ಅಂಕಣ ಸಂಗಾತಿ
ಸಕಾಲ
ಶಿವಲೀಲಾ ಹುಣಸಗಿ
ತಾಳೆಯ ಬಗ್ಗೆ ತಿಳಿಯಲು ತಾಳ್ಮೆ ಬೇಕು
ಒಮ್ಮೊಮ್ಮೆ ಬಾಲ್ಯ ನೆನಪಾದಾಗ ಖುಷಿಯ ಜೋತೆಗೆ ಜೀವಂತಿಕೆಯ ಅನುಭವ.ಚಿಮುಣಿ ಬೆಳಕಿನ ಸುತ್ತ ಕುಳಿತು ಅವ್ವ ನೀಡುವ ತಾಟಿಗೆ ಕಾಯುವ ಗಳಿಗೆ.ಊಟ ಬಿಟ್ಟರೇ ಮತ್ತೇನು ಸಿಗದು.ರಾತ್ರಿ ೮ ಗಂಟೆಗೆ ಊಟ ಮುಗಿಸುವ ಪರಿಪಾಠ.ಎಣ್ಣೆಕಾಣದ ಸಾರು,ಬದನೆಕಾಯಿ ಚಟ್ನಿ, ಗುರೆಳ್ಳು,ಶೇಂಗಾ ಚಟ್ನಿ,ಹಸಿ ಉಳ್ಳಾಗಡ್ಡಿ,ಹುರಿದ ಮೆಣಸು,ರೊಟ್ಟಿ ತಿಂದು ಪಾತ್ರೆ ಬೆಳಗಿದರೆ ಮುಗಿತು ಅವತ್ತಿನ ಕೆಲಸ.ಚಿಕ್ಕ ಮನೆ ವಿದ್ಯುತ್ ಸಂಪರ್ಕ ಕಾಣದ ಪುಟ್ಟ ಜಗತ್ತು ನಾನಂತೂ ಹೊರ ಬಾಗಿಲಿನ ಕಾವಲುಗಾರ. ನನ್ನ ಜಾಗ ಅದೇ ಗೋಣಿ ಚೀಲ ಹಾಸಿ ಕೌದಿ ಹೊದ್ದರೆ ಮುಗಿತು..ಬೆಳಗು ಆಗಿದ್ದು ಗೊತ್ತಾಗೋದೆ,ಅಮ್ಮನ ಎರಡು ಎಟು ಬಿದ್ದಾಗಲೇ.ಬೆಳಗಿಗೇನು ಬರ.ಅಪ್ಪ ಬತ್ತ ತಂದು ಅವಲಕ್ಕಿ ಮಾಡಿಸಿಟ್ಟರೆ ಮುಗಿತು.ಮಳೆಗಾಲ ಬಂತೆಂದರೆ ನನ್ನಪ್ಪನಿಗೆ ಚಿಂತೆ. ಮನೆಯೆಲ್ಲಾ ಮಳೆ ನೀರು ತುಂಬಿದರೆ ಮಲಗೋದ್ಯಾಗೆಂದು? ನಮ್ಮದು “ಮಡ್ಲಿನ ಅರಮನೆ” ಮನೆ ತುಂಬಾ ಪಾತ್ರೆಯಿಟ್ಟರು ಮುಗಿಯದು.
ಸೂರು ಗಟ್ಟಿಮಾಡಲುನಾವು ಮಲಗಿರುವಾಗಲೇ ಅವ್ವ ರೊಟ್ಟಿ ಬುತ್ತಿ ಕೊಟ್ಟು ಮಡ್ಲ ತರಲು ಅಪ್ಪನ್ನು ಕಳಿಸಿಕೊಟ್ಟಿದ್ದು.ಆ ಮಡ್ಲಿನ ಜಾಗ ಅರಬೈಲ್ ಘಟ್ಟಯೆಂದಾಗ ನಮಗೆ ಅರಿವಿರಲಿಲ್ಲ.ಬೆಳಿಗ್ಗೆ ೪ಕ್ಕೆ ಹೋದವರು ರಾತ್ರಿ ೯ ಗಂಟೆಗೆ ಮಡ್ಲಿನ ಹೊರೆಹೊತ್ತು ಮನೆಗೆ ಬಂದಾಗ ಅಪ್ಪನ ಮೈಮೇಲೆ ಗೀರಿದ ಗುರುತುಗಳು,ರಕ್ತದ ಕಲೆಗಳು,ಚಪ್ಪಲಿ ಹರಿದು ಪಿನ್ ಹಾಕಿದ್ದು, ಬೆವರು,ನೆತ್ತಿಗೆ,ಕೈಕಾಲಿಗ ಎಣ್ಣೆಹಾಕಿ ಅವ್ವ ತಿಕ್ಕುತ್ತಿದ್ದುದನ್ನು ಸುಂಬಳವರಿಸುತ್ತ. ಅಪ್ಪಾ ಅಂದಾಗ ಹತ್ತಿರ ಕರದು ಎನಾಗಿಲ್ಲ ಎಂದು ನನಗುಣಿಸುವದನ್ನು ನೆನಪಿಸಿದಾಗ ಎನೋ ಒಂಥರಾ ನೋವು.ಮಕ್ಕಳ ಸುಖವೇ ಅವರಿಗೆ ಮುಖ್ಯ.ನಾನು ಅರಬೈಲ್ ಶಾಲೆಗೆ ಹೋಗುವಾಗ ಅಲ್ಲಿಯ ತಿರುವಿನ ಇಳಿಜಾರಲ್ಲಿ ಹೆಡೆಬಿಚ್ಚಿ ನನ್ನತ್ತ ಟಾಟಾ ಹೇಳುವ ಮಡ್ಲಿನ ಗರಿಗಳು ಚಿರಪರಿಚಿತ.ಅವುಗಳ ಸೂರಲ್ಲಿ ಬೆಳದವಳು ನಾನು ಅಪ್ಪನ ಸಂಕಟ ಮರೆಯಲಾದಿತೆ.
