ಡಾ।। ಗುಮ್ಮನೂರು ರಮೇಶ್ ಬಾಬು ಅವರ ತೆಲುಗು ಕವಿತೆ ʼನಿನಗಾಗಿʼ ಕನ್ನಡಾನುವಾದ ಕೊಡೀಹಳ್ಳಿ ಮುರಳೀಮೋಹನ್

ದ್ವಾಪರ ಯುಗದ ಅಂತ್ಯದ ಗಾಂಡೀವವನ್ನು ನೋಡಿ
ಮೋಸಹೋಗಬೇಡ.
ಅದು ಮೇಕೆಯ ಗಂಭೀರ ನಡಿಗೆಯಷ್ಟೇ!
ಧೃತರಾಷ್ಟ್ರನ ಕಣ್ಣುಗಳನ್ನು ನಂಬಿಕೊಂಡು
ಮುಂದೆ ಹೋಗಬೇಡ
ಅದು ಕತ್ತಲೆ ತುಂಬಿದ ಮೃತ್ಯು ಕಣಿವೆ!
ಶೇಷತಲ್ಪವನ್ನು ಕಂಡು ಸಂತೋಷಪಟ್ಟು
ಮಲಗಬೇಡ
ಅದು ಕೊನೆಯ ನಿದ್ರೆಗೆ ಸ್ವಾಗತ ಗೀತೆ!
ನಮ್ಮ ರಾಜಕೀಯ ಧುರೀಣರ ಭಾಷಣಗಳನ್ನು ಕೇಳಿ
ಹೆಮ್ಮೆಪಡಬೇಡ
ಅದು ಕುರ್ಚಿಗಾಗಿ ರೂಪಿತವಾದ ವೋಟುಗಳ ಸದ್ದು ಗದ್ದಲ!
ಒಲೆಹತ್ತಿದ ಮೊಲ
ಪಂದ್ಯ ಒಡ್ಡುತ್ತದೆಂದು ಕೇಳಿಲ್ಲವೇ?
ಎದುರು ತಿರುಗಿದರೆ ಬೆಕ್ಕು
ಹುಲಿಯಂತೆ ಮುಗಿಬೀಳುತ್ತದೆಂದು ತಿಳಿದಿಲ್ಲವೇ?
ನಿದ್ರೆ ಎದ್ದು
ನಿಜವನ್ನು ತಿಳಿದುಕೊಂಡು
ನಿರ್ಭಯವಾಗಿ ಮುಂದೆ ಸಾಗು
ನಿಸ್ವಾರ್ಥದಿಂದ ನುಗ್ಗಿ ಹೋಗು
ದ್ವಾಪರಾಂತವನ್ನು
ಆದಿ ಪರ್ವಕ್ಕೆ ತಂದು ನಿಲ್ಲಿಸು!
ಧೃತರಾಷ್ಟ್ರನ ಕಣ್ಣುಗಳನ್ನು
ವಿಶ್ವರೂಪ ದರ್ಶನಕ್ಕೆ ಕರೆದುಕೊಂಡು ಬಾ!
ಶೇಷತಲ್ಪವನ್ನು
ಭಗವಂತನ ಸಾನ್ನಿಧ್ಯಕ್ಕೆ ಕರೆದುಕೊಂಡು ಬಾ!
ರಾಜಕೀಯ ಭಾಷಣವನ್ನು
ಅಮೃತ ಚೈತನ್ಯದ ಗೀತೋಪದೇಶವನ್ನಾಗಿಸಿ ಹಂಚುವುದಕ್ಕೆ ಕರೆದುಕೊಂಡು ಬಾ!
ಆಗಲೇ
ನೀನು ನಿಜವಾದ ಮನುಷ್ಯ!
ಅಲ್ಲಿಯವರೆಗೆ
ಸಂಶಯವಿಲ್ಲದ ಮತ್ತೊಂದು ಬಗೆಯ ಜೀವಿ ನೀನು


Leave a Reply

Back To Top