ಕಾವ್ಯಯಾನ

ಕಾವ್ಯಯಾನ

ಮಾತು-2 ಡಾ.ಗೋವಿಂದ ಹೆಗಡೆ ಮಾತು ಮಾತನಾಡುವಾಗ ಹೀಗೇನಾದರೂ ಕಿಟಕಿ ತೆರೆದುಬಿಟ್ಟಿದ್ದರೆ ಎಂಥ ಅನಾಹುತವಾಗುತ್ತಿತ್ತು ತೂರಿ ಹೋಗಿ ಕೆಳಗೆ ರಸ್ತೆಯಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವ ಚಿಣ್ಣರ ರಾಕೆಟ್ ಮೇಲೆ ಬಿದ್ದು ಆ ಕಡೆ ಈ ಕಡೆ ಹಾರಿ ಬಿದ್ದು ಹಾರಿ ಬಿದ್ದು ಹೇಗೆ ಇಳಿಯಬಹುದಿತ್ತು ಕುರ್ಚಿ ಹಾಕಿ ಮುಗುಮ್ಮಾಗಿ ಕೂತು ಈ ಮಾಗಿಯ ಇಳಿ ಹೊತ್ತು ತೆರೆದು ಕೂತು ಮಾತಿನ ಲೋಕ ಎಂಥ ವಿಚಿತ್ರ ಈ ಮಾತಿನದು ಮಾತು ಮಾತಾಗಲು ಕಂಠ ನಾಲಗೆ ತುಟಿ ಅಷ್ಟೇ ಸಾಲದು ಕಿವಿಯೂ ಬೇಕು […]

ಅನುವಾದ ಸಂಗಾತಿ

ಬಶೀರ್ ಬದ್ರ್ ಉರ್ದು ಕವಿ ಕನ್ನಡಕ್ಕೆ: ಕಮಲಾಕರ ಕಡವೆ “ಜನ ಸೋತು ಹೋಗುತ್ತಾರೆ ಮನೆಯೊಂದ ಕಟ್ಟಲು” ಜನ ಸೋತು ಹೋಗುತ್ತಾರೆ ಮನೆಯೊಂದ ಕಟ್ಟಲುಮರುಕ ಬಾರದೇ ನಿನಗೆ ಕೇರಿಗಳ ಸುಟ್ಟುಹಾಕಲು ಈ ಹೆಂಡದಂಗಡಿಯಲ್ಲಿ ಬಟ್ಟಲುಗಳು ಮುರಿಯುತ್ತವೆಋತುಗಳು ಬರುತಿರಲು ಋತುಗಳು ಹೋಗುತಿರಲು ಮಿಡಿವ ಎಲ್ಲ ಕಲ್ಲುಗಳಿಗೂ ಜನ ಹೃದಯ ಎಂದಿದ್ದಾರೆಆಯುಷ್ಯವೇ ಕಳೆದು ಹೋಗುತ್ತದೆ ಎದೆಯ ಹೃದಯವಾಗಿಸಲು ಪಾರಿವಾಳದ ಕಷ್ಟ ಏನೆಂದರೆ ಕೇಳಲಾಗದು ಅದುಯಾರೋ ಅದರ ಗೂಡಲ್ಲಿ ಹಾವನಿಟ್ಟಿರಲು ಬೇರೆ ಹುಡುಗಿ ಬಾಳಿನಲ್ಲಿ ಬರುವುದೇನೋ ನಿಜಎಷ್ಟು ಕಾಲ ಬೇಕಾಗುವದು ಅವಳ ಮರೆತುಬಿಡಲು […]

