ಅವ್ಯಕ್ತಳ ಅಂಗಳದಿಂದ

ಅವ್ಯಕ್ತ

ಕನಸು-ಮನಸು-ನನಸು


ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಬೇರೆ ಬೇರೆ ತರಹದ ನಿಲುವುಗಳು ಇರುತ್ತವೆ. ಕೆಲವರು ಅವರಿಗೆ, ಪ್ರತಿವರ್ಷ ಪರೀಕ್ಷೆಯಲ್ಲಿ ಬರುವ ಅಂಕಗಳನ್ನು ಮನಸ್ಸಲ್ಲಿಟ್ಟುಕೊಂಡು ಅದಕ್ಕೆ ಅನುಕೂಲಕರವಾಗಿ ಮುಂದೋಗ್ತಾರೆ ಇನ್ನು ಕೆಲವರು, ಮನೆಯಲ್ಲಿ ತಂದೆ-ತಾಯಿ ಹೇಳುವುದನ್ನು ಬಿಟ್ಟು ಬೇರೆ ಸ್ವಂತಿಕೆಯನ್ನು ಉಪಯೋಗಿಸುವುದೇ ಇಲ್ಲ. ಇನ್ನು ಮೂರನೇ ತರಹದ ಮಕ್ಕಳು ಯಾವುದೋ ಒಂದು ವಿಷಯದಲ್ಲಿ ಆಕರ್ಷಿತರಾಗಿ ಆ ವಿಷಯದ ವಿಶೇಷ ಗಳನ್ನೆಲ್ಲಾ ತಿಳಿದುಕೊಂಡು, ಅದನ್ನು ಗುರಿಯಾಗಿಟ್ಟುಕೊಂಡು ಹಂತಹಂತವಾಗಿ ಸಾಧಿಸುತ್ತ ಹೋಗೋರು.ಯಾವುದೇ ರೀತಿ ಮಕ್ಕಳಾದರೂ ಅವರಲ್ಲಿ ಆತ್ಮ ವಿಶ್ವಾಸ ಇರುವುದು ಅತಿಮುಖ್ಯ ಆಗುತ್ತದೆ. ಅದೇ ಅವರ ಸಾಧನೆಗಳಿಗೆ ಅಥವಾ ಹಂತಹಂತದ ಬೆಳವಣಿಗೆಗಳಿಗೆ ನಾಂದಿ ಹಾಡುವುದು. ಹೀಗೆ ಒಬ್ಬ ಇದ್ದ ಹಗಲು ಕನಸುಗಾರ ರಾತ್ರಿ ಕನಸುಗಾರ ಯಾವಾಗಲೂ ಒಂದೇ ಕನಸು ಅದನ್ನು ನನಸು ಮಾಡಲಿಕ್ಕೆ ಬೇಕಾದಷ್ಟು ಸರ್ಕಸ್ ಮಾಡ್ತಾನೆ.


