ಈ ದಿನ
ಮೂಲ: ಮೆರಿ ಒಲಿವಿರ್( ಅಮೇರಿಕಾ ಕವಿಯಿತ್ರಿ)
ಕನ್ನಡಕ್ಕೆ: ಕಮಲಾಕರ ಕಡವೆ
ಈ ದಿನ ನನ್ನ ಹಾರಾಟ ಕಡಿಮೆ ಮಾಡಿದ್ದೇನೆ
ಒಂದು ಮಾತನೂ ಆಡುತ್ತಿಲ್ಲ ನಾನು
ಹೆಬ್ಬಯಕೆಗಳ ಎಲ್ಲ ಮಾಟಮಂತ್ರಗಳ ಮಲಗಿಸಿದ್ದೇನೆ.
ಜಗ ಸಾಗಿದೆ ಅದು ಸಾಗಬೇಕಾಗಿರುವಂತೆ
ಹೂದೋಟದಲ್ಲಿ ಮೆಲ್ಲಗೆ ಜೇನಿನ ಝೇಂಕಾರ
ಮೀನು ಕುಪ್ಪಳಿಸಿದೆ, ನೊರಜು ಯಾರದೋ ಆಹಾರವಾಗಿದೆ
ಮುಂತಾಗಿ.
ನಾನು ಮಾತ್ರ ಈ ದಿನ ರಜೆಯಲ್ಲಿದ್ದೇನೆ
ಪುಕ್ಕದಷ್ಟು ಶಾಂತ
ಚಲಿಸದೆಯೂ, ಅಪಾರ ದೂರವನ್ನು
ಕ್ರಮಿಸುತ್ತಿದ್ದೇನೆ
ನಿಶ್ಚಲತೆ, ಮಂದಿರದ ಒಳಹೊಗಲು
ಇರುವ ಬಾಗಿಲುಗಳಲ್ಲೊಂದು.
*****
Today I’m flying low and I’m
not saying a word
I’m letting all the voodoos of ambition sleep.
The world goes on as it must,
the bees in the garden rumbling a little,
the fish leaping, the gnats getting eaten.
And so forth.
But I’m taking the day off.
Quiet as a feather.
I hardly move though really I’m traveling
a terrific distance.
Stillness. One of the doors
into the temple.