ಗಜಲ್
ಪ್ರಕಾಶಸಿಂಗ್ ರಜಪೂತ
ನಾವು ಮುಖದಲ್ಲಿ ರಸನೆ ಪಡೆದೇವಿ
ಮೌನ ಎಂಬುವ ಕೀಲಿ ಜಡೆದೇವಿ
ಸುಖಾ ಎಂಬುವದು ಒಂದು ಮೃಗತೃಷ್ಣೆ
ನಾವು ಬರಿ ನೋವು ಮಾತ್ರ ಹಡೆದೇವಿ
ಎಲ್ಲ ಸಂಬಂಧಗಳು ಬದಿಗಿಟ್ಟು
ಹಣಾ ಗಳಿಸುತ್ತ ಕಾಲ ಕಳೆದೇವಿ
ದಾತ ನೀಡಿದ್ದು ಸಾಲಲಿಲ್ಲ ಅಂತ
ನಿತ್ಯ ಆಸೆಯ ಒಡ್ಡು ಒಡೆದೇವಿ
ಅರಿಯದೆ ಉಳಿದಿದೆ ಜಗದಾಗ ಗುರಿ
ಅಮಲಿನಲಿ ಯಾವ ಯತ್ತ ನಡೆದೇವಿ
ಬದುಕು ಜಗದಾಗ ಬರಿ ನಾಲ್ಕು ದಿನ
“ಪ್ರಕಾಶ” ಈ ನಿಜಾನೇ ಮರೆತೇವಿ
Thanks a lot for accepting my poem