ಕಾವ್ಯ ಸಂಗಾತಿ
ಮೀನಾಕ್ಷಿ ಸೂಡಿ
ʼಧಿಮಾಕಿನ ಗೋಡೆಗಳುʼ

ಎಲ್ಲಿಂದ ಬಂದವೊ ಅಲ್ಲೇ ಸುತ್ತುತ್ತಿವೆ
ಸತ್ತು ಬದುಕುತ್ತಿರುವ ಸಂಬಂಧಗಳು
ಬಹು ಅಕ್ಕರೆಯಿಂದ
ತುತ್ತುನಿಸಿದ ಕೈಗಳಿಂದು
ದೂರ ಸರಿದು ನಿಂತಿವೆ,
ಎರಡು ಕೈ ಚಾಚಿ ತಬ್ಬಿಕೊಂಡ
ಮನಸುಗಳೇಕೋ ಮೌನವಾಗಿವೆ,
ನಗುವಿಲ್ಲ ಮಾತಿಲ್ಲ….
ಬರೀ ಮೌನದ ಮರೆಯಾಟ.
ಸಂಬಂಧಗಳಿಗೆ ಮುಸುಕು ಹಾಕಿ
ದುಡ್ಡಿನ ಧಿಮಾಕಿನ ಗೋಡೆಯ ಮೇಲೆ
ಹುಸಿ ನಗುವಿನ ದೀಪ ಹಚ್ಚುವ ಯತ್ನ..
ಧಾರಾವಾಹಿಗಳ ದೊಡ್ಡ ಸಂಸಾರ
ಪೋಜು ಕೊಡಲು ಅಷ್ಟೇ…
ಕೊಲ್ಲಬೇಕೆಂದರೆ ವಿಷ ಬೇಕಿಲ್ಲ ಇಲ್ಲಿ
ಹರಿತ ಚಾಕುವಿನಂತ ನಾಲಿಗೆ ಇದೆಯಲ್ಲ.. ಕನಸುಗಳನ್ನು ನೇಣುಗಂಬಕ್ಕೇರಿಸಲು…

ಮೀನಾಕ್ಷಿ ಸೂಡಿ
Nice
ನಿಜ್ವಾಗ್ಲೂ ಸಂಭದಗಳು ಹೀಗಾಗಿವೆ, ತುಂಬಾ ಚನ್ನಾಗಿದೆ ಕವಿತೆ ಸತ್ಯವನ್ನು ಬಿಚ್ಚಿಟ್ಟಿದೆ
Hundred percent correct.maam.