ಅನಿರ್ಬಂಧ

ಜೀಕು ಜೋಕಾಲಿ

ಜೀಕು ಜೋಕಾಲಿ ಕೆ.ಸುನಂದಾ ಸಾಗುತಿರಲೀ ಪಯಣ ನಿಲ್ಲದೇ ಬಾಳಲಿಏಳು ಬೀಳುಗಳೆನಿತು ಬಂದರೂ ಬರಲಿಕಾರ್ಮೋಡ ಕರಗುತ ಸರಿಯಲೇಬೇಕುಹಸನಾದ ಹೊಂಬೆಳಕು ಸೂಸಲೇಬೇಕು ಬದುಕೊಂದು ಆಟ ಸವಿಯ ರಸದೂಟಆಸ್ವಾದಿಸುತ ನಡೆ ಸುಂದರದಾ ನೋಟದೇವನಿತ್ತ ಕಾಣಿಕೆ ಈ ಜಗದ ಚಲನೆಯುನಾವೆಲ್ಲರೂ ಅವನಾಟದ ಗೊಂಬೆಯು ಒಲವಿನ ಹಂದರದಿ ಜೀಕುತ ಜೋಕಾಲಿಏರಿಳಿಯುತ್ತ ಸಾಗು ನೀ ಸಮಭಾವದಲಿಸ್ಥಿರವಲ್ಲವೋ ಬಂಧನಗಳು ಭುವಿಯಲಿಇದ್ದರೂ ಇಲ್ಲದಂತೆ ಇರಬೇಕು ಜಗದಲಿ ಪ್ರೀತಿ ಪ್ರೇಮದ ಮನಸ್ಸುಗಳೆ ಆಲಯವುಅಂತರಾತ್ಮನೇ ಗರ್ಭಗುಡಿಯ ದೇವನುವರ್ಣಿಸಲಾಗದ ಪ್ರಕೃತಿಯ ಪೂಜಿಸುತ್ತನಡೆ ನೀ ಉಪಕಾರ ಸ್ಮರಣೆ ನೆನೆಯುತ್ತ **************************************

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಮನದ ದುಗುಡ ಕಳೆಯಲಿಕ್ಕೆ ಇರುವುದೊಂದು ಕಿಟಕಿ ಜಗದ ತಮವ ತೊಡೆಯಲಿಕ್ಕೆ ಇರುವುದೊಂದು ಕಿಟಕಿ – ಅರಿವ ಕುಡಿದು ಎದೆಯ ತೆರೆದು ಮೂಡಿತೊಂದು ಕನಸು ಬಯಲ ಹಕ್ಕಿ ಮೇಲೆ ಹಾರಲಿಕ್ಕೆ ಇರುವುದೊಂದು ಕಿಟಕಿ – ಏನೊಂದೂ ಇರದ ತಾಣದಿಂದ ತೇಲಿ ಬಂತೊಂದು ರಾಗ ರಾಗದೊಳಗೆ ರಾಗ ಮೂಡಲಿಕ್ಕೆ ಇರುವುದೊಂದು ಕಿಟಕಿ – ಸೂರ್ಯ ಚಂದ್ರ ತಾರೆ ಧೂಮಕೇತು ಮತ್ತದೇ ಕಾಲಚಕ್ರ ಜೀವಸೆಲೆಯ ಸುರುಳಿ ಮೂಡಲಿಕ್ಕೆ ಇರುವುದೊಂದು ಕಿಟಕಿ – ನೊಂದು ಬೆಂದು ದಹಿಸಿಕೊಂಡು ಅರಳಿತೊಂದು […]

ಒಲವಿನೋಲೆ..

ಒಲವಿನೋಲೆ.. ಜಯಶ್ರೀ.ಭ. ಭಂಡಾರಿ ಓ ಒಲವೇ ನೀ ಎಲ್ಲಿರುವೆ…. ನೀ ನನ್ನ ಹುಡುಕಿಕೊಂಡು ಬಂದು ಆಗಲೇ ೨ ವರ್ಷ ಕಳೆಯಿತು. ನೀ ಬಂದಾಗ ನನಗೆ ನಿನ್ನ ಮೇಲೆ ಅದ್ಯಾವ ಭಾವನೆ ಗಳೇ ಇರಲಿಲ್ಲ. ಈಗ ನಾನು ಈ ಭೂಮಂಡಲಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ.  ಪ್ರತಿಕ್ಷಣ ನಿನ್ನ ಬಿಟ್ಟರೆ ಹರಿದಾಡುವ ಗಾಳಿಗೂ ಜಾಗವಿಲ್ಲ. ನನ್ನ ಬಾಳಿನ ಕಗ್ಗತ್ತಲು ಬೆಳಗಲು ನೀನೇ ಬೇಕು. ಅತಿಯಾದ ಪ್ರೀತಿಯಲ್ಲಿ ನನ್ನ ನಾ ಮರೆತಿಹೆ.ನೀನಿಲ್ಲದ ಹೊತ್ತು ನೆನೆಯಲು ಸಾಧ್ಯವಿಲ್ಲ. ನಿನ್ನಲ್ಲಿ ಒಂದು ಕೆಟ್ಟ ಹಾಬಿ ಇದೆ.ಡ್ಯೂಟಿಯಲಿ […]

ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಅನುಭವ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಚಂದ್ರಮತಿ ಅದೊಂದು ಸಂಜೆ ! ಸಹಿಸಲಾರದ ವೇದನೆ ಆತಂಕ .ಬಲಹೀನ ತೋಳುಗಳು . ಏನಾಯ್ತು , ಹೇಗಾಯ್ತು ಮುಂದೆ ನಾನು  ಕೆಲಸ ಮಾಡೋದು ಹೇಗೆ  ಎಂದೆಲ್ಲ ಯೋಚಿಸ್ತಾ ಸಮಯ ವ್ಯರ್ಥಮಾಡಿ ಸಹಿಸಿಕೊಳ್ಳಲು ಅಸಾಧ್ಯ ವಾದಾಗ ಮೊರೆ ಹೋಗಿದ್ದು ಗೂಗಲ್ ಮಹಾಶಯನನ್ನು . ಅವನ ಸಲಹೆಯಂತೆ ಮನೆಯ ಸನಿಹದಲ್ಲೇ ಇರುವ ರೂಪೇಶ್ ಆರ್ಥೋಪೆಡಿಕ್ ಸೆಂಟರ್ಗೆ ಬೇಟಿ ಕೊಟ್ಟಾಗ ಅಲ್ಲಿಯ ಡಾ. ರೂಪೇಶ್ ಅವರು ಸರಳ ಮಾತು ಹಾಗೂ ಸೌಜನ್ಯತೆಯಿಂದ ಸರಿಯಾದ ಚಿಕಿತ್ಸೆ […]

ಆಗು ಅನಿಕೇತನ…!!

ಆಗು ಅನಿಕೇತನ…!! ಡಾ.ಉದಯ ಧರ್ಮಸ್ಥಳ ಆಹಾ…ಮನುಜ ಮತಿಯೇ…!ಏನೆಂಬೆ ನಿನ್ನ ನಿರ್ಣಯಗಳಿಗೆ…!ಬಡವನಿಗೆ ಮಗನಾಗಿ ಬಂದರೆ ಪ್ರಾರಬ್ದವೆಂಬೆ…ಸಿರಿಮನೆಯ ಸಂತಾನ ಅದೃಷ್ಟವೆಂಬೆ…!ಗೊಡ್ಡು ಪಾಪಿಯವಳಂತೆ ಹೆರದ ಹೆಂಗಸಾಕೆ…!ಹೆಡ್ಡುನಂಬಿಕೆಗಳವು ಹಿಂಬಾಲಿಸುವ ಕಂತೆಯಂತೆ…!ಇದ್ದಕ್ಕಿದ್ದಂತೆ ಎದೆಯೊಡೆದು ಸಾಯೆ ಪುಣ್ಯಮರಣವದಂತೆ…!ಹಲವುದಿನ ನರಳಾಡಿಯೋಡಿದವ ಪಾಪಿಯಂತೆ….!ಹುಚ್ಚು, ಕಾಣದ ಆಚೆ ಸುಖ ದುಃಖಗಳ ಅಲೋಕಗಳಂತೆ…!ನಂಬಿಸುವ ನರಳಿಸುವ ಬಗ್ಗಿಸುವ ಬಾಗಿಸುವ ಹಿಂಸಿಸುವ ಹಿಂಡು ಪುರಾತನ ಸಂತೆ…!ಮನ ಮತಿ ಗತಿ ಜಾತಿ ಭ್ರಾಂತಿ ಭ್ರಮೆಯ ಭ್ರಮಣ ಎಲ್ಲಕ್ಕಿಂತಲೂ ಕತ್ತಲೆಕಳೆವ ಕಾಲವಾಗಲಿ ಸಂಕ್ರಮಣ..!ಕೊರಡು ಕಳೆದೊಗೆಯೆ ಧೃತಿಗದೇನೋ ಕಟ್ಟುಪುರಾಣ…!ಇದ್ದಾಗ ಸಹಕರಿಸುಬಿದ್ದಾಗ ಮೇಲೆತ್ತುಒದ್ದಾಗ ಗುಮ್ಮಿಬಿಡು…!ಸಾವು ಸಹಜ…ಅದಕೂ ಮೊದಲು ಬದುಕೂ ಮುಖ್ಯ […]

