ಗಜಲ್ ಸಾಹಿತ್ಯ ಮತ್ತು ಸವಾಲುಗಳು

ಗಜಲ್ ಸಾಹಿತ್ಯ ಮತ್ತು ಸವಾಲುಗಳು

ಲೇಖನ ಗಜಲ್ ಸಾಹಿತ್ಯ ಮತ್ತು ಸವಾಲುಗಳು ಡಾ. ಮಲ್ಲಿನಾಥ ಎಸ್.ತಳವಾರ ಪ್ರಕೃತಿಯನ್ನೊಮ್ಮೆ ಅವಲೋಕಿಸಿದಾಗ ‘ಮನುಷ್ಯ’ ನ ವಿಕಾಸ ದಿಗ್ಭ್ರಮೆಯನ್ನು ಮೂಡಿಸುತ್ತದೆ. ಅದೊಂದು ರೀತಿಯಲ್ಲಿ ಪವಾಡವೇ ಸರಿ ! ಎಲ್ಲ ಪ್ರಾಣಿ ಸಂಕುಲಗಳಿಂದ ಆತನು ವಿಭಿನ್ನವೆನಿಸಿದ್ದು ಮಾತ್ರ ಭಾಷೆಯ ಬಳಕೆಯಿಂದ. ತನ್ನ ಭಾವನೆಗಳನ್ನು ಸಶಕ್ತವಾಗಿ ಅಭಿವ್ಯಕ್ತಿಪಡಿಸಲು ‘ಭಾಷೆ’ ಯನ್ನು ಸಾಧನವನ್ನಾಗಿ ಮಾರ್ಪಡಿಸಿಕೊಂಡನು. ಈ ಭಾಷೆಯ ಉದಯದೊಂದಿಗೆ ಸಾಹಿತ್ಯವೂ ಉದಯವಾಯಿತು ಎನ್ನಬಹುದು. “ಭಾಷೆಯ ಉದಯವೆಂದರೆ ಸಾಹಿತ್ಯದ ಉದಯವೆ ಸರಿ” ( ಕನ್ನಡ ಸಾಹಿತ್ಯ ಚರಿತ್ರೆ, ಪು- ೦೧) ಎಂಬ ರಂ. […]

ಹರಿದ ಬಟ್ಟೆ….

ಹರಿದ ಬಟ್ಟೆ…. ಸುಜಾತ ಕಂದ್ರವಳ್ಳಿ ನನ್ನದು ಅರ್ಧಂಬರ್ಧ ಹರಿದ ಬಟ್ಟೆಆಧುನಿಕತೆಯನ್ನು ವೈಭವೀಕರಿಸಲೆಂದೇಹರಿದುಕೊಂಡ ಬಟ್ಟೆ….!ಹರಕಲು ಬಟ್ಟೆ ಎನ್ನಲಾರೆ….!ಆದರೂ ಹರಿದ ಬಟ್ಟೆ….! ಆಧುನಿಕತೆಯನ್ನು ತೋರಿಸುವ ಭರದಲ್ಲಿ, ಸಾಂಪ್ರಾದಾಯಿಕತೆಯನ್ನು ಮುಚ್ಚಿಡಲೆಂದೇ ಹರಿದುಕೊಂಡ ಬಟ್ಟೆ……!ಅರ್ಧ ಹೊಟ್ಟೆಗೆ ತಾಗುವಂತ ಹಸಿದ ಬಟ್ಟೆ…ಅಂಬಲಿ ಊಟ ನನ್ನದಲ್ಲವೇ ಅಲ್ಲ…!ಮಾಲ್ಟ್ ಎಂದು ಹೆಸರು ಬದಲಿಸಿಕೊಂಡು ಮೆರೆವ ಹರಿದ ಬಟ್ಟೆ.ನನ್ನದು ಅರ್ಧಂಬರ್ಧ ಹರಿದ ಬಟ್ಟೆ. ಅಮ್ಮನ ಹಳೆ ಸೀರೆಗೆ ಹೊಸ ಮೆರುಗು ಕೊಟ್ಟ ಬಟ್ಟೆ,ಅಪ್ಪನ ಲುಂಗಿಗೆ ಅಲಂಕಾರ ಕೊಟ್ಟ ಬಟ್ಟೆ…,ಲುಂಗಿಯನ್ನೆ ಅಂಗಿಯಾಗಿಸಿದ ಬಟ್ಟೆ…ಸೀರೆಯನ್ನೆ ಹೊದಿಕೆಯಾಗಿ ಸಿಂಗರಿಸಿಕೊಂಡ ಬಟ್ಟೆ,ಆದರೇನಂತೆ ನಾ ಹರಕಲು […]

