ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಎಂದು ಹೋಯಿತು ನನ್ನ ಬಾಲ್ಯ
ಹನ್ನೊಂದರ ಹದ ಮಾಗಿದ ಕ್ಷಣವೇ
ಸ್ವರ್ಗ ನರಕಗಳು ಭೂಗೋಳದ ಪುಸ್ತಕದಲ್ಲಿ
ಸಿಗುವುದಿಲ್ಲ ಎಂದರೆ
ಅವು ಇಲ್ಲವೆಂದೇ ಎಂದು
ಅರಿತ ದಿನವೇ.

ಎಂದು ಹೋಯಿತು ನನ್ನ ಬಾಲ್ಯ
ಹಿರಿಯರಲ್ಲಿ ಹಿರಿತನವಿಲ್ಲ
ಕಾಣಿಸುವಷ್ಟು ಕಸುವೇನಿಲ್ಲಾ
ಪ್ರೀತಿಯ ಬಗ್ಗೆ ಮಾತನಾಡಿ ಪ್ರೀತಿಯ ಬಗ್ಗೆ ಬೋಧಿಸಿ
ಎಂದೂ ಪ್ರೀತಿಯಿಂದವರ್ತಿಸಲಿಲ್ಲಾ ಎಂದು
ಅರಿತ ಆ ದಿನವೇ.

ಎಂದು ಹೋಯಿತು ನನ್ನ ಬಾಲ್ಯ
ನನ್ನ ಮನಸು ನನಗೆ ಮಾತ್ರಾ
ನನಗೆ ಬೇಕಾದ ಹಾಗೆ ಬಳಸಿ
ಇತರರ ಆಲೋಚನೆಗಳನ್ನು ಬಳಸದೇ
ನನ್ನ ಆಲೋಚನೆಗಳ ಕರ್ತೃ ನಾನಲ್ಲದೇ ಮತ್ತಾರೂ ಆಗಲಾರರು
ಇಂದು ಅರಿತ ಆ ದಿನವೇ

ಎಲ್ಲಿ ಹೋಯಿತು ನನ್ನ ಬಾಲ್ಯ
ಮರೆಯಾಗಿ ಮರೆತು ಹೋದ ಜಾಗಕ್ಕೆ
ನವಜಾತ ಶಿಶುವಿನ ಮುಖದಲ್ಲಿ ಅಡಗಿದೆ
ಎಂಬುದಷ್ಟೇ ನನಗೆ ಗೊತ್ತು.


About The Author

1 thought on “ಮರ್ಕೌಸ್ ನಟ್ಟೆನ್ ಇಂಗ್ಲೀಷ್ ಕವಿತೆ “Childhood” ಕವಿತೆಯ ಭಾವಾನುವಾದ ಡಾ.ಪ್ರಹ್ಲಾದ್‌ ಎಂ. ಅವರಿಂದ”

Leave a Reply

You cannot copy content of this page

Scroll to Top