ಕಾವ್ಯ ಸಂಗಾತಿ
ನಿಂಗಮ್ಮ ಭಾವಿಕಟ್ಟಿ
ತನಗಗಳು
ಜಗದಲ್ಲಿ ಒಂದೊಂದೂ
ಚೆಂದ ಜೀವ ವೈವಿಧ್ಯ
ಹಕ್ಕಿ ತಿಂದುದುರಿದ್ದು
ಪ್ರಕೃತಿಗೆ ನೈವೇದ್ಯ
ಹಸಿರೀಕರಣಕ್ಕೆ
ಜಾಗೃತಿ ಸಮಾವೇಶ
ಶಾಮಿಯಾನಕೆ ಅಡ್ಡಿ
ನಾಲ್ಕೇ ಗಿಡಗಳ್ನಾಶ
ಸಿಗಬೇಕಾದುದೆಲ್ಲ
ಸಿಕ್ಕರೆ ಮನೆಯಲ್ಲಿ
ಮಕ್ಕಳೇಕೆ ಅರಸಿ
ಹೋಗುವರಲ್ಲಿ ಇಲ್ಲಿ
ಹಾಲು ಜೇನಿನಂತಹ
ಸಂಸಾರದ ಹಾಲಲ್ಲಿ
ಅನುಮಾನದ ಹುಳಿ
ತೊಟ್ಟಿಕ್ಕದಿರಲಲ್ಲಿ
ಕುಟುಂಬದುದ್ದೇಶವೇ
ಒಂದಾಗಿ ಬಾಳುವುದು
ಸಣ್ಣ ಭಿನ್ನಾಭಿಪ್ರಾಯ
ವಿಚ್ಛೇದನ ‘ಬೇಡ’ ದು
ತುಂಬಿದ ಮನೆಯಲ್ಲಿ
ಮಾತಿನ ಏರುಪೇರು
ಸಂಭಾಳಿಸಿಕೊಂಡರೆ
ಬಾಳು ಹೂವಿನ ತೇರು
ಸಂತೋಷದ ವಿಳಾಸ
ಹುಡುಕುವ ಬದಲು
ನೀ ಕೊಡುವುದ ಕಲಿ
ಅದು ಇರುವುದಲ್ಲಿ
ಬೆಳದಿಂಗಳಂತಹ
ಅರಮನೆಯ ಅರಸಿ
ಅಮಾವಾಸೆಗೊಲಿದು
ಹೋದಳೇನು ಅರಸಿ?
—————————————————–
ನಿಂಗಮ್ಮ ಭಾವಿಕಟ್ಟಿ ಹುನಗುಂದ
Nice lines