ಅನುವಾದ ಸಂಗಾತಿ
“ಸ್ಕಾಟ್ಲೆಂಡ್”ನ ಹುಡುಗಿ”
ಇಂಗ್ಲೀಷ್ ಮೂಲ: ವಿಲಿಯಂ ವರ್ಡ್ಸ ವರ್ತ್
ಕನ್ನಡಾನುವಾದ: ಪಿ.ವೆಂಕಟಾಚಲಯ್ಯ.



ನೋಡಲ್ಲಿ, ಹೊಲಗದ್ದೆ ಬಯಲಿ ನಲಿ,
ಒಬ್ಬಂಟಿ, ಪ್ರಸ್ಥಭೂಮಿಯ ಹು ಡುಗಿ.
ತರಿಯುತಲಿ,ತನಗೆ ತಾನೆ ಹಾಡು ತಲಿ,
ನಿಲ್ಲುತಲಿ, ಮೆಲಮೆಲ್ಲನೆ ಸರಿಯು ತಲಿ,
ತರಿದಿದನು ಬಿಗಿದು,ಹೊರೆಯ ಕ ಟ್ಟುತಲಿ ,
ಹಾಡುತಿರೆ, ವಿಷಣ್ಣ ಭಾವದ ಗೀತೆ.
ಅವಳ ದ್ವನಿಯು, ನಿರ್ಜನ ಕಣಿವೆ ಯಲಿ,
ಪಸರಿಸಿ, ನಿರಂತರ ಪ್ರತಿಧ್ವನಿಸೆ,
ಕೋಗಿಲೆಯ ಕಂಠದ ಇಂಪನು ಮೀರಿ .
ಅರಬಿಯ ದೇಶದ ಮರಳುಗಾಡು ನಲಿ,
ದಣಿದು, ಬಸವಳಿದಿರುವ, ಪಯ ಣಿಗರಿಗೆ,
ಇನಿತು ನೆರಳಿನಾಸರೆ ದೊರೆತ ತೆರ ದಿ,
ಹಿಂದೆಂದೂ ಕೇಳದ, ಗಾನಲಹರಿ,
ಪರಮ ಅದ್ಭುತ ರೋಮಾಂಚನ ನೀವ,
ಚೈತ್ರದಲಿ, ಕುಕ್ಕೊ ಹಕ್ಕಿಯ ತೆರದಿ.
ದೂರ ಸಾಗರದ ಶಾಂತತೆಯ ಕದ ಡಿ,
ಮೇಲೇರಿ ಬರುತಿದೆ, ಮಧುರತೆಯ
ಹರಡಿ,
ಚಿತ್ತಭ್ರಮೆಯಲ್ಲವಿದು, ನಿಜ ಸಂಗ ತಿ.
ಹಾಡಾದರೂ ಏನು? ಅರಹುವ ರಾರು?
ಹಳಬುವ ವಾದಾಲೋಲರು ಹಲ ವರು,
ಇದೇನು! ಸವೆದ ಕಾಲದ, ಅಹಿತ ಕರ,
ಯುದ್ಧದ ಘಟನೆಗಳ ಭೀಕರ ನೋ ವೆ?
ವರ್ತಮಾನದಲಿ ಮನಸನು ತಟ್ಟಿ ದ,
ಆನಂದಮಯ ವಿನಮ್ರ ತುಡಿತ ವೇ?
ದು:ಖ, ನೋವು, ನಷ್ಟ, ಏನೋ ಒಂದು,
ಹಿಂದಾದದು, ಪುನರಾಗಮಿಸಿರು ವುದು.
ಆ ಬಾಲೆಯ ಗೀತಗಾನದ ವಿಷಯ,
ಏನೇ ಇದ್ದರೂ, ಕೊನೆಯ ಕಾಣದು.
ಬಿಡುವಿರದ ಕೊಯ್ಯವ ಕೆಲಸದೊ ಲಾಕೆ,
ಸತತ ಹಾಡುವುದನು ಕವಿಗೆ ಕಾಣ್ಬದು.
ಕವಿ ಬೆಟ್ಟದ ಮೇಲೇರಿ ಹೋದರೂ,
ಆ ಹಾಡಿಗೆ ನಿಲುಗಡೆಯೇನು ಇಲ್ಲ.
ತನ್ನ ಹೃದಯದಲಿ ಹೊತ್ತ ಹಾಡಿನ,
ಮಾಧುರ್ಯವ, ಮುಂದೆಂದು ಕೇಳಿ ಲ್ಲ.