ಪಿಯುಸಿಗೆ ಸೇರಿದವನು, ಎಲ್ಲರೂ ಇರೋಹಾಗೆ ಸಹಜ ಜೀವಿ. ತೆಳ್ಳಗೆ ಪೇಪೇತ್ಲಾಂಡ ತರನೇ ಇದ್ದ ಸ್ವಲ್ಪ. ಆದರೆ ಮಕ್ಕಳಲ್ಲಿ ಇರಬೇಕಾದ ಕಳೆ ಅವನಲ್ಲಿ ಕೂಡ ಇತ್ತು. ಮೊದಲನೇ ಪಿಯುಸಿ ನಲ್ಲಿ ಒಳ್ಳೆ ಮಾರ್ಕ್ ಬರದಿದ್ದರು ತುಂಬಾ ಚೆನ್ನಾಗಿ ಟೇಬಲ್ ಟೆನ್ನಿಸ್ ಆಡುತ್ತಿದ್ದ. ಸುಮಾರು ಪ್ರಶಸ್ತಿಗಳು ಬರುತಿತ್ತು. ಹೀಗೆ ಒಂದು ದಿನ ಎಲ್ಲಾ ಮಕ್ಕಳಿಗೂ ಕೇಳೋ ಹಾಗೆ ಅವನನ್ನು ಕೇಳಿದೆ ನಿನಗೇನಾಗಬೇಕು ಮುಂದೆ ಎಂತಹ ಆಸೆ? ಮೇಡಂ ನಾನು ನೇವಿ ಸೇರ್ತೀನಿ……. ಅವನ ಮಾತು ಕೇಳಿದಾಗ ಅಲ್ಲಿದ್ದ ಕೆಲವರು ನಗಲು ಶುರು ಮಾಡಿದರು. ಸಹಜವೇ, ಮೇಲುನೋಟಕ್ಕೆ ಹುಡುಗನಲ್ಲಿ ಸೈನಿಕ ಆಗುವ ಯಾವುದೇ ಗುಣಗಳು ಕಾಣುತ್ತಿರಲಿಲ್ಲ-ತಾಳ್ಮೆ ಹಾಗೂ ಶಾಂತ ಮನೋಭಾವ‌… ಅಂಥಾ ವಿಶೇಷವಾದ ವರ್ಚಸ್ಸು ಏನೂ ಇರಲಿಲ್ಲ, ಆದ್ರೂ ನಾನು ಹೇಳ್ದೆ ಉಳಿದವರಿಗೆ “ಯಾಕೆ ನಗ್ತಾ ಇದ್ದೀರಾ?ಅವನ್  ಮನಸ್ ಮಾಡಿದ್ರೆ ಎಲ್ಲಾ ಆಗುತ್ತೆ……ಅವನು, ಆ ಅವನ ಕನಸನ್ನು ನನಸು ಮಾಡಬೇಕೆಂದರೆ ಅದರ ನಿಟ್ಟಿನಲ್ಲಿಯೇ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತಾ ಹೋಗ್ಬೇಕು ಆಗ ಮಾತ್ರ ಸಾಧ್ಯ” ಅವನು ತಟ್ಟನೆ ಹೇಳಿದ “ಹೌದು ಮಿಸ್, ನಾನು ಅದರ ಕಡೆ ಕೆಲಸ ಮಾಡ್ತಾ ಇದ್ದೀನಿ..” ನನಗೆ ಕೇಳಿ ಖುಷಿ ಆದರೂ ಅದನ್ನು ಹೆಚ್ಚು ತೋರಿಸಿಕೊಳ್ಳಲಿಲ್ಲ.“ಕನಸೊಂದನ್ನು ಕಟ್ಟಿದ್ದೀಯ ಅದನ್ನು ನನಸು ಮಾಡಿಕೊಳ್ಳಲು ಬೇಕಾಗುವ ಮೆಟ್ಟಿಲುಗಳನ್ನು ನೀನೇ ಕಟ್ಟಿ ಹತ್ತಬೇಕು.. ಈಗ ಕಷ್ಟಪಟ್ಟರೆ ಮಾತ್ರ ಮುಂದೆ ಸುಖ ಸಿಗುವುದು” ಎಂದೆ.


