ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com



ಎಂದಾದರೂ ಒಮ್ಮೆ ಬಾಳ ಯಾತ್ರೆಯು ಮುಗಿಯಲೇಬೇಕಲ್ಲ
ಕಾಲನ ಕರೆ‌ಯು ಬಂದಾಗ ಎದುರಾಡದೇ ಹೋಗಲೇಬೇಕಲ್ಲ

ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಲ್ಲ ಜೀವಿಗಳಿಗೂ ಬುವಿಯಲಿ
ಬೇಕೋ ಬೇಡವೋ ಬಾಳ ಬಂಡಿಯನು ಎಳೆಯಲೇಬೇಕಲ್ಲ

ನಿಯಂತ್ರಿಸುವ ವಿಧಿ ಆಣತಿಗೆ ತಲೆ ಬಾಗದವರು ಎಲ್ಲುಂಟು ?
ಅಂತಕ ಬಂದಿರಲು ‘ ನಾಳೆ ಬಾ ‘ ಎನ್ನದೇ ಶರಣಾಗಲೇಬೇಕಲ್ಲ

ಸಂಕಷ್ಟಗಳ ಸಂಕೋಲೆಯಲಿ ಸಿಲುಕಿ ನರಳುವುದು ಜೀವ
ನೋವ ಮರೆಸುತ ನಗೆಯ ಮುಖವಾಡ ಧರಿಸಲೇಬೇಕಲ್ಲ

ಅಪಮಾನ ಅಪನಿಂದೆಗೆ ಹೆದರಿ ಸಾವ ಬಯಸದಿರು *ಹೇಮ*
ಸಾರ್ಥಕ ಜನ್ಮ ನಿನ್ನದಾಗಲು ದೃಢ ಮನದಿ ಬದುಕಲೇಬೇಕಲ್ಲ


About The Author

Leave a Reply

You cannot copy content of this page

Scroll to Top