ಹಾಯ್ಕುಗಳು

ಕಾವ್ಯ ಸಂಗಾತಿ

ಹಾಯ್ಕುಗಳು

ಭಾರತಿ ರವೀಂದ್ರ

Saatchi Art - Home | Facebook

೧)
ಬೀಜ ಬಿತ್ತಿದ:
ರೈತನ ಕನಸದು,
ಹಸಿವು ನೀಗಿ.

೨)
ಇಳೆ ನಗಲು:
ಹಸಿರು ಬೆಳಗಲು
ಲೋಕ ಆನಂದ.

೩)
ರೈತ ಜನಕ
ಹಸಿದ ಹೊಟ್ಟೆ ಗೆಲ್ಲಾ
ಉಣ ಬಡಿಸಿ.

೪)
ಕಂಬನಿ ಕಥೆ:
ಮಾನವ ದೌರ್ಜನ್ಯಕೆ,
ಮಳೆ ಮುನಿಸು.

೫)
ಭೂ ಬಾನು ಗಾಳಿ
ನೀರು ಎಲ್ಲವೂ ಒಂದೇ
ಮಸಣ ಬೇರೆ

೬)
ಎಂಥ ವಿಚಿತ್ರ:
ನಮ್ಮ ಸಾವು ಕಂಡಿಲ್ಲ
ಭಯ ಏತಕೆ?

୭)
ಅಮ್ಮನ ತಾಳ್ಮೆ
ಇಳೆ ಕೂಡ ಮೂಕಾಯ್ತು
ಪ್ರತ್ಯಕ್ಷ ದೈವ.

೮)
ಅಪ್ಪನ ನಗೆ
ಅಮ್ಮನ ಹಣೆಯಲಿ,
ಬಿದಿಗೆ ಚಂದ್ರ.

೯)
ಮರ ಕೇಳಿತು:
ಉಸಿರು ಕೊಟ್ಟೆ ನಾನು
ಕೊಂದದ್ದು ಏಕೆ?

೧೦)
ಹಣಕ್ಕೂ ಗೊತ್ತು:
ತನ್ನಿಂದ ಹೊಟ್ಟೆ ತುಂಬದು,
ಮನದ ಮೋಹ.


2 thoughts on “ಹಾಯ್ಕುಗಳು

  1. ಚಂದದ ಹಾಯ್ಕಗಳು ಎಂಟನೇ ಹಾಯ್ಕ ತುಂಬಾ ಇಷ್ಟವಾಯಿತು

Leave a Reply

Back To Top