ಕಾವ್ಯಯಾನ

ಬತ್ತಿದೆದೆ ರೇಷ್ಮಾ ಕಂದಕೂರ ಬತ್ತಿದೆದೆಯಲಿ ಬಿತ್ತದಿರು ಕನಸುಸುತ್ತಲೆಲ್ಲ ಕವಿದ ಕತ್ತಲೆಮುತ್ತಿದೆ ಭರವಸೆಯ ಬೆಳಕನುಕುತ್ತಾಗಿದೆ ಕಿತ್ತು ತಿನ್ನುವ ಹುಳುವಿನಂತೆ ಸತ್ಯದ ಹೊನಲಿಗೂ ಸಂಚಕಾರಮಿತ್ಯದ ಝೇಂಕಾರದ ಸಲಿಗೆಅಪತ್ಯದ ನಡೆ ನುಡಿಯುವವರೆ ಹೆಚ್ಚುನಿತ್ಯ ನೇಮವು ದೂರ ತೀರದಲಿ ತೇಲಿ ಕೋಪ ತಾಪದ ಆರ್ಭಟಕೂಪದಲಿ ಸೇರಿದೆ ಮಾನವೀಯತೆಊಹಾಪೋಹದ ಸುಳಿಗೆವಾಸ್ತವವ ಮರೆ ಮಾಚಿದೆ.

ನಿರುತ್ತರ

ಕವಿತೆ ನಿರುತ್ತರ ಮಧುಸೂದನ ಮದ್ದೂರು ನಿನ್ನ ತುದಿ ಬೆರಳುಎದೆ ತಾಕಲುನೂರು ನವಿರು ಪುಳಕ ನಿನ್ನ ಮುಂಗುರುಳುಗಾಳಿ ಗಂಧ ತೀಡಲುಸಾವಿರದ ಸಂಭ್ರಮದ ಘಮಲು ನಿನ್ನ ಕೆಂದುಟಿಅರಳಿ ನಾಚಲುಲಕ್ಷದ ಲಕ್ಷ್ಯವುಅಲಕ್ಷ್ಯವು ನಿನ್ನ ಕಟಿಕುಲುಕಿ ಬಳಕಲುಕೋಟ್ಯನುಕೋಟಿಅಪ್ಸರೆಯರಿಗೂ ಮತ್ಸರ ನಾ…..ನಿರುತ್ತರನಿರಂತರ****************************************

ದಂಡೆಯಲ್ಲಿ ಒಮ್ಮೆ ನಡೆದು..

ಕವಿತೆ ದಂಡೆಯಲ್ಲಿ ಒಮ್ಮೆ ನಡೆದು.. ಫಾಲ್ಗುಣ ಗೌಡ ಅಚವೆ ಕಾರವಾರದ ದಂಡೆಯೆಂದರೆ ನನಗೆಅದೆಂಥದೋ ಪ್ರೀತಿಸಂಜೆ ಮುಂಜಾವೆನ್ನದೇಸದಾ ಗಿಜುಗುಡುವ ಜನರುಈ ದಂಡೆಯಲ್ಲಿ ನಡೆದುಅದರ ಜೊತೆ ಒಬ್ಬೊಬ್ಬರೇಸಂಭಾಷಿಸಿಸುತ್ತಾರೆ ಮತ್ತುಹಗುರಾಗುತ್ತಾರೆ. ದಿಗಂತದಿಂದೋಡಿ ಬರುವ ಅಲೆಗಳುನಡೆವ ಪಾದಗಳ ತಂಪುಗೊಳಿಸಿಎಂತೆಂಥದೋ ಒತ್ತಡಗಳಿಂದ ವ್ಯಗ್ರವಾದವರಿಗೆಸಾಂತ್ವನ ನೀಡುತ್ತವೆ. ದಂಡೆಯಲ್ಲಿ ಸಿಗುವ ಪರಿಚಿತ ಕೊಂಕಣಿಗರು‘ ನಂಗೆ ಅಷ್ಟಾಗಿ ಕನ್ನಡ್ ಬರುದಿಲ್ಲ ಹಾಂ’ಎಂದು ಕನ್ನಡದಲ್ಲಿಯೇ ಮಾತಿಗಿಳಿಯುತ್ತಾರೆಕನ್ನಡ ದ್ವೇಶಿಸದ ಆ ಕೊಂಕಣಿಗರ ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ.ಯಾಕೆಂದರೆ, ಯಾರ ಸುದ್ದಿಗೂ ಹೋಗದ ಅವರು‘ತಾವಾಯಿತು ತಮ್ಮ ಕೆಲಸಾಯಿತು’ ಅಷ್ಟೇ! ನೀವು ಎಲ್ಲಿಂದಲೇ ಬಂದು […]

