ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಸಹಬಾಳ್ವೆ

ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಮಾಡುವ ಮಹೇಶನದು ಸುಖೀ ಸಂಸಾರ.
ಹಬ್ಬ,ಜಾತ್ರೆಗಳಿದ್ದಾಗ ತಾನು ಹುಟ್ಟಿ ಬೆಳೆದ ಹಳ್ಳಿಯನ್ನು ಮರೆಯದೇ ಪತ್ನಿ,ಮಗಳೊಂದಿಗೆ ಭಾರಿ ಉಡುಗೊರೆ ಹಲವಾರು ಬಗೆಯ ತಿನಿಸು ಹೊಲದ ಕೆಲಸ ಮಾಡುತ್ತಿದ್ದ ತನ್ನ ಅಣ್ಣನ ಮಕ್ಕಳಿಗೆ ಹೊಸ ಬಟ್ಟೆಗಳನ್ನು ತರುತ್ತಿದ್ದ.ಹಳ್ಳಿಗೆ ಬಂದ ತಕ್ಷಣ ಅವನ ತಂದೆತಾಯಿಗಳು ಲಗುಬಗೆಯಿಂದ‌‌‌‌‌‌‌‌‌ ಮೊಮ್ಮಗಳನ್ನು ಎತ್ತಿಕೊಳ್ಳಲು ಹೋದರೆ ಕಿರುಚುತ್ತ ತಾಯಿ ತಂದೆಯರನ್ನು ಬಿಗಿಯಾಗಿ ತಬ್ಬಿಕೊಂಡು ಅವರ‌ ಬಳಿ ಹೋಗುತ್ತಿರಲಿಲ್ಲ. ಅಷ್ಟೇಅಲ್ಲದೇ ತನ್ನ ತಂದೆ ತಂದ ಯಾವ ವಸ್ತುಗಳನ್ನು ಹಿಡಿಯಲು ಬಿಡುತ್ತಿರಲಿಲ್ಲ.ಮಹೇಶ ಕೋಪದಿಂದ ಹಾಗೆ ಮಾಡಬಾರದೆಂದು ತುಸು ಗದರಿದರೂ ಮಹೇಶನ ಮಗಳು ಹಠ ಮಾಡುತ್ತಿದ್ದಳು.ತಾಯಿ ಕೂಡ ರಮಿಸಿ ಹೇಳಿದರೂ ಇದೆಲ್ಲ ನನ್ನ ಅಪ್ಪ ತಂದದ್ದು ಇವರಿಗೇಕೆ? ಕೊಡಬೇಕೆಂದು ಮರುಪ್ರಶ್ನೆ ಬೇರೆ.ತಾಯಿಯಿಂದ ಏಟು ತಿಂದು ರಂಪ ಮಾಡಿ ಉಪವಾಸ ಮಲಗುತ್ತಿದ್ದಳು.ಒಂದೆರಡು ದಿನವಾದ ಮೇಲೆ ಹೊಂದಾಣಿಕೆಯಾದಾಗ ಮರಳಿ ಹೋಗುವಾಗ ಹಳ್ಳಿಯಲ್ಲೇ ಉಳಿಯುವದಾಗಿ ಅಳುತ್ತಿದ್ದಳು. ಹೀಗೆ ಮಹೇಶನಂತೆ ತಂದೆ ತಾಯಿ,ಅಣ್ಣ ಅತ್ತಿಗೆ ಅವರ ಮಕ್ಕಳು ಹೀಗೆ ಮಕ್ಕಳಿಗೆ ಬಾಂಧವ್ಯದೊಂದಿಗೆ ಸಹಬಾಳ್ವೆಯ ಮೌಲ್ಯ ಜತನಮಾಡುವದು ಹೆತ್ತವರ ಜವಾಬ್ದಾರಿಯಾಗಿದೆ.ಪ್ರಸ್ತುತತೆಯ ಸನ್ನಿವೇಶಗಳು ಮಕ್ಕಳನ್ನು ಸ್ವಾರ್ಥ ಅಹಂನ ಕೋಟೆಯೊಳಗೆ ಬಾವಿಯ ಕಪ್ಪೆಯಂತೆ ಸಂಕುತಿತ ಮನೋಭಾವವನ್ನು ಹುಟ್ಟುಹಾಕುತ್ತಿವೆ.