ಅನುವಾದ ಸಂಗಾತಿ

 ವಾಷಿಂಗ್ಟನ್ ಕುಕುರ್ಟೋ ಅರ್ಜೆಂಟೀನಾದ ಕವಿ ಕನ್ನಡಕ್ಕೆ: ಕಮಲಾಕರ ಕಡವೆ ಚೆ ಗುವೆರಾನ ಮುಖ ಇದ್ದ ಮನುಷ್ಯ ಅವನು ಚೆ ಯ ಟ್ಯಾಟೂವ ತನ್ನ ತೋಳುಗಳ ಮೇಲೆ ಹೊಂದಿದ್ದಆ ಕಾಲದಲ್ಲಿ ಯಾರೂ ಟ್ಯಾಟೂ ಹಾಕಿ ಕೊಳ್ಳುತ್ತಿರಲಿಲ್ಲಆ ಕಾಲದಲ್ಲಿ ಯಾರಿಗೂ ಚೆ ಗೊತ್ತೂ ಇರಲಿಲ್ಲಹಾಗಿದ್ದಾಗ ಅವನು ಟ್ಯಾಟೂ ಹಾಕಿಸಿ ಕೊಂಡಿದ್ದ “ಯಾಕಪ್ಪಾ ಹಾಗೆ ಟ್ಯಾಟೂ ಹಾಕಿಸ್ ಕೊಂಡಿದ್ದಿ”ನನ್ನ ಅಜ್ಜಿ ಕೇಳಿದಳು, “ಒಳ್ಳೇ ಜೈಲಿಂದ್ ಹೊರ ಬಂದೋರುಹಾಕಿಸ್ಕೊತಾರಲ್ಲ ಹಾಂಗೆ”.“ಅಮ್ಮ, ಇನ್ನೇನು ನಮ್ ಲೈಫು ಅಂದ್ರೆ,ದೊಡ್ಡದೊಂದು ಜೈಲು ಅಲ್ದಿದ್ರೆ?”ಚೆ ಇನ್ನೂ ಚೆ ಆಗೋಕೆ […]

ಅಕ್ಷರದ ಅವ್ವ

ಸಾವಿತ್ರಿಬಾಯಿ ಪುಲೆ ಕೆ.ಶಿವು ಲಕ್ಕಣ್ಣವರ ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯ ‘ಅಕ್ಷರದ ಅವ್ವ’ ಸಾವಿತ್ರಿಬಾಯಿ ಪುಲೆ..! ಇಂದು ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯ ‘ಅಕ್ಷರದ ಅವ್ವ’ ಸಾವಿತ್ರಿಬಾಯಿ ಪುಲೆ ಹುಟ್ಟಿದ ದಿನ. ಆ ಕಾರಣವಾವಾಗಿ ಈ ಲೇಖನ ಸ್ಮರಣೆ… ಸಾವಿತ್ರಿಬಾಯಿ ಫುಲೆ(೧೮೩೧-೧೮೯೭)ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ. ಭಾರತದ ಮೊಟ್ಟ ಮೊದಲ ಶಿಕ್ಷಕಿ. ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ ಅವರು ಧರಿಸುತ್ತಿದ್ದರು ಅವರು… ಸಾವಿತ್ರಿಬಾಯಿ […]

ಕಾವ್ಯಯಾನ

ಕವಿತೆಯ ಘನತೆ ಬಿ.ಎಸ್.ಶ್ರೀನಿವಾಸ್ ಕವಿತೆಗೊಂದು ಘನತೆಯಿದೆ ಭಾವಗಳ ತೂಕವಿದೆ ಬಂಧಗಳ ಭಾರವಿದೆ ಹೃದಯದ ಪಿಸುದನಿಯಿದೆ ಕವಿತೆಗೊಂದು ಘನತೆಯಿದೆ ಕಾಣದ ಕಂಬನಿಯಿದೆ ಕೇಳಿರದಾ ರಾಗವಿದೆ ರವಿಕಾಣದ ರಸತುಂಬಿದೆ ಕವಿತೆಗೊಂದು ಘನತೆಯಿದೆ ಮೈಮರೆಸುವ ಶ್ರುತಿಲಯವಿದೆ ನೊಂದ ಮನವ ಸಂತೈಸುವ ಸಾತ್ವಿಕ ಶಕ್ತಿಯಿದೆ ಕವಿತೆಗೊಂದು ಘನತೆಯಿದೆ ಹರಿವ ನದಿಯ ಬಳುಕಿದೆ ಗರಿಗೆದರಿ ನರ್ತಿಸುವ ನವಿಲಿನ ಲಾಸ್ಯವಿದೆ ಕವಿತೆಗೊಂದು ಘನತೆಯಿದೆ ಭಕ್ತಿಯಿದೆ ವಿರಕ್ತಿಯಿದೆ ತಿಮಿರವನ್ನು ತೊಲಗಿಸುವ ಸೃಜನ ಸ್ವಯಂಪ್ರಭೆಯಿದೆ

