ಕಾವ್ಯಸಂಗಾತಿ
ವ್ಯಾಸ ಜೋಶಿ
ತನಗಗಳು

ಎಷ್ಟು ಮಕ್ಕಳಿದ್ದರೂ
ವೃದ್ಧ ದಂಪತಿ ಆಸೆ,
ಕೇಳೋರು ದೇವರಿಗೆ
ಒಬ್ಬ ಒಳ್ಳೆಯ ಸೊಸೆ.
ವಯಸ್ಸು ಹೆಚ್ಚಾದಂತೆ
ಬೇಸರವೇ ಉಸಿರು,
ಸವಿ ನೆನಪು ಮಾತ್ರ
ನಿತ್ಯ ಹೊಸ ಹಸಿರು
ಮುಪ್ಪಿನ ಕಾಲದಲಿ
ಆಲಸ್ಯ ಒಂದು ವ್ಯಾಧಿ,
ವಯಸ್ಸು ಮರೆಯಲು
ಹವ್ಯಾಸವೇ ಔಷಧಿ.
ಹೊಸ ಮನೆ ಕಟ್ಟಿದೆ
ನಿವೃತ್ತಿ ಆದ ಮೇಲೆ,
ಮಕ್ಕಳು ಪಟ್ಟಣದಿ
ಬಿಕೋ ಎನ್ನೋ ಬಂಗಲೆ.
ವೃದ್ಧ ದಂಪತಿಗಳ
ನಿತ್ಯ ಜಗಳ ಖಾತ್ರಿ,
ಸುಮ್ಸುಮ್ಮನೆ ಮುನಿಸು
ನಿದ್ರೆ ಇಲ್ಲದ ರಾತ್ರಿ.
ಜಾಣ ಮಗ ಸೊಸೆಗೆ
ವಿದೇಶದಲಿ ಕೆಲಸ
ನಿವೃತ್ತ ಪಾಲಕರು
ವೃದ್ದಾಶ್ರಮದಿ ವಾಸ
ವ್ಯಾಸ ಜೋಶಿ

Very nice