ಕಾವ್ಯಯಾನ
ಮತಿಹೀನ
ಶ್ರೀನಿವಾಸ ಜಾಲವಾದಿ
ಕುಬ್ಜ ಮನದ ಕುಬ್ಜನೊಂದು ಇದೆ
ವಯಸ್ಸೋ ತುಂಬ ವಿಚಾರ ಪೊಳ್ಳು
ಹೃದಯ ಸಮಸ್ಯೆ ಇತರ ಬಾಧೆ ಎನ್ನ
ಕಾಡುತಿರೆ ಇವನದೋ ಪರಿಹಾಸ್ಯ
ಏನಾಗಿದೆ ನಿನಗೆ ನನಗೂ ಆಗಿತ್ತಲ್ಲಾ
ಎಂದು ಎಂದೋ ಆಗಿದ್ದನ್ಹೆಳುವವ!
ತಾಯಿ ಮಮತೆ ಏನೆಂದು ಗೊತ್ತೆನಗೆ
ಅದ ಇವನಿಂದ ಕಲಿಯಬೇಕಿಲ್ಲವಲ್ಲ
ಅಬ್ಬೆ ಬಿದ್ದು ನರಳಿದಾಗ ಎಲ್ಲಿದ್ದನಿವ
ವರುಷಗಟ್ಟಲೆ ಕಳೆದು ಹೋದವನು!
ನೀನಗೇನಾಗಿದೆ ಧಾಡಿ ಎಂದಂದು
ನನ್ನ ಮನವ ಹೃದಯ ಹಿಂಡಿದವ
ಮತಿಹೀನನಲ್ಲವೆ ಇಂವ ಸೊಂಭೇರಿ
ಕೈಲಾಗದ ಕಾರ್ಯವಾಸಿ ಗಾರ್ದಭ!
ಕೈಲಾಗದೇ ಮಲಗಿರುವರೊಡನೆ ಹೇಗೆ ವ್ಯವರಿಸಬೇಕೆಂಬ ಅರಿವಿರದ
ಅತಿ ಜಾಣನಿವನು ನೀವು ಕಾಣಿರೇ
ನಿಮ್ಮಲ್ಲಿದ್ದರೇ ಇಂವ ಬುದ್ಧಿ ಕಲಿಸಿರಿ!
ದೇವಿ ಕಂಡವಳಿವಳು ಇಂತಹ ಭಾಳ
ಕುಬ್ಬಗಳ ಹಿಂಡು ನಿತ್ಯ ನಿರಂತರವೂ
ಅವಳೇ ಬಲು ಕುಗ್ಗಿದ ಮನದಾಳದಿ
ನೋಡಿಹಳು ಕೆಂಗಣ್ಣಿನಿಂದಿವರನು!
ಸುಂದರ ರಚನೆ