ಕಾವ್ಯಯಾನ

ಮಾತು ಡಾ.ಗೋವಿಂದ ಹೆಗಡೆ ಮಾತು ಏನನ್ನಾದರೂ ಹೇಳುತ್ತಲೇ ಇರಬೇಕೆಂದು ಯಾರಾದರೂ ಏಕೆ ಒತ್ತಾಯಿಸಬೇಕು ಪಟ್ಟು ಹಿಡಿಯಬೇಕು ಮಾತು ಮಾತ್ರವಲ್ಲ ಮೌನ ಕೂಡ ಮಾತಿಗೂ ಇದ್ದೀತು ಬೇಸರ ಆಯಾಸ ಅಥವಾ ಬರೀ ಆಕಳಿಕೆ ಮತ್ತು ಮೌನ ಹೊದ್ದು ಉಸ್ಸೆನ್ನುವ ಕೇವಲ ಬಯಕೆ ಈ ಮಾತು ಕೂಡ ಎಷ್ಟು ಅಸಹಾಯ! ಕುಬ್ಜ ಹೆಳವ ಮತ್ತು ಚೂರು ಕಿವುಡ ಮತ್ತು ಉಬ್ಬಸ ಪಡುತ್ತ ಅದು ಹೇಳುವುದೇನನ್ನು? ಬಿಡು, ಕವಿತೆಯೆಂದರೆ ಬರಿ ಗೋಳಲ್ಲ ಎಲ್ಲ ಅಸಂಗತತೆಯಲ್ಲಿ ಏನೋ ಸೂತ್ರ ಅಥವಾ ವಿಪರೀತವೂ ಸರಿಯೇನು […]

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ಕನಸು-ಮನಸು-ನನಸು ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಬೇರೆ ಬೇರೆ ತರಹದ ನಿಲುವುಗಳು ಇರುತ್ತವೆ. ಕೆಲವರು ಅವರಿಗೆ, ಪ್ರತಿವರ್ಷ ಪರೀಕ್ಷೆಯಲ್ಲಿ ಬರುವ ಅಂಕಗಳನ್ನು ಮನಸ್ಸಲ್ಲಿಟ್ಟುಕೊಂಡು ಅದಕ್ಕೆ ಅನುಕೂಲಕರವಾಗಿ ಮುಂದೋಗ್ತಾರೆ ಇನ್ನು ಕೆಲವರು, ಮನೆಯಲ್ಲಿ ತಂದೆ-ತಾಯಿ ಹೇಳುವುದನ್ನು ಬಿಟ್ಟು ಬೇರೆ ಸ್ವಂತಿಕೆಯನ್ನು ಉಪಯೋಗಿಸುವುದೇ ಇಲ್ಲ. ಇನ್ನು ಮೂರನೇ ತರಹದ ಮಕ್ಕಳು ಯಾವುದೋ ಒಂದು ವಿಷಯದಲ್ಲಿ ಆಕರ್ಷಿತರಾಗಿ ಆ ವಿಷಯದ ವಿಶೇಷ ಗಳನ್ನೆಲ್ಲಾ ತಿಳಿದುಕೊಂಡು, ಅದನ್ನು ಗುರಿಯಾಗಿಟ್ಟುಕೊಂಡು ಹಂತಹಂತವಾಗಿ ಸಾಧಿಸುತ್ತ ಹೋಗೋರು.ಯಾವುದೇ ರೀತಿ ಮಕ್ಕಳಾದರೂ ಅವರಲ್ಲಿ ಆತ್ಮ ವಿಶ್ವಾಸ ಇರುವುದು ಅತಿಮುಖ್ಯ […]

ಕಾವ್ಯಯಾನ

ಸೃಷ್ಟಿಯ ಮಿಲನ. ರಾಮಾಂಜಿನಯ್ಯ ವಿ ಕಾಡ ಕಗ್ಗತ್ತಲು ಆವರಿಸಿ ಮುತ್ತಿರಲು ಜೇನ್ ಪರಾಗ ರಿಂಗಣ! ಚೆಲುವ ಮಧು ಮೃದಂಗ, ಅಧರಗಳ ಮಧುರ ಗಾನ. ಚಂದಿರನವೆ ಬಡಿತ, ಪಕಳೆಗಳ ಚಿಟಪಟ ಕೇಸರಗಳ ಆಗಮನದಿ ಸೃಷ್ಟಿಯ ಮಿಲನ.. ದುಂಬಿ ಮದರಂಗಿ ಚಲನ.. ಪೇಳ್,ಹೆಣ್ಣೆ ನಾಭಿಯಲಿ ನೆತ್ತರು ಬಿಸಿ ಎದೆಯಲ್ಲಿ ಸಮುದ್ರದಲೆ ಭೋರ್ಗರೆವ ನಾದ ತನ್ಮಯ ವಿನೋದ.. ಕರಗುವ ಮುನ್ನ ಕರಗಿಸೆನ್ನ; ಪೆಣ್ಣೆ, ಅರಳುವ ಹೂವೆ.. ಮದನದ ವದನಕ್ಕಿದು ತನು ತರುಲತೆ ಗಾನ. ಸ್ಪರ್ಶಿಸುವ ನೆಲೆಯಲ್ಲಿ ಪರಾಗಗಳ ಸೆಲೆ! ಸುಳಿಯಿರದ ಸಮುದ್ರದಿ […]

