ಆಗು ಅನಿಕೇತನ…!!
ಡಾ.ಉದಯ ಧರ್ಮಸ್ಥಳ
ಆಹಾ…ಮನುಜ ಮತಿಯೇ…!
ಏನೆಂಬೆ ನಿನ್ನ ನಿರ್ಣಯಗಳಿಗೆ…!
ಬಡವನಿಗೆ ಮಗನಾಗಿ ಬಂದರೆ ಪ್ರಾರಬ್ದವೆಂಬೆ…
ಸಿರಿಮನೆಯ ಸಂತಾನ ಅದೃಷ್ಟವೆಂಬೆ…!
ಗೊಡ್ಡು ಪಾಪಿಯವಳಂತೆ ಹೆರದ ಹೆಂಗಸಾಕೆ…!
ಹೆಡ್ಡುನಂಬಿಕೆಗಳವು ಹಿಂಬಾಲಿಸುವ ಕಂತೆಯಂತೆ…!
ಇದ್ದಕ್ಕಿದ್ದಂತೆ ಎದೆಯೊಡೆದು ಸಾಯೆ ಪುಣ್ಯಮರಣವದಂತೆ…!
ಹಲವುದಿನ ನರಳಾಡಿಯೋಡಿದವ ಪಾಪಿಯಂತೆ….!
ಹುಚ್ಚು, ಕಾಣದ ಆಚೆ ಸುಖ ದುಃಖಗಳ ಅಲೋಕಗಳಂತೆ…!
ನಂಬಿಸುವ ನರಳಿಸುವ ಬಗ್ಗಿಸುವ ಬಾಗಿಸುವ ಹಿಂಸಿಸುವ ಹಿಂಡು ಪುರಾತನ ಸಂತೆ…!
ಮನ ಮತಿ ಗತಿ ಜಾತಿ ಭ್ರಾಂತಿ ಭ್ರಮೆಯ ಭ್ರಮಣ ಎಲ್ಲಕ್ಕಿಂತಲೂ ಕತ್ತಲೆಕಳೆವ ಕಾಲವಾಗಲಿ ಸಂಕ್ರಮಣ..!
ಕೊರಡು ಕಳೆದೊಗೆಯೆ ಧೃತಿಗದೇನೋ ಕಟ್ಟುಪುರಾಣ…!
ಇದ್ದಾಗ ಸಹಕರಿಸು
ಬಿದ್ದಾಗ ಮೇಲೆತ್ತು
ಒದ್ದಾಗ ಗುಮ್ಮಿಬಿಡು…!
ಸಾವು ಸಹಜ…
ಅದಕೂ ಮೊದಲು ಬದುಕೂ ಮುಖ್ಯ
ಕಂಡರೆ ಕಾಣು
ಕಾಣದಿರೆ ಕಣ್ಮುಚ್ಚು…!
ಸಹಿಸು ಸಹಿಸುವ ತನಕ…!
ಅಸಹ್ಯವಾದಾಗ ಮುಗಿದುಬಿಡು….!
ವೃಂದಾವನ ಗದ್ದುಗೆ ಸಮಾಧಿಯಡಿ ಹುದುಗದಿರು….!
ನೀರಲ್ಲಿ, ಬೆಂಕಿಯಲಿ, ಮಣ್ಣಲ್ಲಿ ಸೇರಿಬಿಡಲಿ ಭೌಮಿಕ ದೇಹ…!
ಗುರುತು ಸಿಗದಿರಲಿ…
ಕುರುಹು ಬಿಟ್ಟರೆ ಸತ್ತ ಬದುಕನ್ನೂ ಸಿಗಿದು ಸೊಕ್ಕುವರಯ್ಯಾ ಮುಂದಿನ ನರರು…!
ಆ ಗೀತೆ ಸತ್ಯ….ಅದುವೇ ನಿತ್ಯ…. ಆಗು ಅನಿಕೇತನ…!!
–
ಅದ್ಭುತವಾಗಿದೆ