ಕಾವ್ಯಯಾನ
ಆತ್ಮ ವಿಮರ್ಶೆ
ರಾಜನಂದಾ ಘಾರ್ಗಿ
ಫೆಸಬುಕ್ ನ ಪುಟಗಳಲ್ಲಿ
ತೋರಿಕೆಯ ಮುಖಗಳು
ವಾಟ್ಸ ಆಪ್ ಸ್ಟೇಟಸ್ ನಲ್ಲಿ
ಮಿಂಚುವ ಮುಖವಾಡಗಳು
ಮನದಲಿ ಮತ್ಸರದ ಹೊಗೆ
ಮುಗುಳು ನಗೆ ತುಟಿಯ ಸುತ್ತಲು
ಕಣ್ಣಲಿ ಕೊರೆದ ಕಪ್ಪಿನ ಸೊಗೆ
ಅಸೂಯೆಯ ಉರಿ ಮುಚ್ಚಲು
ಮನಸಿನ ಕತ್ತಲೆಯ ಮರೆಮಾಡಿ
ಕಣ್ಣಲಿ ತುಂಬಿದೆ ಮಿಂಚಿನ ಹೊಳಪು
ಮಿದುಳಿನ ಕಪ್ಪನು ತೊಡೆಯದೇ
ದೇಹಕೆ ತೊಡಿಸಿ ಬಿಳುಪಿನ ಉಡುಪು
ನಿಜರೂಪ ತೊರುವ ಕನ್ನಡಿ ಬೇಕು
ಆತ್ಮ ವಿಮರ್ಶೆಯ ಸಾಧನವಾಗಿ
ಬತ್ತಲೆಯಾಗಬೇಕಿದೆ ಆತ್ಮಸಾಕ್ಷಿಗೆ
ಸಾರ್ಥಕ ಬದುಕಿಗೆ ಮುನ್ನುಡಿಯಾಗಿ
“ನಾನು” ತನ್ನನ್ನು ಕಂಡುಕೊಳ್ಳುವಲ್ಲಿ ಕಿವಿ ಮಾತಾಗುವ ಕವನವಿದು… ಅಭಿನಂದನೆ ಕವಿಗೆ…
Beautiful mirror to one self