ಪ್ರಸ್ತುತ

ಮಹಾರಾಷ್ಟ್ರದ ಗಡಿ ತಗಾದೆ ಕೆ.ಶಿವು ಲಕ್ಕಣ್ಣವರ ಮತ್ತೆ ಭುಗಿಲೆದ್ದ ಬೆಳಗಾವಿ ಗಡಿ ವಿವಾದವೂ..! ‘ಮಹಾರಾಷ್ಟ್ರ’ ಗಡಿ ಕ್ಯಾತೆ ಕಥೆಯ ಪೂರ್ಣ ಚಿತ್ರಣವೂ..!! ಮಹಾರಾಷ್ಟ್ರಕ್ಕೆ ಏನೋ ಗತಿ ಕಾದಿದೆ. ಅದಕೇ ಅದು ಮೇಲಿಂದ ಮೇಲೆ ಗಡಿ ಕ್ಯಾತೆ ತೆಗೆಯುತ್ತಿದೆ. ಈ ಬಾರಿ ಸಮಗ್ರ ಕರ್ನಾಟಕ ಈ ಗಡಿ ಕ್ಯಾತೆಯ ವಿರುದ್ಧ ಮಹಾರಾಷ್ಟ್ರದ ನೀರು ಇಳಿಸಲು ಸಿದ್ಧವಾಗಿ ಈ ಗಡಿ ಕ್ಯಾತೆ ಹೋರಾಟದಲ್ಲಿ ದುಮುಕಿದೆ… ಮಹಾರಾಷ್ಟ್ರದ ಜತೆಗಿನ ಗಡಿ ವಿವಾದ ಸದಾ ಬೂದಿ ಮುಚ್ಚಿದ ಕೆಂಡದಂತೆ. ಸುಮ್ಮನಿರುವ ಕರ್ನಾಟಕವನ್ನು ಪದೇ […]

ಕಾವ್ಯಯಾನ

ನಾನಲ್ಲ ದೇವದಾಸಿ ನಿರ್ಮಲಾ ನನ್ನ ಬದುಕಿದು ನನ್ನ ಸ್ವತ್ತು ಬಲವಂತವಾಗಿ ಕಟ್ಟಿಸಿದಿರಿ ನನಗೆ ಮುತ್ತು ಬೆಲೆ ಇಲ್ಲವೇ ನನ್ನಾವ ಆಸೆಗೆ ಬಲಿಯಾದೆ ಕಾಮಪಿಶಾಚಿಗಳ ಲಾಲಸೆಗೆ ಭಗವಂತನ ಸೇವೆಗೆಂದೇ ಮಾಡಿದಿರಿ ನನ್ನ ದಾಸಿ ಆದರೆ ವೇಶ್ಯೆಯೆಂದೆ ನಾನಾದೆ ಹೆಸರುವಾಸಿ ಶಾಸ್ತ್ರ ಹೇಳಿತು ದೇವನಿಗೆ ಸಂಗೀತ, ನೃತ್ಯ ಪ್ರಿಯ ದೇವನ ಹೆಸರಲಿ ಸಮಾಜ ಮಾಡಿತು ನನ್ನ ಬದುಕು ಹೇಯ ಮಾಡಿದಿರಿ ನನಗೆ ಗೆಜ್ಜೆ ಪೂಜೆ ನನ್ನಾವ ತಪ್ಪಿಗಾಗಿ ಈ ಸಜೆ ನಾನಾಗ ಬೇಕಿತ್ತಲ್ಲವೇ ಸಂಸಾರಿ ಅದೇಕೆ ಮಾಡಿದಿರಿ ನನ್ನ ವ್ಯಭಿಚಾರಿ […]

Back To Top