ಜ್ಞಾನ ಸಂಗಾತಿ
ಭಾರತಿ ನಲವಡೆ

ಜ್ಞಾನಪೀಠ
ಎರಡನೆ ಜ್ಞಾನಪೀಠ ಪ್ರಶಸ್ತಿ ಪಡೆದವರು-1966
ತಾರಾಶಂಕರ ಬಂದೋಪಾಧ್ಯಾಯ

ತಾರಾಶಂಕರ ಬಂದೋಪಾದ್ಯಾಯ ಅವರು ಜ್ಞಾನಪೀಠ ಪ್ರಶಸ್ತಿ ಪಡೆದ ಎರಡನೆಯ ಭಾರತೀಯ ಸಾಹಿತಿಗಳಾಗಿದ್ದಾರೆ. ಬಂಗಾಳಿ ಭಾಷೆಯ ಪ್ರಸಿದ್ಧ ಭಾರತೀಯ ಕಾದಂಬರಿಕಾರ ಮತ್ತು ಬರಹಗಾರರಾಗಿದ್ದರು. ಇವರ ಬರಹಗಳು ಗ್ರಾಮೀಣ ಬಂಗಾಳದ ಜೀವನ ಮತ್ತು ಜನರ ಬದುಕಿನ ಕುರಿತು ಬೆಳಕು ಚಲ್ಲುತ್ತವೆ. ಇವರಿಗೆ ೧೯೬೬ರಂದು ಇವರ ‘ಗಣದೇವತಾ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ಸುಮಾರು ೬೫ ಕಾದಂಬರಿಗಳನ್ನು ಬರೆದಿದ್ದಾರೆ.
ತಾರಾಶಂಕರ ಬಂದೋಪಾಧ್ಯಾಯರು ೨೩ ಜುಲೈ ೧೮೯೮ರಂದು ಬಂಗಾಳದ ಬಿರ್ಭೂಮ ಜಿಲ್ಲೆಯ ಲಾಭ್ ಪುರದ ಒಂದು ಜಮೀನ್ದಾರಿ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಹರಿದಾಸ್ ಬಂದೋಪಾಧ್ಯಾಯ ತಾಯಿ ಪ್ರಭಾವತಿ ದೇವಿ
ಕಾಲೇಜು ದಿನಗಳಲ್ಲಿ ಇವರು ಮಹಾತ್ಮಾ ಗಾಂಧೀಯವರೊಂದಿಗೆ ಅಸಹಕಾರ ಚಳುವಳಿಯಲಿ ಪಾಲ್ಗೊಂಡು ತಮ್ಮ ಗ್ರಾಮದಲ್ಲಿಯೇ ಗೃಹಬಂಧನದಲ್ಲಿದ್ದರು. ೧೯೧೬ರಲ್ಲಿ ಉಮಾಶಶಿದೇವಿಯವರನ್ನು ವಿವಾಹವಾದರು.
ಸಾಹಿತ್ಯ ಸೇವೆ:
ಸುಮಾರು 65 ಕಾದಂಬರಿಗಳನ್ನು ಹಾಗೂ ೫೩ ಕಥಾ ಸಂಕಲನಗಳನ್ನು ರಚಿಸಿದ್ದಾರೆ. ೧೨ ನಾಟಕಗಳನ್ನು ೪ ಪ್ಲಬಂಧಗಳನ್ನು ಹಾಗೂ ೪ ಆತ್ಮ ಚರಿತ್ರೆಗಳನ್ನು ರಚಿಸಿದ್ದಾರೆ.
*ಗಣದೇವತಾ -೧೯೪೨
ಆರೋಗ್ಯ
*ನಿಕೇತನ–ವೈದ್ಯಕೀಯ ವೃತ್ತಿ ಮತ್ತು ಜೀವನದ ತತ್ವಶಾಸ್ತ್ರವನ್ನು ಬಿಂಬಿಸುವ ಪ್ರಶಸ್ತಿ ವಿಜೇತ ಕಾದಂಬರಿ.
*ಹಂಸುಲಿ ಬಾಂಕೆರ್ ಉಪಕಥಾ–ಹಂಸುಲಿ ತಿರುವಿನ ಗ್ರಾಮೀಣ ಬದುಕು ಮತ್ತು ಬದಲಾವಣೆಗಳ ಕಥೆ
*ಪಂಚಗ್ರಾಮ–ಗಣದೇವತೆಯ ಮುಂದುವರೆದ ಭಾಗ
*ಕವಿ–ಗ್ರಾಮೀಣ ಜಾನಪದ ಕವಿ ಮತ್ತು ಕಲೆಯ ಸಂಘರ್ಷದ ಕಥೆ.
*ಚೈತಾಲಿ ಘೂರ್ಣಿ-೧೯೩೧–ಶ್ರಮಜೀವಿಗಳು ಮತ್ತು ಕೆಳವರ್ಗದ ಜನರ ಬದುಕನ್ನು ಬಿಂಬಿಸುವ ಕೃತಿ.
*ಧಾತ್ರಿ ದೇವತಾ–ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಗ್ರಾಮೀಣ ಜೀವನದ ನಡುವಿನ ಸಂಬಂಧ ತಿಳಿಸುವ ಕೃತಿ.
*ಕಾಲಿಂದಿ–ನದಿ ತೀರದ ಜನರ ಬದುಕು ಮತ್ತು ಜಮೀನ್ದಾರರ ದಬ್ಬಾಳಿಕೆ ಕುರಿತ ಕಾದಂಬರಿ.
*ನಾಗಿನಿ ಕನ್ಯಾರ ಕಾಹಿನಿ–ಹಾವಾಡಿಗರ ಸಮುದಾಯದ ಜೀವನಶೈಲಿ ಮತ್ತು ನಂಬಿಕೆಆಧಾರಿತ ಕೃತಿ.
*ಸಪ್ತಪದಿ–ವೈದ್ಯಕೀಯ ವಿದ್ಯಾರ್ಥಿಗಳ ನಡುವಿನ ಪ್ರೇಮಕಥೆ ಮತ್ತು ಧಾರ್ಮಿಕ ಸಂಘರ್ಷ ಕುರಿತ ಕೃತಿ
*ಕಾಜಲ್–೧೯೮೭-ವಿಭೂತಿಭೂಷಣರ ಪ್ರಸಿದ್ಧ ಕಾದಂರಿ’ಅಪರಾಜಿತೋ'(ಅಪು ಸರಣಿ)ಕೃತಿಯ ಮುಂದುವರೆದ ಭಾಗವಾಗಿ ಬರೆದ ಕಾದಂಬರಿ.
ಪ್ರಮುಖ ಸಣ್ಣ ಕಥೆಗಳು :
*ಜಲ್ಸಾಘರ್
*ರಸಕಲಿ
*ಡಾಕ್ ಹರಕರ
*ತಾರಿಣಿ ಮಾಝಿ
*ಬೇದೇನಿ
*ಹರಾನೋ ಸೂರ್
*ತಾರಾನಾಥ್ ತಾಂತ್ರಿಕ
*ಅಲಾತ ಚಕ್ರ
*ಕಾಜಲ್
ಆತ್ಮ ಕಥೆಗಳು:
*ಅಮರ್ ಕಾಲೆರ್ ಕಥಾ
*ಅಮರ ಸಾಹಿತ್ಯ ಜೀವನ
ಅಮರ ಸಾಹಿತ್ಯ ಜೀವನ
ಇವರ ಹಲವು ಕಾದಂಬರಿಗಳು ಚಲನಚಿತ್ರಗಳಾಗಿ ತೆರೆಕಂಡಿವೆ.ಸತ್ಯಜಿತ್ ರೇ ನಿರ್ದೇಶನದ ‘ಜಲ್ಸಾ ಘರ್ ಮತ್ತು ಅಭಿಜಾನ್ ಸೇರಿವೆ
ಪ್ರಶಸ್ತಿಗಳು:
*ಪದ್ಮಶ್ರೀ–೧೯೬೨
*ಗಣದೇವತಾ ೧೯೬೬–ಜ್ಞಾನಪೀಠ ಪ್ರಶಸ್ತಿ
*ಆರೋಗ್ಯ ನಿಕೇತನ ೧೯೫೬–ಸಾಹಿತ್ಯ ಅಕಾಡೆಮಿ ಪ್ರಶಸ್ತಿ
*೧೯೬೯–ಪದ್ಮ ಭೂಷಣ ಪ್ರಶಸ್ತಿ
*ಆರೋಗ್ಯ ನಿಕೇತನ-೧೯೫೫-ರವೀಂದ್ರ ಪುರಸ್ಕಾರ
*ಶರತ್ ಸ್ಮ್ರತಿ ಪುರಸ್ಕಾರ
*ಶಿಶಿರ್ ಕುಮಾರ್ ಪ್ರಶಸ್ತಿ -೧೯೬೩
*ಬಂಗಾಳಿ ಭಾಷೆ ಸಾಹಿತ್ಯ ಕೊಡುಗೆಗೆ ಜಗತ್ತಾರಿಣಿಚಿನ್ನದ ಪದಕ–೧೯೫೯

