ನಾವೇನು ವ್ಯಬಿಚಾರಿಗಳಾಗಿರಲಿಲ್ಲ!
ಅವಳನ್ನು ಪ್ರೀತಿಸಿದ್ದು ನಿಜ
ಹೆಸರಲ್ಲೇನಿದೆ ಹೇಳಿ
ಸುಶೀಲಾ, ಶಕೀಲಾ, ಶೈನಿ!
ಏನಾದರು ಒಂದಂತು ಆಗಿರಲೇ ಬೇಕೆಂಬ ಹಟ ನನಗಂತು ಇರಲಿಲ್ಲ!
ಹಾಗೇನೆ ನನ್ನ ಹೆಸರು
ಮಹೇಶ, ಮುಬಾರಕ್, ಮ್ಯಾಕ್
ಹೀಗೇನೆ ಯಾವುದಾದರೊಂದು ಆಗಿರಲೇ ಬೇಕೆಂಬ ಹಟ
ಅವಳಿಗೂ ಇದ್ದಂತೆ ಕಾಣಲಿಲ್ಲ…
ನಮ್ಮ ಮಿಲನದ ಉನ್ಮತ್ತ ಕ್ಷಣದೊಳಗೂ
ಅವಳಾಗಲಿ ನಾನಾಗಲಿ ಅಪ್ಪಿ ತಪ್ಪಿಯೂ
ನಮ್ಮಹೆಸರುಗಳ ಪಿಸುಗುಡಲಿಲ್ಲ!
ಅಷ್ಟು ಅನಾಮಧೇಯರಾಗಿ ಪ್ರೇಮಿಸಿದೆವು.
ಹೊರಗಿನವರಿಗೆ ನಾವು ಗೊತ್ತಿದ್ದುದು ನಮ್ಮ ಹೆಸರುಗಳಿಂದ ಮಾತ್ರ
ಆದರೆ ಆ ಹೆಸರುಗಳಾಚೆಯಲ್ಲಿಯೂ
ಇರುವ ನಮ್ಮ ಐಡೆಂಟಿಟಿಯನ್ನು
ಹುಡುಕಿಕೊಳ್ಳುವುದು ನಮಗೆ ಅನಿವಾರ್ಯವಾಗಿತ್ತು.
ಹಾಗಂತ ನಾನು ವಿಟನಾಗಿರಲಿಲ್ಲ
ಅವಳೇನು ಜಾರಿಣಿಯಾಗಿರಲಿಲ್ಲ!
*************
ಕು.ಸ.ಮದುಸೂದನ
Nice
ಹೆಸರುಗಳಾಚರ ಐಡೆಂಟಿಟಿ ಹುಡುಕುವ
ಸಾಲು ಮನ ತಟ್ಟಿತು
ಅತ್ಯುತ್ತಮ ಕವಿತೆ
ಅಭಿನಂದನೆಗಳು