ಕವಿತೆಯ ಘನತೆ
ಬಿ.ಎಸ್.ಶ್ರೀನಿವಾಸ್
ಕವಿತೆಗೊಂದು ಘನತೆಯಿದೆ
ಭಾವಗಳ ತೂಕವಿದೆ
ಬಂಧಗಳ ಭಾರವಿದೆ
ಹೃದಯದ ಪಿಸುದನಿಯಿದೆ
ಕವಿತೆಗೊಂದು ಘನತೆಯಿದೆ
ಕಾಣದ ಕಂಬನಿಯಿದೆ
ಕೇಳಿರದಾ ರಾಗವಿದೆ
ರವಿಕಾಣದ ರಸತುಂಬಿದೆ
ಕವಿತೆಗೊಂದು ಘನತೆಯಿದೆ
ಮೈಮರೆಸುವ ಶ್ರುತಿಲಯವಿದೆ
ನೊಂದ ಮನವ ಸಂತೈಸುವ
ಸಾತ್ವಿಕ ಶಕ್ತಿಯಿದೆ
ಕವಿತೆಗೊಂದು ಘನತೆಯಿದೆ
ಹರಿವ ನದಿಯ ಬಳುಕಿದೆ
ಗರಿಗೆದರಿ ನರ್ತಿಸುವ
ನವಿಲಿನ ಲಾಸ್ಯವಿದೆ
ಕವಿತೆಗೊಂದು ಘನತೆಯಿದೆ
ಭಕ್ತಿಯಿದೆ ವಿರಕ್ತಿಯಿದೆ
ತಿಮಿರವನ್ನು ತೊಲಗಿಸುವ
ಸೃಜನ ಸ್ವಯಂಪ್ರಭೆಯಿದೆ
ಹೃತ್ಪೂರ್ವಕ ಧನ್ಯವಾದಗಳು ಮಧುಸೂದನ್ ಅವರೇ
ತುಂಬಾ ಸೊಗಸಾದ ಕವನ. ಹೌದು ಕವಿತೆಗೆ ಈ ಎಲ್ಲಾ ಘನತೆಗಳಿವೆ.
ಅಭಿನಂದನೆಗಳು
ಹೃತ್ಪೂರ್ವಕ ಧನ್ಯವಾದಗಳು
ಸುಂದರ ರಚನೆ.ಅಭಿನಂದನೆಗಳು
ಹೃತ್ಪೂರ್ವಕ ಧನ್ಯವಾದಗಳು ಹುವಾ ಶ್ರೀ
ಬಹಳ ಚೆನ್ನಾಗಿದೆ.
ಇಂತಹ ಸುಂದರವಾದ ಕವನಗಳು ಇನ್ನಾ ಹೆಚ್ಚಾಗಿ ಮೂಡಿ ಬರಲೆಂದು ಆಶಿಸುವ
ನರಸಿಂಹ ಮೂರ್ತಿ
ಹೃತ್ಪೂರ್ವಕ ಧನ್ಯವಾದಗಳು ಮೂರ್ತಿ