ಪರಸ್ಪರ ಅವಲಂಬನೆ ಮಾನವನ ಅಗತ್ಯತೆ ಮತ್ತು ಅನಿವಾರ್ಯತೆ.ಸಮಾಜದ ಯಾವುದೇ ವ್ಯಕ್ತಿಯೊಡನೆ ಬಾಂಧವ್ಯವಿರದೇ ಏಕಾಂಗಿಯಾಗಿರುವದು ಅಸಾಧ್ಯ ಯಾಕೆಂದರೆ ಮಾನವ ಸಂಘಜೀವಿ.

ಎಲ್ಲರ ಬದುಕಿನಲ್ಲಿ ಅನಿವಾರ್ಯವಾದ ಘಟನೆಗಳು ನಡೆದೇ ನಡೆಯುತ್ತವೆ,ಕೆಲವೊಮ್ಮೆ ತಾವಂದುಕೊಂಡಂತೆ ನಡೆದರೆ,ಇನ್ನೂ ಕೆಲವೊಮ್ಮೆ ಅನಿರೀಕ್ಷಿತವಾಗಿ ನಡೆಯುತ್ತವೆ ನೀರು ಮೇಲಿನಿಂದ ಕೆಳಗೆ ಹರಿಯುವುದೇ ವಿನಃ ಕೆಳಗಿನಿಂದ ಮೇಲಕ್ಕಲ್ಲ, ಮಾನವ ಚಿತ್ತದ ಅಧೋಮುಖ ಚಲನ ಸುಲಭ,ಊರ್ಧ್ವಮುಖಯಾನ ಕಠಿಣ.ಲೌಕಿಕವಾದ ವಿಷಯಗಳಲ್ಲಿ ಸದಾ ಮಗ್ನರಾಗಿರುವದರಿಂದ ಹೊಂದಾಣಿಕೆ ಕಡಿಮೆಯಾಗಿದೆ.