ಕರುನಾಡು (ಭೋಗಷಟ್ಪದಿ)

ಕರುನಾಡು (ಭೋಗಷಟ್ಪದಿ) ಶುಭಲಕ್ಷ್ಮಿ ಆರ್ ನಾಯಕ (ಮೂರು ಮಾತ್ರೆಯ ಗಣಗಳು) ಎನಿತು ಅಂದ ನಮ್ಮ ನಾಡುಎನಿತು ಮಧುರ ನಮ್ಮ ನುಡಿಯುವೈಭವದ ಇತಿಹಾಸದ ಚೆಲುವ ಕರುನಾಡುಕೆಚ್ಚೆದೆಯ ಕಲಿಗಳ ನಾಡುಹಚ್ಚ ಹಸಿರ ಸೊಬಗ ಬೀಡುವೀರ ಯೋಧರ ತ್ಯಾಗ ಮೆರೆದಿಹ ಕರುನಾಡು//೧// ಸಾಧು ಸಂತರು ಅವತರಿಸಿಪಾವನಗೊಳಿಸಿದರು ನಾಡಕಟ್ಟಿದರು ಅವರು ಸಮತಾಭಾವದಿ ಬೀಡಪುಣ್ಯನದಿಗಳು ಪ್ರವಹಿಸಿಪಾಪ ತಿಕ್ಕಿ ತೊಳೆದು ಧನ್ಯಮಾಡಿವೆ ನಮ್ಮೆಲ್ಲರ ಕರುನಾಡ ಬೀಡಲಿ//೨// ಮಣ್ಣ ಕಣಕಣದಲಿ ಒಲವುಗೆಲುವ ಗೇಯದಲಿ ಒಲುಮೆಯುಕನ್ನಡಿಗರ ಮನದಲಿ ಮಿಡಿದಿಹುದು ನೋಡಿರಿಮಾನ್ಯವಿರಲಿ ನಾಡು ನುಡಿಗೆಬಳಕೆಯಾಗಲಿ ಕನ್ನಡವುಆರದೆ ಉರಿಯಲಿ ಕನ್ನಡದನಾಡ ದೀಪವು//೩// […]

ಗಜಲ್

ಗಜಲ್ ಸಿದ್ದರಾಮ ಹೊನ್ಕಲ್ ಹೇಳಬೇಕಾದ ಮಾತೆಲ್ಲವನು ಹೇಳಿಯಾಯಿತು ಮತ್ತೇನು ಮಾಡಲಿಕೇಳಬೇಕಾದ ಮಾತೆಲ್ಲ ಮತ್ತೆ ಕೇಳಿಯಾಯಿತು ಮತ್ತೇನು ಮಾಡಲಿ ತಿಳಿಯದವರಿಗೆ ತಿಳಿಸಬಹುದು ತಿಳಿದು ಮೌನ ಆದರೇನು ಮಾಡಲಿಮನದ ಬಯಕೆ ಬಾಯಿಬಿಟ್ಟು ಕಂಗಾಲಾಯಿತು ಮತ್ತೇನು ಮಾಡಲಿ ಕಾಯ ಕಾಯಬೇಕು ನಿಜ ಆ ಕಾಯುವಿಕೆಗೆ ಕೊನೆ ಯಾವಾಗಪಿಸುಮಾತು ಬಿಸುಮಾತಾಗಿ ಆಟವಾಯಿತು ಮತ್ತೇನು ಮಾಡಲಿ ಪ್ರೀತಿಯಲಿ ಬಿದ್ದವರೆಲ್ಲ ಹುಚ್ಚರೆಂಬ ಸತ್ಯ ಇಡೀ ಜಗವು ಬಲ್ಲದುಸತ್ಯ ಹುಚ್ಚೆನಿಸಿ ಬಾಗಿಲು ಮುಚ್ಚಿಯಾಯಿತು ಮತ್ತೇನು ಮಾಡಲಿ ಹೇಳಿ ಕೇಳಿ ಬೇಸತ್ತು ಬಸವಳಿದು ಹೋಗಿಹನು ನೀ ಬಲ್ಲೆ ಸಾಕಿತರವಲ್ಲ […]

