ಕಾವ್ಯಸಂಗಾತಿ
ನಮ್ಮ ಸಲಾಮಿನ ಸುಖ
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ನಮ್ಮ ಕಣ್ಣ ಪಸೆ
ಕಿತ್ತುಕೊಳ್ಳುವ
ಆ ನಿಮ್ಮ ಮೌನ
ಮಾತಾಡದೆ ಮಲಗಿದ ಮೃಗಜಲ
ಅದೆಷ್ಟು ಬಾರಿ ಪಾಪಿಗಳು
ಎನ್ನಲಿಲ್ಲ ನಾವು?
ಎದೆಗೂಡಲಿ
ನಿಮ್ಮನು ಉಳಿಸುತ
ದುಃಖದೊಳಗಿನ
ಸುಖವನು ನುಂಗಿದ,
ನಮ್ಮ ಸಲಾಮಿನ ಕೂದಲೆಳೆದು
ಕಾಲದ ಲೆಕ್ಕ
ಮುಕ್ಕಳಿಸುತ್ತಿರುವಿರಿ
ನಿಮ್ಮ ಮೃತ್ಯುವಿಗೆ
ಸಿಡಿಲು,ಲಕ್ವ ಹೊಡೆಯಬೇಕಂತಲ್ಲ,
ಹೃದಯ ಘಾತವಾಗಲೆಂತಲ್ಲ,
ಕರ್ಮಕ್ಕೀಗ
ಕಣ್ಣುಗಳಿವೆ
ಅರಗಿಸಿಕೊಳ್ಳರಿ ನರಳಿಕೆ
ಬಾತಿರುವ ನಿಮ್ಮ ರಜಸ್ಸಿನ ಚಹರೆ ಚಿತ್ರಿಸಿ
ನೀವು ಫಟಿಂಗ ಕೈದಿಗಳು
ನಾವು
ನೀಡಿದ ಉಗಳು
ನೀವು ಪಡೆದ ಲಂಚ
ಪ್ರಿಯವಾಗಿದೆ
ನಮಗೆ ಹಪಾಹಪಿ
ಗೆಲುವು ತುಂಬಿದೆ
ಮೈಯಲ್ಲಿ
ಗಾಯ ತೊಳೆದ ಕೈಯಿಗಳು
ನಮ್ಮವು,
ತಿಂದು ತೇಗಿರಿ
ಅನಮತ್ತಾಗಿ ತಹತಹಿಸಿರಿ
ರುದ್ರ ಭುವಿಗೆ ಹೋಗುವ ಮುಂಚೆ
ಗೂಢ- ನಿಗೂಢಗಳಾಚೆ
ನಮ್ಮ ಕಣ್ಣ ಪಸೆ
ಕಿತ್ತುಕೊಳ್ಳುವ
ಆ ನಿಮ್ಮ ಮೌನ
ಮಾತಾಡದೆ ಮಲಗಿದ ಮೃಗಜಲ
ಅದೆಷ್ಟು ಬಾರಿ ಪಾಪಿಗಳು
ಎನ್ನಲಿಲ್ಲ ನಾವು?
ಎದೆಗೂಡಲಿ
ನಿಮ್ಮನು ಉಳಿಸುತ
ದುಃಖದೊಳಗಿನ
ಸುಖವನು ನುಂಗಿದ,
ನಮ್ಮ ಸಲಾಮಿನ ಕೂದಲೆಳೆದು
ಕಾಲದ ಲೆಕ್ಕ
ಮುಕ್ಕಳಿಸುತ್ತಿರುವಿರಿ
ನಿಮ್ಮ ಮೃತ್ಯುವಿಗೆ
ಸಿಡಿಲು,ಲಕ್ವ ಹೊಡೆಯಬೇಕಂತಲ್ಲ,
ಹೃದಯ ಘಾತವಾಗಲೆಂತಲ್ಲ,
ಕರ್ಮಕ್ಕೀಗ
ಕಣ್ಣುಗಳಿವೆ
ಅರಗಿಸಿಕೊಳ್ಳರಿ ನರಳಿಕೆ
ಬಾತಿರುವ ನಿಮ್ಮ ರಜಸ್ಸಿನ ಚಹರೆ ಚಿತ್ರಿಸಿ
ನೀವು ಫಟಿಂಗ ಕೈದಿಗಳು
ನಾವು
ನೀಡಿದ ಉಗಳು
ನೀವು ಪಡೆದ ಲಂಚ
ಪ್ರಿಯವಾಗಿದೆ
ನಮಗೆ ಹಪಾಹಪಿ
ಗೆಲುವು ತುಂಬಿದೆ
ಮೈಯಲ್ಲಿ
ಗಾಯ ತೊಳೆದ ಕೈಯಿಗಳು
ನಮ್ಮವು,
ತಿಂದು ತೇಗಿರಿ
ಅನಮತ್ತಾಗಿ ತಹತಹಿಸಿರಿ
ರುದ್ರ ಭುವಿಗೆ ಹೋಗುವ ಮುಂಚೆ
ಗೂಢ- ನಿಗೂಢಗಳಾಚೆ