ಸರಣಿ ಬರಹ ಅಂಬೇಡ್ಕರ್ ಓದು ಭಾಗ-4 ಬಾಲ್ಯ ಉನ್ನತ ವ್ಯಾಸಂಗ ತಂದೆಯ ಸಾವು ಅಂಬೇಡ್ಕರರಿಗೆ ಮರೆಯಲಾಗದ ದು:ಖವನ್ನುಂಟು ಮಾಡಿತು. ತಂದೆಯ ನೆನಪು ಮರುಕಳಿಸುತಿತ್ತು. ಆದರೂ ಅವರಲ್ಲಿ ಉನ್ನತ ವ್ಯಾಸಂಗದ ಮಹತ್ಪಾಕಾಂಕ್ಷೆ ಉತ್ಕಟಗೊಂಡಿತು. ಅದೇ ಸಂದರ್ಭದಲ್ಲಿ ಬರೋಡಾದ ಮಹಾರಾಜರು ನಾಲ್ಕು ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಕಳುಹಿಸಿ ಕೊಡುವುದಾಗಿ ಪ್ರಕಟಣೆ ಹೊರಡಿಸಿದ್ದರು. ಪ್ರಕಟಣೆಯಲ್ಲಿ ಕರಾರೊಂದನ್ನು ಹಾಕಿದ್ದರು ಅದೇನೆಂದರೆ ಮಹಾರಾಜರು ಕೊಡುವ ಶಿಷ್ಯವೇತನವನ್ನು ವಿದ್ಯಾಭ್ಯಾಸಕ್ಕಾಗಿ ಮಾತ್ರ ಉಪಯೋಗಿಸಿಕೊಳ್ಳಬೇಕು, ಬೇರೆಯದಕ್ಕೆ ಹಣ ಬಳಸಿಕೊಳ್ಳುವಂತಿಲ್ಲಅಲ್ಲದೆ ವಿದ್ಯಾರ್ಜನೆ ಪೂರ್ಣಗೊಳಿಸಿ ಬಂದನಂತರ ಬರೋಡಾ […]
ಅಂಕಣ ಸಂಗಾತಿ ನೆನಪಿನದೋಣಿಯಲಿ ಜಟಕಾ ವಿಧಿಯೆಂಬ ಚಾಲಕನು ಓಡಿಸುತಿಹ ಬಂಡಿಯಲಿ ಕುಳಿತು ನಡೆದಿದೆ ಬಾಳಪಯಣ. ಅಲ್ಲಿಷ್ಟು ಇಲ್ಲಿಷ್ಟು ಒಂದಷ್ಟು ನೆನಪುಗಳ ಬುತ್ತಿ ಔತಣ . ** ಕಾಲನ ನಾಗಾಲೋಟದ ಪಯಣವು ಗಾಡಿಗೆ ಕಟ್ಟಿದ ಕುದುರೆಗಳು ನಾವು ವಿಧಿಯ ಕಡಿವಾಣದ ಬಿಗಿ ಅಂಕೆ ನಡೆದಿಹೆವು ಆಮಿಷಕೆ , ಚಾಟಿಯಾ ಭಯಕೆ “ಹಾಯ್ ಹಾಯ್ ಬಾಜೂ ಬಾಜೂ” ಟಕ್ ಟಕ್ ಅನ್ನುವ ಕುದುರೆಗಳ ಖರಪುಟದ ಶಬ್ದದೊಂದಿಗೆ ಈ ಪದಗಳು ಕಿವಿಗೆ ಬಿತ್ತೆಂದರೆ ರಸ್ತೆಯಲ್ಲಿ ಆಡುತ್ತಿದ್ದ ಮಕ್ಕಳೆಲ್ಲ ಬದಿಗೆ ಸರಿದು ಗೌರವ […]
ಶೋಭಾ ನಾಯ್ಕ.ಹಿರೇಕೈ ಕವಿತೆ ಖಜಾನೆ
ಶೋಭಾ ನಾಯ್ಕ.ಹಿರೇಕೈ ಕವಿತೆಗಳು
ಒಲವ ಸ್ಪರ್ಶ
ಮಳೆಸುರಿದ ಮುಗಿಲು
ನಿನ್ನೊಲವ ನವಿಲು
ನಮ್ಮ ಸಲಾಮಿನ ಸುಖ
ನೀವು ಫಟಿಂಗ ಕೈದಿಗಳು
ನಾವು
ನೀಡಿದ ಉಗಳು
ನೀವು ಪಡೆದ ಲಂಚ
ಹರಿದ ಷರಟಿನ ಬೆಳಕು
ಸಾಕ್ಷಿ ನುಡಿಯಲು ಕಾಯುತ್ತಾ ಕುಳಿತ ಮುದುಕಿ
ಕೋರ್ಟಿನಂಗಳದ ಕಸಗುಡಿಸುವಾಗ…
ಥಟ್ಟನೆ ನೆನಪಾಗುತ್ತಾಳೆ ಅವ್ವ.
ಸಾಲವಾ(ದಾ)ದ ಕವಿತೆ
ತುಟಿಯಂಚಿನಿಂದ ಆಚೆ ಬರದ ಮೌನ ಅಕ್ಷರಳನ್ನೆಲ್ಲ ನೀ…
ಕಣ್ಣಂಚಲ್ಲೇ ಓದಬೇಕಿತ್ತು!!!
ಹಾಯ್ಕುಗಳು
ಮರ ಕೇಳಿತು:
ಉಸಿರು ಕೊಟ್ಟೆ ನಾನು
ಕೊಂದದ್ದು ಏಕೆ
ಆ ತಾಯಿ- ಈ ತಾಯಿ
ಮತ್ತಲ್ಲೇ ಕೂಗುತ್ತಾಳೆ,
“ಹೆರ ಬೇಡಿರೆ ಅವ್ವ ಹೆರಬೇಡಿರೇ
ಇಂಥ ಭಾಗ್ಯಕೆ ಗಂಡ ಹೆರಬೇಡಿರೆ..”
ಕೇಳು ಬಾ ಒಮ್ಮೆ
ಕತ್ತಲ ಕನಸಿಗೆ ಬಣ್ಣ ಬಳಿವ
ಮೊಜುಗಾರನ ಮೊಡಿಯನು