ಶಾಲಿನಿ ಕೆಮ್ಮಣ್ಣುಅವರ ಕವಿತೆ- ಧ್ಯಾನ

ಮನಸ್ಸು ಝೇಂಕರಿಸುವ ಗದ್ದಲದ ಗೂಡಿನ ಸಮಾನ
ಅದನ್ನು ಯೋಚನೆಗಳಿಂದ ದೂರವಿಡಿಸುವುದು ಧ್ಯಾನ
ಇಂದ್ರಿಯ ನಿಗ್ರಹ ಇದಕ್ಕೆ ಮೂಲಚೇತನ
ಮೌನ ಹಾಸನ ಚಕ್ರ ಮುದ್ರ ಇದರ ವಿಧಾನ
ತನ್ನೊಳಗೆ ಇಣುಕುವುದು ಅಂತರ್ಧ್ಯಾನ
ಮರೆಯಾದ ಮನಸ ಮರಳಿಸುವುದು ವಿಪಸ್ಸನ
ಸದಾಶಿವನಿಗೆ ಅದೇ ಧ್ಯಾನ, ಎಲ್ಲಾ ರೋಗಗಳಿಗಿದು ಸಮಾಧಾನ
ಧ್ಯಾನ ಸಮಾಧಿಯಲ್ಲಿದೆ ಸುಖದ ಸೋಪಾನ
ಅರಿವಿನ, ವಿಶ್ವ ದರ್ಶನದ  ಸಾಧನ
ಧ್ಯಾನದಿಂದ ಜ್ಞಾನಾರ್ಜಿತರಾದವರ ಬಾಳೇ ದೇದೀಪ್ಯಮಾನ





2 thoughts on “ಶಾಲಿನಿ ಕೆಮ್ಮಣ್ಣುಅವರ ಕವಿತೆ- ಧ್ಯಾನ

Leave a Reply

Back To Top