ಗೋವು ಮತ್ತು ರೈತ

ಕವಿತೆ ಗೋವು ಮತ್ತು ರೈತ ಡಾ.ಶಿವಕುಮಾರ್ ಮಾಲಿಪಾಟೀಲ ಗೋವು ಪುಣ್ಯಕೋಟಿರೈತ ಪುಣ್ಯಾತ್ಮಗೋವು ತ್ಯಾಗಿರೈತ ಯೋಗಿ ಗೋವು ಬೀದಿಪಾಲಾಗಿದೆರೈತ ಗುಳೆ ಹೊರಟಿದ್ದಾನೆ ಇಬ್ಬರೂ ಮೂಖರೆಇಬ್ಬರೂ ಅಮಾಯಕರೆ ರೈತ ಕಷ್ಟ ಪಡುತ್ತಾನೆಹಗಲು ರಾತ್ರಿ ಎನ್ನದೆಜಗಕೆ ಅನ್ನ ಕೊಡಲುಜಾತಿ ಧರ್ಮ ನೋಡದೆ ಎತ್ತು ಕಷ್ಟ ಪಡುತ್ತದೆರೈತ ಮಿತ್ರನಾಗಿ ಉಳಿಮೆಮಾಡುತ ಮಳೆ ಬಿಸಿಲು ಲೆಕ್ಕಿಸದೆ, ಬಾರಕೊಲು ಏಟುತಿಂದರೂ ಒಮ್ಮೆಯೂ ಎದುರಾಡದೆ ಗೋವಿನ ಹಾಲು ಮೊಸರುತುಪ್ಪ ನೀಡುತ್ತದೆ ಮಕ್ಕಳಿಂದಮುದುಕರವರೆಗೆಜಾತಿ ಧರ್ಮ ಕೇಳದೆ ಹೌದುಗೋವಿನ ಹೊಟ್ಟೆಯಲ್ಲಿ ಬಂಗಾರವಿದೆರೈತನ ಬೆನ್ನಿನ ಮೇಲೆದೇಶ ನಿಂತಿದೆ ಗೋವಿನ ಹೊಟ್ಟೆ ಕೊಯ್ಯತ್ತಿದ್ದಾರೆ […]

ಗಜಲ್

ಗಜಲ್ ವೀರಅಮರಸುತೆ ಮನದೊಳಗಿನ ಕಿಚ್ಚಿನಿಂದ ದೀಪ ಹೊತ್ತಿಸಬೇಡ ಗೆಳೆಯನಿರ್ಮಲ ಜ್ಯೋತಿ ಬೆಳಗಿಸು ಅಶಾಂತಿಯ ಕದವ ತಟ್ಟಬೇಡ ಗೆಳೆಯ ಇನ್ನೆಷ್ಟು ದಿನ ಹಗೆಯ ಸಾಧಿಸುವೆ ಹೊಗೆಯ ಹೊತ್ತಿಸುವೆಶರಣಾಗು ಸ್ನೇಹಕೆ ‌ಕರಿನೆರಳ ಗತವನು ಮರುಕಳಿಸಬೇಡ ಗೆಳೆಯ ಇರುವ ಸೇತುವೆಯ ಬೀಳಿಸುವೆ ಮನಸ್ಸು ದೂರ ಮಾಡುವೆ ಏಕೆಬಂಧ ಬೆಸೆಯುವ ನಾವು ಅಡ್ಡಗೋಡೆ ಕಟ್ಟಬೇಡ ಗೆಳೆಯ ತೋರಿಕೆಗೆ ಹಣತೆ ಎಣ್ಣೆಯಾಗೋಣ ಎಂಬ ಜಂಭವೇಕೆಶಮಭಾವಬತ್ತಿಯಾಗಿ ಬೆಳಕ ಬೆಳಗುವ ಬಿರುಗಾಳಿ ಬೀಸಬೇಡ ಗೆಳೆಯ ಸಕಲರ ಬಾಳಿಗೆ ಭಾಗ್ಯಜ್ಯೋತಿಯಾಗುವ ಬಯಕೆ ಎನಗೆ ಸಾಕಿನಂದಾದೀಪಕೆ ತೈಲವಾಗುವ ಪ್ರೀತಿ ಪ್ರಣತಿಯ […]

