದ ಪರಮಾವಧಿ ಮೀರಿದ ಕಾರಣ ತಿಳಿಸುವೆಯೇನು ವಿಧಿಯೇ ಎಲ್ಲಿಂದ ಕಲಿತಿರುವೆ ಗಾಜಿನ ಮನೆಗೆ ಕಲ್ಲು ಹೊಡೆಯುವ ಕೆಟ್ಟ ಕಸುಬುಜೀವ ಜೀವನದ ಜೊತೆಗಿನ ನಿನ್ನ ಚೆಲ್ಲಾಟಕೆ ಕೊನೆಯಿಲ್ಲವೇನು ವಿಧಿಯೇ ದೊಡ್ಡ ಮನೆಯ ಬೆಳಕಿನದೇನು ತಪ್ಪು ಹೇಳು ನಿನ್ನ ದುಷ್ಟ ಕಣ್ಣು ಕುಕ್ಕಿದರೆತಪ್ಪು ಒಪ್ಪು ಒರೆಗೆ ಹಚ್ಚಿ ನಿನ್ನ ನೀನು ಸಂತೈಸಿ ಕೊಳ್ಳಬಾರದಿತ್ತೇನು ವಿಧಿಯೇ ಗೊತ್ತಲ್ಲ ಒಂದಗುಳೂ ಹೆಚ್ಚು ಕಡಿಮೆ ಇಲ್ಲದಂತೆ ತೀರುತ್ತದೊಮ್ಮೆ ಈ ಮಣ್ಣ […]
ದಾರಾವಾಹಿ ಆವರ್ತನ ಅದ್ಯಾಯ-40 ಹೇಮಚಂದ್ರ ಗುರೂಜಿಯ ಕೋಣೆಯಿಂದ ಹೊರಗೆ ಬಂದ ಮೇಲೆ ಅಣ್ಣಪ್ಪ, ಸುಮಿತ್ರಮ್ಮ ಮತ್ತು ರಾಧಾಳನ್ನು ಒಳಗೆ ಕರೆದ. ಅಷ್ಟೊತ್ತಿಗೆ ಗುರೂಜಿಯವರು ಧ್ಯಾನ ಭಂಗಿಯಲ್ಲಿ ಕುಳಿತಿದ್ದವರು ಸುಮಿತ್ರಮ್ಮನನ್ನು ಕಂಡು ಎಚ್ಚೆತ್ತವರು, ‘ಬನ್ನಿ ಸುಮಿತ್ರಮ್ಮ ಇನ್ನೇನು ವಿಷಯ…?’ ಎಂದರು ನಗುತ್ತ. ‘ನಮಸ್ಕಾರ ಗುರೂಜಿ… ವಿಶೇಷ ಏನೂ ಇಲ್ಲ. ಆದರೆ ಹೊಸದೊಂದು ತಾಪತ್ರಯ ವಕ್ಕರಿಸಿದೆ. ಇವಳು ರಾಧಾ ಅಂತ. ನಮ್ಮ ನೆರೆಮನೆಯವಳು’ ಎಂದು ಪರಿಚಯಿಸಿದ ಸುಮಿತ್ರಮ್ಮ ರಾಧಾಳ ಗಂಡನ ಸಮಸ್ಯೆಯನ್ನೂ, ಅವನಿಗೆ ಬಿದ್ದ ಕನಸನ್ನೂ ಮತ್ತು ಮುಖ್ಯವಾಗಿ ತಮ್ಮ […]
ಪುಸ್ತಕ ಬಿಡುಗಡೆ-ಕನ್ನಡ ಪ್ರಜ್ಞೆಯ ಸುತ್ತ ಮುತ್ತ
ಪುಸ್ತಕ ಬಿಡುಗಡೆ- ಕನ್ನಡ ಪ್ರಜ್ಞೆಯ ಸುತ್ತ ಮುತ್ತ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—48 ಮತ್ತೆ ಮರುದನಿಗೊಂಡ ಅಸ್ಪೃಶ್ಯತೆ ನೋವುಗಳು…… ನನ್ನ ವಿವಾಹವೇನೋಸಹಜ ಪ್ರಕ್ರಿಯೆಯಂತೆ ನಿರಾತಂಕವಾಗಿ ನಡೆಯಿತು. ಹಲವರು ಶುಭಹಾರೈಕೆಗಳಿಂದ ನಮ್ಮ ನಿಲುವುಗಳನ್ನು