ಜೀವನದಲ್ಲಿ ಯಾವತ್ತೂ ಆಶಾವಾದಿಯಾಗಿರಬೇಕು ದಿಟ. ಆದರೆ ಏರುಪೇರುಗಳಿಲ್ಲದೇ, ವೃದ್ಧಿಕ್ಷಯಗಳಿಲ್ಲದೇ ಸದಾ ಸುಖಿಯಾಗಲು ಹೇಗೆ ಸಾಧ್ಯ?
ಬಾಲ್ಯ, ಯೌವನಾವಸ್ಥೆಗಳಲ್ಲಿ ದೈಹಿಕ ಶಕ್ತಿ ಚನ್ನಾಗಿರುವಾಗ ಭರವಸೆ ನಿಶ್ಚಿತವಾಗಿರುವಾಗ,ಕಲ್ಪನೆಯ ಕನಸುಗಳನು ಹಾಸಿ ಹೊದ್ದು ನನಸಾಗಲು ಜಾತಕಪಕ್ಷಿಯಂತೆ ಮನ ತುಡಿಯುತಿರುತ್ತದೆ.ಭವಿಷ್ಯದ ಚಿತ್ರ,ಸೌಧಗಳನ್ನು ಕಟ್ಟಬಹುದು.ಸೋಲು,ಹತಾಶೆ,ವಿರೋಧ,ಅಸಹಾಯಕತೆ-ಎಂಬ ಅಲೆಗಳು ಬಂದು ಬಡಿದಪ್ಪಳಿಸಿದಾಗ ಭ್ರಮಾಲೋಕದಿ ಹೊರಬಂದು ನುಚ್ಚುನೂರಾದ ಕನಸುಗಳಿಂದ ತತ್ತರಿಸುವ ಮನಕೆ ಸಾಂತ್ವನದ ಮಾತುಗಳ ಮರುಭೂಮಿಯಲಿ ಜಲವ ಕಂಡಂಷ್ಟೇ ಸಮಾಧಾನ ದೊರಕಿ ಬಾಂಧವ್ಯ ಅನಿವಾರ್ಯ ಹೊಂದಾಣಿಕೆ ಸಹಬಾಳ್ವೆಗೆ ನಾಂದಿಯಾಗುತ್ತದೆ.ಚಿಕ್ಕಂದಿನಿದಲೇ ಮಕ್ಕಳಲ್ಲಿ ಎಲ್ಲರೊಂದಿಗೆ ಬೆರೆಯುವ ಹಾಗೂ ಎಲ್ಲರಭಾವನೆಗಳನ್ನು ಗೌರವಿಸಿ ಜಾತಿ,ಧರ್ಮ,ಭಾಷೆಗಳ ತಾರತಮ್ಯ ಮಾಡದೇ ಮಾನವೀಯತೆಯನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ.ಸ್ಪರ್ಧಾತ್ಮಕ ಯುಗದಲ್ಲಿ ನಿರೀಕ್ಷೆ ಪೂರ್ಣವಾಗದಾದಾಗ ವಿಚಲಿತರಾಗದೇ ಆತ್ಮೀಯರಲ್ಲಿ ವ್ಯಕ್ತ ಪಡಿಸಿದಾಗ ಪರಿಹ್ರ ದೊರಕಲು ಸಾಧ್ಯ.ಇದರಿಂದ ಖಿನ್ನತೆಗೆ ಜಾರುವದನ್ನು ಆತ್ಮಹತ್ಯೆ ಪ್ರಕರಣವನ್ನು ತಪ್ಪಿಸಬಹುದು.ಮಕ್ಕಳನ್ನು ಸಮಾಜದ ಒಂದು ಉತ್ತಮ ಸಂಪನ್ಮೂಲವಾಗಿ ಬೆಳೆಸಬೇಕಾದರೆ ಮನೆಯ ಪೂಜೆ ಪುನಸ್ಕಾರ,ಸಾರ್ವಜನಿಕ ಉತ್ಸವ, ಸ್ವಚ್ಛತೆ,ಸಮುದಾಯದ ಉತ್ತಮ ಬಾಂಧವ್ಯದ ಮೂಲಕ ಕೆಲಸದ ಜವಾಬ್ದಾರಿಗಳನ್ನು ನೀಡುವ ಮೂಲಕ ಎಳೆಮನದಲಿ ಮೂಡಬಹುದಾದ ದ್ವೇಷಾಸೂಯೆಗಳನ್ನು ಹೋಗಲಾಡಿಸಿ ಮುಗ್ಧ ಮನವನ್ನು ತಿಳಿಗೊಳವನ್ನಾಗಿ ಮಾಡುವ ಜವಾಬ್ದಾರಿ ಹೆತ್ತವರದಾಗಿದೆ.ಸಾಂಪ್ರದಾಯಿಕ ಆಟಗಳನ್ನಾಡಲು ಪ್ರೇರಣೆ ನೀಡಬೇಕು.ಕಥೆ ಪುಸ್ತಕಗಳನ್ನು ಓದಲು ನೀಡುವ ಮೂಲಕ ಜಗದ ಯಾವ ಭಾಗದಲ್ಲಾದರೂ ಸಹಬಾಳ್ವೆಯಿಂದ ಸ್ವಾಭಿಮಾನದಿಂದ ಬದುಕುವಂತೆ ಮಾಡಬಹುದಾಗಿದೆ.ಹೆತ್ತವರ ಸಂಸ್ಕಾರವನ್ನೇ ಮಕ್ಕಳು ಅನುಸರಿಸುವದರಿಂದ ಹೆತ್ತವರು ಪ್ರಾಮಾಣಿಕ ಬಾಂಧವ್ಯದಾಂದ ಜಾಕರೂಕತೆಯಿಂದ ನಡೆದುಕೊಳ್ಳಬೇಕು.