ಅಂಕಣ ಬರಹ ಕಗ್ಗಗಳ ಲೋಕ ಆದರಣೀಯ ಡಾII ಡಿ. ವಿ. ಗುಂಡಪ್ಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ಒಂದು ಮೇರುಕೃತಿ. ಅವರ ಒಂದೊಂದು ಮುಕ್ತಕವೂ ಕೂಡ ಸಾರ್ವಕಾಲಿಕ ಸತ್ಯ! ಜೀವನದಲ್ಲಿ ಎದುರಾಗುವ ಸಾವಿರಾರು ಪ್ರಶ್ನೆಗಳಿಗೆ ತತ್ವಶಾಸ್ತ್ರ,ಸ್ವಾನುಭವ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಉತ್ತರ ನೀಡುವ ಕಗ್ಗಗಳು ಓದುಗರಿಗೆ ಆಪ್ತವಾಗಿ ಬಿಡುತ್ತವೆ. ಒಬ್ಬ ಸಾಮಾನ್ಯ ಮನುಷ್ಯನಂತೆ ಮೈತ್ರಿಭಾವದಿಂದ ಬರೆದ ಈ ಕಗ್ಗಗಳು ಅಸಂಖ್ಯ ಮಂದಿಗೆ ಸಾಂತ್ವನ ನೀಡುತ್ತವೆ. “ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯದನ್ನೇ ಕಂಡು , ಜೀವನದ ಸೊಬಗನ್ನು ಸವಿಯಬೇಕು” ಎಂದು ದಾರಿತೋರುವ […]

ಅಂಕಣ ಬರಹ ನಾಗರಾಜ ಎಂ ಹುಡೇದ       ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಂಗೋಡ ಹುಟ್ಟೂರು. ಬಡತನದಲ್ಲಿ ಬೆಳೆದು, ಪರಿಶ್ರಮದಿಂದ ಶಿಕ್ಷಣವನ್ನು ಪಡೆದು ೨೦೦೪ ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೈಲಂದೂರು ಗೌಳಿವಾಡದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹದಿನೇಳು ವರ್ಷಗಳಿಂದ ಅದೇ ಕುಗ್ರಾಮದಲ್ಲಿ ಅಚ್ಚುಮೆಚ್ಚಿನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಗುಣಮಟ್ಟದ ಉತ್ತಮ ಶಾಲೆಯನ್ನಾಗಿಸಿದ್ದಾರೆ.      ಬೋಧನೆಯನ್ನು ವೃತ್ತಿಯಾಗಿಸಿಕೊಂಡು ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡು ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ನಿರಂತರ ಅಭ್ಯಾಸ, ಸಾಹಿತ್ಯಿಕ ಕಾರ್ಯಕ್ರಮಗಳ […]

ಪ್ರಶಸ್ತಿ ಘೋಷಣೆ

ಪ್ರಶಸ್ತಿ ಘೋಷಣೆ ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಪ್ರಶಸ್ತಿಗಳು ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಇವರ ವತಿಯಿಂದ ಪ್ರತಿ ವರ್ಷ ಸಾಹಿತ್ಯ,ಶಿಕ್ಷಣ,ಸಮಾಜಸೇವೆಯಲ್ಲಿ ಸೇವೆ ಸಲ್ಲಿಸಿದ ನಾಡಿನ ಹಿರಿಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿಕೊಂಡು ಬರಲಾಗುತ್ತಿದೆ 2019-20 ನೇ ಸಾಲಿನಲ್ಲಿಕನಕ ಶರೀಫ ಪುರಸ್ಕಾರ 1-ಬಿ.ಶ್ರೀನಿವಾಸ-2019 ದಾವಣಗೆರೆ2-ಅಲ್ಲಾಗಿರಿರಾಜ-2020 ಕೊಪ್ಪಳ ಡಾ.ಹಿರೇಮಲ್ಲೂರ ಈಶ್ವರನ್ ಶಿಕ್ಷಕ ಪುರಸ್ಕಾರ 1-ಡಾ.ವಾಯ್.ಎಂ.ಯಾಕೊಳ್ಳಿ-2019 ಬೆಳಗಾವಿ2-ಜಿ.ಎಸ್.ಬಿಜಾಪುರ-2020 ಬಾಗಲಕೋಟೆ ಡಾ.ಅರಟಾಳ ರುದ್ರಗೌಡರ ಸಾಮಾಜಿಕ ಸೇವಾ ಪುರಸ್ಕಾರ 1-ಡಾ.ಹನುಮಂತಪ್ಪ ಪಿ.ಎಚ್.2019 ಶಿಗ್ಗಾಂವ2-ಅಕ್ಷತಾ ಕೆ.ಸಿ.2020 ಹಾವೇರಿ. ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜನೇವರಿ 2021 […]

Back To Top