ಅವನಿಗೆ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಕೆಲವು ಸ್ನೇಹಿತರು ನಗುವರು, ಕೆಲವುಸಾರಿ ಗುರುಗಳು ಅವನ ಪ್ರತಿಭೆಯನ್ನು ಅನುಮಾನದಿಂದ ನೋಡುತ್ತಿದ್ದರು.. ವಿಶೇಷ ಅಂದ್ರೆ ಅವನು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ತಾ ಇರಲಿಲ್ಲವೇನೋ. ಫಸ್ಟ್ ಪಿಯುಸಿ, ಸೆಕೆಂಡ್ ಪಿಯುಸಿ,2 ಆಯ್ತು. ಅವನ ಅಂಕಗಳು ಸಾಧಾರಣವಾಗಿ ಬಂದಿದ್ವು. ಮಧ್ಯಮಧ್ಯ ಕೆಲವು ಬಾರಿ ಬಂದು ನನ್ನ ಬಳಿ ಅವನ ಕನಸುಗಳ ಬಗ್ಗೆ ಮಾತಾಡುತ್ತಿದ್ದ. ಸಲಹೆಗಳನ್ನು ಕೇಳುತ್ತಿದ್ದ, ಓದುವುದು ಬಿಟ್ಟು ಬೇರೆ ಏನೇ ಸಾಧನೆ ಮಾಡಿದರು ನನಗೆ ಕಂಡಿತ ತಿಳಿಯುತ್ತಿತ್ತು ಅವನೇ ಹೇಳಿಕಕೊಳ್ಳುತ್ತಿದ್ದ ನನ್ನತ್ರ. ಹೀಗೆ ದಿನಗಳು ವರ್ಷಗಳು ಕಳೆದುಹೋದವು. ಮುಂದೆ ಅವನಿಲ್ಲ ಎಂಬುದೇ ನನಗೆ ತಿಳಿದಿರಲಿಲ್ಲ .  !,ಒಂದು ದಿನ ಸಡನ್ನಾಗಿ ನನ್ನೆದುರು ಬಂದುಬಿಟ್ಟ “ನನಗೆ ಡಿಫೆನ್ಸ್ ಅಲ್ಲಿ ಕೆಲಸ ಸಿಕ್ತು…109 ಜನ ಮಕ್ಕಳಲ್ಲಿ ಎಲ್ಲಾ ಹಂತಗಳಲ್ಲೂ ಮೊದಲ ಬಾರಿಯೇ ಸೆಲೆಕ್ಟ್ ಆದೆ ಮಿಸ್…..!ನಿಮ್ಮೊಬ್ಬರಿಗೆ ನನ್ನ ಮೇಲೆ ಎಷ್ಟು ನಂಬಿಕೆ ಇದ್ದಿದ್ದು” ಎಂದ.

ಬಹಳ ಖುಷಿಯಾಯ್ತು ನನಗೆ. ಅದಕ್ಕಿಂತ ಹೆಚ್ಚು ಖುಷಿ  ಇದ್ದಿದ್ದು ಏನೆಂದರೆಅವನ ಮುಖದಲ್ಲಿ ವರ್ಚಸ್ಸು ಹೆಚ್ಚಾಗಿತ್ತು, ಜವಾಬ್ದಾರಿ ಇರುವುದು ಎದ್ದುಕಾಣುತ್ತಿತ್ತು “ಎಲ್ಲಾ ಒಳ್ಳೇದಾಗ್ಲಿ” ಅಂತ ಹೇಳಿ ಬಿಟ್ಟು ಬಿಟ್ಟೆ.. ಸಾವಿರಾರು ಮಕ್ಕಳು ಬರುತ್ತಾರೆ ಹೋಗುತ್ತಾರೆ ಎಲ್ಲರ ಲೆಕ್ಕ ಇಡಲು ಸಾಧ್ಯವೇ.

ಅದಾದ ನಂತರ ಸಹಜವಾಗಿ ಸಿಗುತ್ತಿದ್ದ, ಮಾತಾಡುತ್ತಿದ್ದ ಕಷ್ಟ-ಸುಖವನ್ನು ಹಂಚಿಕೊಳ್ಳುತ್ತಿದ್ದ. ನನಗೂ ಅವನ ಮೇಲೆ ಅಭಿಮಾನ ಹೆಚ್ಚುತ್ತಿತ್ತು..

ಒಬ್ಬ ಸಾಮಾನ್ಯ ಹುಡುಗ ತನ್ನ ಕನಸಿನ ದಾರಿಯನ್ನು ಹಿಡಿದು, ಅದರ ಮೇಲೆ ಕೆಲಸ ಮಾಡಿ, ಈಗ ಸಬ್ ಲೆಫ್ಟನೆಂಟ್ ಆಗಿದ್ದಾನೆ, ಇನ್ನು ಸಿ ಡಿಪಿ ಡೈವಿಂಗ್ ಟ್ರೈನಿಂಗ್ ತಗೋಬೇಕು ಎಂಬ ಹೊಸ ಗುರಿ ಇದೆ. ಕಮಾಂಡೋ ಆದರೂ ಏನು ಅಚ್ಚರಿಯ ವಿಷಯವಲ್ಲ…


ಕನಸು ಕಾಣುವುದಷ್ಟೇ ಅಲ್ಲ ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಸಾಧನೆಗಳನ್ನು ಮಾಡಬೇಕು…

===================================================

One thought on “ಅವ್ಯಕ್ತಳ ಅಂಗಳದಿಂದ

Leave a Reply

Back To Top