ಸೃಷ್ಟಿಯ ಮಿಲನ.
ರಾಮಾಂಜಿನಯ್ಯ ವಿ
ಕಾಡ ಕಗ್ಗತ್ತಲು
ಆವರಿಸಿ ಮುತ್ತಿರಲು
ಜೇನ್ ಪರಾಗ ರಿಂಗಣ!
ಚೆಲುವ ಮಧು ಮೃದಂಗ,
ಅಧರಗಳ ಮಧುರ ಗಾನ.
ಚಂದಿರನವೆ ಬಡಿತ,
ಪಕಳೆಗಳ ಚಿಟಪಟ
ಕೇಸರಗಳ ಆಗಮನದಿ
ಸೃಷ್ಟಿಯ ಮಿಲನ..
ದುಂಬಿ ಮದರಂಗಿ ಚಲನ..
ಪೇಳ್,ಹೆಣ್ಣೆ
ನಾಭಿಯಲಿ ನೆತ್ತರು ಬಿಸಿ
ಎದೆಯಲ್ಲಿ ಸಮುದ್ರದಲೆ
ಭೋರ್ಗರೆವ ನಾದ
ತನ್ಮಯ ವಿನೋದ..
ಕರಗುವ ಮುನ್ನ
ಕರಗಿಸೆನ್ನ; ಪೆಣ್ಣೆ,
ಅರಳುವ ಹೂವೆ..
ಮದನದ ವದನಕ್ಕಿದು
ತನು ತರುಲತೆ ಗಾನ.
ಸ್ಪರ್ಶಿಸುವ ನೆಲೆಯಲ್ಲಿ
ಪರಾಗಗಳ ಸೆಲೆ!
ಸುಳಿಯಿರದ ಸಮುದ್ರದಿ
ಕವಲುಗಳ ಕಲನ
ಇದೋ, ಸೃಷ್ಟಿಯ ಮಿಲನ!
=============