ಮನೆ,ಶಾಲೆ,ಸಮಾಜ ಅಷ್ಟೇ ಏಕೆ ಮುಂದೆ ಯಾವುದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವದಿದ್ದರೂ ಎಲ್ಲರ ಮನೋಧೋರಣೆಗಳು ಭಾನ್ನವಾಗೌರುತ್ತವೆ.ಆಗ ಎಲ್ಲರೊಳಗೊಂದಾಗಿ ತಾಳ್ಮೆಯಿಂದ ಅರಿತು ಬೆರೆತು ಸಹಬಾಳ್ವೆಯಿಂದ ಬದುಕಲೇಬೇಕಾಗುತ್ತದೆ.ಹಾಗಾದಾಗ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ. ಪರೋಪಕಾರ,ನಿಸ್ವಾರ್ಥ,ಕರುಣೆ ಇವು ಸಹಬಾಳ್ವೆಯ ಮಂತ್ರಗಳಾಗಾವೆ.
ಒಂದು ಜನಾಂಗದ ಸಹಬಾಳ್ವೆಯ ನೆಲೆಗಟ್ಟು ಸಹಸ್ರಾರು ವರ್ಷಗಳ ಮೇಲೆ ಹೆಚ್ಚು ಹೆಚ್ಚು ಸಾಮರಸ್ಯ ಭಾವ ಬೆಳೆಯಲು ಸಾಧ್ಯವಾಗುತ್ತದೆ.ನಮ್ಮೊಳಗಿನ ಮನವ ಶಾಂತ ಸಾಗರವಾಗಿಸಿ ಮನಮನದ ದ್ವೇಷ ಅಸೂಯೆಗಳನ್ನು ತೊರೆದು ಎಲ್ಲರ ಕಷ್ಟ ಸುಖಕೆ ಸ್ಪಂದಿಸುವ ನಿಸ್ವಾರ್ಥ ಸೇವೆಯ ಹೃದಯ ನಮ್ಮದಾಗಿರಬೇಕು.ಸಂಘರ್ಷ ತೊರೆದು ಸಮನ್ವಯತೆಯತ್ತ ಸಾಗಬೇಕಾಗಿದೆ.ಕವೀ ಜಿ.ಎಸ್.ಶಿವರುದ್ರಪ್ಪನವರು ತಮ್ಮ ಒಂದು ಕವನದಲ್ಲಿ”ಹತ್ತಿರವಿದ್ದೂ ದೂರ ನಿಲ್ಲುವೆವನಮ್ಮ ಅಹಂಮ್ಮಿನ ಕೋಟೆಯಲಿ
ಎಷ್ಟುಕಷ್ಟವೋ ಹೊಂದಿಕೆ ಎಂಬುದು
ಈ ನಾಲ್ಕು ದಿನದ ಬದುಕಿನಲಿ”ಎಂದಿದ್ದಾರೆ.
ಯಾವ ದೇಶ,ಕಾಲ, ಜನಾಂಗ ಪರಿಸರವಿದ್ದರೂ ಎಷ್ಟೋ ಮುಂದುವರಿದ ಜ್ಞಾನ-ವಿಜ್ಞಾನ,ತಂತ್ರಜ್ಞಾನ-ಯಂತ್ರಜ್ಞಾನ ಹೊಂದಿದವರಾದರೂ ಮನುಷ್ಯನ ಮನಸ್ಸೆಂಬ ಗಾರುಡಿತನದ ಒಗಟು ಬಿಡಿಸಲಾಗದ ಜಟಿಲ ಕಾಠಿಣ್ಯತೆ ಆವರಿಸಿದೆ.ಜೇಡದ ಬಲೆಯಂತೆ ಈ ಜೀವನ. ಆದ್ದರಿಂದ ಈ ಜೀವಿತಾವಧಿ ಅಲ್ಪಕಾಲವಾಗಿದ್ದರೂ ಎಚ್ಚರದ
ಪ್ರಜ್ಞಾವಸ್ಥೆಯ ಮೃಟ್ಟಿಲೇರಿ‌‌‌ ಸಾಹಸ,ಹಠ,ಛಲ ಸಾಧನೆಯಿಂದ ಆಚರಿಸಿದರೆ ಸಹಬಾಳ್ವೆಯಿಂದ ಬಾಳಿದರೆ ಇಹದ ಜೀವದಲ್ಲೆಸ್ಥಿತಪ್ರಜ್ಞ ಮಹತ್ವಾಕಾಂಕ್ಷಿ,ಜೀವನ್ಮುಕ್ತ ಸಮಚಿತ್ತ ಮೈದಳೆಯಲು ಸಾಧ್ಯ.
ಕಾಗೆಯಂದುಗಳ ಕಂಡರೆ ಕರೆಯದೇ ತನ್ನ ಬಳಗವನು ಎಂಬಂತೆ ಒಂದು ಅಗುಳ ಅನ್ನವನ್ನು ಕಂಡರೂ ತನ್ನ ಬಳಗವನು ಕರೆದು ಹಂಚಿತಿನ್ನುವಂತೆ ಕಷ್ಟ ಸುಖಗಳನ್ನು ಹಂಚಿಕೊಂಡು ಇರುವೆಗಳಂತೆ ಸಹಬಾಳ್ವೆಯ ಬದುಕನು ಶಿಸ್ತು ಒಗ್ಗಟ್ಟಿನ ಮಂತ್ರದಿ ಸಾರ್ಥಕ ಪಡಿಸಿಕೊಳ್ಳೋಣ.


ಭಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

2 thoughts on “

Leave a Reply

Back To Top