ಕಾವ್ಯಯಾನ

ರೊಕ್ಕದಿ ದಕ್ಕದೊಡವೆ ಅವಳು ನಿನ್ನ ಹೆತ್ತು ಹೊತ್ತವಳು ಹೆಣ್ಣುವಾತ್ಸಲ್ಯದಿ ಸಲಹಿದವಳು ಹೆಣ್ಣುಅವಳ ಮೇಲೆ ಹಸಿದ ಪಿಶಾಚಿಗಳ ಕಣ್ಣುಕಾಮದಬ್ಬರದಿ ಸಿಲುಕಿ ಆದಾಳೋ ಮಣ್ಣು ಹೆಜ್ಜೆ ಹೆಜ್ಜೆಗೂ ಸಜ್ಜಿಕೆಯನ್ನೇರಿಯಶಸ್ಸಿನ ಮುಕುಟ ಧರಿಸಿದರುಕಾಮ ಪಿಪಾಸುಗಳ ಹಸಿವಲಿನಲುಗಿಹಳು ಕಮರಿಹಳು ಬಡಪಾಯಿ ಹೆಣ್ಣ ತಿನ್ನುವಆಸೆ ಏಕೆ ಪಿಪಾಸುಗಳೇಈ ಘೋರ ತುಂಬಿದ ಕೃತ್ಯಕ್ಕೆಬೀದಿ ನಾಯಿ ಕಣ್ಣೀರಿಡುತ್ತಿದೆ ಅವಳ‌ ಹರಿದು ಸೊಕ್ಕಲ್ಲಿಮುಕ್ಕವೆಯಾಹೊಕ್ಕಳಿನ ನಂಟಿಟ್ಟು ಮುತ್ತಿಕ್ಕಿದಸಂಕುಲದವಳು, ರಕ್ಕಸನು ಹೊಕ್ಕಿದನೇನಿನ್ನ ರೊಕ್ಕದಿ ದಕ್ಕಿಸಲಾರದ ಒಡವೆಯವಳು ಅಳಿಸದಿರು ಕಣ್ಣೀರು ತರಿಸದಿರುನಿನ್ನಾಸೆಯ ಹಸಿವಲ್ಲಿ ದಹಿಸದಿರುಅವಳ ಮನಸು ನೋಯಿಸದಿರುಹಸಿವ ಹಿಂಗಿಸಿ ಉಸಿರಾಡಲು ಬಿಡು **************************************** […]

ಲಂಕೇಶ್ ವಿಶೇಷ ಲಂಕೇಶ್ ಪತ್ರಿಕೆಯ ಪ್ರಭಾವ ಚಂದ್ರಪ್ರಭ  ಎಂಭತ್ತರ ದಶಕದ ದಿನಗಳವು. ನಾವೆಲ್ಲ ಮಾಧ್ಯಮಿಕ ಶಾಲಾ ಶಿಕ್ಷಣದ ಹಂತದಲ್ಲಿದ್ದ ಸಮಯ. ಅಪ್ಪನ ಪುಸ್ತಕ ಪ್ರೇಮದಿಂದಾಗಿ ಸಹಜವಾಗಿ ನಾವೆಲ್ಲ ಮಕ್ಕಳು ಆ ಪ್ರಭಾವಕ್ಕೆ ಒಳಗಾಗಿದ್ದ ಸಂದರ್ಭ. ಚಂದಮಾಮ,  ಸುಧಾ ಪತ್ರಿಕೆಗಳು ನಿಯಮಿತವಾಗಿ ಓದಿಗೆ ಸಿಗ್ತಿದ್ದುವು. ಜೊತೆಗೆ ನಿತ್ಯ ಸಂಗಾತಿ ಪ್ರಜಾವಾಣಿ. ಲಂಕೇಶ್ ಪತ್ರಿಕೆ ಎಂಬ ಹೊಸ ಪತ್ರಿಕೆಯೊಂದು ಮನೆ ಪ್ರವೇಶಿಸಿತು. ಅಷ್ಟೇ ಸಲೀಸಾಗಿ ಮನಸ್ಸನ್ನೂ ಪ್ರವೇಶಿಸಿತು. ಮುಖ್ಯವಾಗಿ ಜಾಹೀರಾತುಗಳೇ ಇಲ್ಲದ ಹೊಸ ವಿನ್ಯಾಸ, ಆಕರ್ಷಕ ಶೀರ್ಷಿಕೆಗಳು ಪತ್ರಿಕೆಯ ವೈಶಿಷ್ಟ್ಯವಾಗಿದ್ದವು. […]

Back To Top