ಕೇಳು ಬಾ ಒಮ್ಮೆ

ಕಾವ್ಯ ಸಂಗಾತಿ

ಕೇಳು ಬಾ ಒಮ್ಮೆ

ಡಾ.ಸುಜಾತಾ.ಸಿ

ಕೇಳು ಬಾ ಒಮ್ಮೆ
ಮಳೆ ಹನಿಯ ತುಂತುರ ಮಾತೊಂದನು
ಕಿವಿಯಲಿ ಪಿಸುಗುಟ್ಟುತ್ತಿದೆ
ಇನಿಯನ ಎದೆಯ ಮಿಡಿತದ ಸದ್ದನ್ನು

ಕೇಳು ಬಾ ಒಮ್ಮೆ
ಹಗಲು ಸರಿದ ರಾತ್ರಿಯ
ಮಕರಂಧದ ಜೇನು ಹೀರುವ ಜೇನನ್ನೊಣದ
ಗುಂಗಯ್ ಗುಟ್ಟುವ ಸದ್ದನ್ನು

ಕೇಳು ಬಾ ಒಮ್ಮೆ
ಇರುಳ ಸರಿಸಿ ಮೂಡುವ
ಬಾನಾಡಿಯ ಸಖನ ಚೆಲುವಿನ
ಹಾಲ್ ಬೆಳದಿಂಗಳ ಕನಸನು

ಕೇಳು ಬಾ ಒಮ್ಮೆ
ಮೊಡ ಕವಿದ ಸಾಲುಗಳ ಒಳ ಧನಿಯನು
ಪಿಸುಗುಟ್ಟಿ ಸುರಿಸಿದ ಹನಿಯನು
ಚುಕ್ಕಿ ಚಂದ್ರಮರ ಸಂಗಾತದ ಗುಟ್ಟನ್ನು

ಕೇಳು ಬಾ ಒಮ್ಮೆ
ನಿನ್ನೊಲವಿನ ಸಖ ಸನಿಹವಿರಲು
ಸದ್ದಿಲ್ಲದೇ ಬಡಿದ ಹೃದಯದ ಮಾತನ್ನು

ಕೇಳು ಬಾ ಒಮ್ಮೆ
ಕಮಲದ ಮುಖ ಕೆಂಪಿರಿದ
ಒಲವಿನ ಸಖನ ವಿಳಾಸವನ್ನು

ಕೇಳು ಬಾ ಒಮ್ಮೆ
ಮುಗುಳು ನಗೆಯ ಕಲಿಸಿದಾಕೆಯ
ಪ್ರೀತಿ ಪರದೆಯ ಸಖನ ಹೆಸರನು

ಕೇಳು ಬಾ ಒಮ್ಮೆ
ಮತ್ತೆ ಮತ್ತೆ ಒಲವ ಮೂಡಿಸುವ
ಆತರಕೆ ಕಾತರವ ನೀಡಿದವನ
ಕನ್ನಡಿ ಕಣ್ಣಗಳ ಬೇಗುದಿಯನು

ಕೇಳು ಬಾ ಒಮ್ಮೆ
ಕತ್ತಲ ಕನಸಿಗೆ ಬಣ್ಣ ಬಳಿವ
ಮೊಜುಗಾರನ ಮೊಡಿಯನು


ಡಾ.ಸುಜಾತಾ.ಸಿ

Leave a Reply

Back To Top