ರಾಜ್ಯಸಭೆಗೆ ನಾಮನಿರ್ದೇಶನ ಗೊಂಡು ಪಶ್ಚಿಮ ಬಂಗಾಳದ ವಿಧಾನ ಪರಿಷತ್ತಿನ ಸದಸ್ಯರಾಗಿ,’ಬಂಗೀಯ ಸಾಹಿತ್ಯ ಪರಿಷತ್ ಅಧ್ಯಕ್ಷ, ಉಪಾಧ್ಯಕ್ಷರಾಗಿ, ಭಾರತೀಯ ಲೇಖಕರ ನಿಯೋಗದ ನಾಯಕರಾಗಿ, ವಿಶೇಷ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ.
೧೯೫೯ರಲ್ಲಿ ಮದ್ರಾಸ್ ನಲ್ಲಿ ನಡೆದ ‘ಅಖಿಲ ಭಾರತ ಲೇಖಕ ಸಮ್ಮೇಳನ ‘ಮತ್ತು ೧೯೬೬ರಲ್ಲಿ ನಾಗ್ಪುರದಲ್ಲಿ ನಡೆದ ‘ಬಂಗಾಳಿ ಸಾಹಿತ್ಯ ಸಮ್ಮೇಳನ ‘ಅಧ್ಯಕ್ಷರಾಗಿದ್ದರು.
ಬಂಗಾಳಿ ಭಾಷೆಯ ಕಾದಂಬರಿಕಾರರಾಗಿದ್ದರೂ ಇವರ ಕೃತಿಗಳು ವಿವಿಧ ಭಾಷೆಗೆ ಅನುವಾದಗೊಂಡ ಹಿರಿಮೆ ಇವರದು.
ಸಪ್ಟೆಂಬರ್ ೧೪, ೧೯೭೧ರಂದು ಕೋಲ್ಕತ್ತಾ ತಾಲಾ ಪಾರ್ಕ ಪ್ರದೇಶದಲ್ಲಿದ್ದ ತಮ್ಮ ಸ್ವಗೃಹ’ಧಾತ್ರಿ ದೇವತಾ’ದಲ್ಲಿ ಕೊನೆಯುಸಿರೆಳೆದರು.
ಭಾರತಿ ನಲವಡೆ