ಬೆಂಬಲಿಸಿದರು. ಕೆಲವರು ನೇರ ನನ್ನ ಕಿವಿಗೂ ಕೇಳಿಸುವಂತೆ ಟೀಕಾಸ್ತ್ರಗಳ ಬಳುವಳಿಯನ್ನೂ ಕೊಡಮಾಡಿದರು. ಬಹುತೇಕ ನಮ್ಮ ಜಾತಿಯ ಬಂಧುಗಳಿಗೆ ನಾನು ಅಂತರ್ಜಾತಿಯ ವಿವಾಹ ಮಾಡಿಕೊಂಡದ್ದು ಸಮಂಜಸವೆನಿಸಲಿಲ್ಲ. “ಉತ್ತಮ ಶಿಕ್ಷಣ ಪಡೆದು ಒಂದು ಒಳ್ಳೆಯ ಉದ್ಯೋಗದಲ್ಲಿ ಇದ್ದವನು ಸ್ವಜಾತಿಯ ಹುಡುಗಿಯನ್ನೇ ಮದುವೆ ಮಾಡಿಕೊಂಡು ಸ್ವಜಾತಿಯ ಹುಡುಗಿಯೊಬ್ಬಳಿಗೆ ಬದುಕು ನೀಡಬಹುದಿತ್ತು. ಓದಿದ ಮತ್ತು ಉತ್ತಮ […]
ಕಳಚಿಕೊ ಬಡಿವಾರದ ಬಾಳ್ವೆ
ಕಳಚಿಕೊ ಬಡಿವಾರದ ಬಾಳ್ವೆ
ಗಟ್ಟಿಗೊಳಿಸಿಕೊ ಮನವ
ಆತ್ಮ ವಿಮರ್ಶೆ
ಬತ್ತಲೆಯಾಗಬೇಕಿದೆ ಆತ್ಮಸಾಕ್ಷಿಗೆ
ಸಾರ್ಥಕ ಬದುಕಿಗೆ ಮುನ್ನುಡಿಯಾಗಿ
ಗಜಲ್
ದಣಿದಿರುವೆ ಸಪ್ತರಾಗಗಳ ಬಹುತಂತಿಯ ವೀಣೆ ನುಡಿಸಿ
ಒಲಿದು ಒಂದಾಗಲು ಏಕತಾನ ದನಿಗಾಗಿ ಹಂಬಲಿಸುವೆ
ಗಜಲ್
ಗಜಲ್ ಪ್ರಕಾಶಸಿಂಗ್ ರಜಪೂತ ನಾವು ಮುಖದಲ್ಲಿ ರಸನೆ ಪಡೆದೇವಿಮೌನ ಎಂಬುವ ಕೀಲಿ ಜಡೆದೇವಿ ಸುಖಾ ಎಂಬುವದು ಒಂದು ಮೃಗತೃಷ್ಣೆನಾವು ಬರಿ ನೋವು ಮಾತ್ರ ಹಡೆದೇವಿ ಎಲ್ಲ ಸಂಬಂಧಗಳು ಬದಿಗಿಟ್ಟುಹಣಾ ಗಳಿಸುತ್ತ ಕಾಲ ಕಳೆದೇವಿ ದಾತ ನೀಡಿದ್ದು ಸಾಲಲಿಲ್ಲ ಅಂತನಿತ್ಯ ಆಸೆಯ ಒಡ್ಡು ಒಡೆದೇವಿ ಅರಿಯದೆ ಉಳಿದಿದೆ ಜಗದಾಗ ಗುರಿಅಮಲಿನಲಿ ಯಾವ ಯತ್ತ ನಡೆದೇವಿ ಬದುಕು ಜಗದಾಗ ಬರಿ ನಾಲ್ಕು ದಿನ“ಪ್ರಕಾಶ” ಈ ನಿಜಾನೇ ಮರೆತೇವಿ
ನಿನ್ನ ನನ್ನ ನಡುವೆ
ಎದೆಯಲ್ಲಿಯೇ ಸುಡು
ಕವಿಗೆ ದಾರಿ ಬಿಡು
ಕವಿತೆಗೆ ತುಸು ಹೃದಯ ಕೊಡು
ಮತಿಹೀನ
ದೇವಿ ಕಂಡವಳಿವಳು ಇಂತಹ ಭಾಳ
ಕುಬ್ಬಗಳ ಹಿಂಡು ನಿತ್ಯ ನಿರಂತರವೂ
ಅವಳೇ ಬಲು ಕುಗ್ಗಿದ ಮನದಾಳದಿ
ನೋಡಿಹಳು ಕೆಂಗಣ್ಣಿನಿಂದಿವರನು!