ಮಡ್ಲು ಗರಿಬಿಚ್ಚಿ ನಿಂತಿದ್ದನ್ನು ನೋಡಲು ಸುಂದರ.ಅದರ ಕೊಯ್ಯಲು ತುಂಬಾ ಕಷ್ಟ. ಚಾಕುವಿನ ಹರಿತದಂತೆ ಪರಚುವುದಂತೂ ಖರೆ.
ಪ್ರತೀ ವರ್ಷವೂ ಮುಂಗಾರು ಮಳೆ ಶುರುವಾಗುವ ಸುಮಾತಿಂಗಳ ಮೊದಲೇ ಗಡಿ ಕೆಲಸದ ಕಾರ್ಯ ಆರಂಭ. ಮಲೆನಾಡಿನಲ್ಲಿ ಕೃಷಿಯನ್ನೇ ಅವಲಂಬಿಸಿದ ಜನರಲ್ಲಿ ಗಂಡಸರು ಹಾಗೂ ಹೆಂಗಸರು ಪ್ರತ್ಯೇಕವಾಗಿ ಸಿದ್ಧತೆಯಲ್ಲಿ ತೊಡಗಿಕೊಂಡಿರುತ್ತಾರೆ.ಹಾಗಿದ್ದಾಗ ತಾಳೆ ಮರ,ತಾಳೆ ಮಡ್ಲು,ತಾಳೆ ಹೆಸರಿಂದ ಕರೆಯುವ ಈ ತಾಳೆಯ ಬಗ್ಗೆ ತಾಳ್ಮೆಯಿಂದ ಓದುವ ಅಥವಾ ಅರ್ಥೈಸಿಕೊಳ್ಳುವುದರಿಂದಈಗೆಲ್ಲ ಅದರ ಬಳಕೆ ಕಡಿಮೆಯಾದರೂ,ಬಳಕೆಗೆ ಏನೂ ಬರವಿಲ್ಲ.ತಾಳೆ ಎಲೆಯನ್ನು ತಾಳೆಗರಿ, ತಾಳೆಓಲೆ, ತಾಳೆಮಡಲು ಎಂತಲೂ ಕರೆಯುತ್ತಾರೆ. ತಾಳೆಮರವನ್ನು ಶ್ರೀತಾಳೆ, ಬೀಸಣೆಕೆ ಮರ, ಕೊಡೆತಾಳೆ ಎಂದು ಕರೆಯುವುದಿದೆ. ದೇವಾನು ದೇವತೆಗಳಿಗು ಈ ಮರ ವಿಶೇಷವೆನ್ನುತ್ತಾರೆ. ತಾಳೆಗರಿಗಳ ಬಗ್ಗೆ ಹೆಚ್ಚಿನದಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ.
ತಾಳೆ ಮರಗಳು ದೊಡ್ಡ ಸಸ್ಯಗಳು. ಇದರ ಸುಲಭವಾದ ಕೃಷಿ ಮತ್ತು ನಿರ್ವಹಣೆ, ಅದರ ಹೆಚ್ಚಿನ ಅಲಂಕಾರಿಕ ಮೌಲ್ಯದ ಜೊತೆಗೆ, ಉದ್ಯಾನಕ್ಕೆ ಕೊಡುಗೆ ನೀಡುತ್ತದೆ ವಿಲಕ್ಷಣ ಸ್ಪರ್ಶ, ಉಷ್ಣವಲಯ, ಹವಾಮಾನವು ತಂಪಾಗಿರುವ ಪ್ರದೇಶಗಳಲ್ಲಿಯೂ ಸಹ.ಆದರೆ, ತಾಳೆ ಮರ ಎಂದರೇನು? ಮತ್ತು ಯಾವ ಪ್ರಕಾರಗಳಿವೆ? ‘ತಾಳೆ ಮರ’ ಪದದ ಅರ್ಥ.ಈ ಸಸ್ಯಗಳನ್ನು ಮೊನೊಕಾಟ್ಗಳುಅಂದರೆ, ಅದರ ಭ್ರೂಣದಲ್ಲಿ ಕೇವಲ ಒಂದು ಕೋಟಿಲೆಡಾನ್ ಇದೆ. ಆದರೆ ಅದು ಮಾತ್ರವಲ್ಲ, ಡೈಕೋಟಿಲೆಡಾನ್‌ಗಳಂತಲ್ಲದೆ ,ಈ ರೀತಿಯ ಸಸ್ಯದ ಉದಾಹರಣೆ ಮರಗಳಾಗಿರಬಹುದು,ಕಾಂಡದಲ್ಲಿ ದ್ವಿತೀಯಕ ಮರವನ್ನು ಕಾಣುವುದಿಲ್ಲ, ಆದ್ದರಿಂದ ಅವುಗಳಿಗೆ ನಿಜವಾಗಿಯೂ ‘ನಿಜವಾದ’ ಕಾಂಡವಿಲ್ಲ. ಇದಲ್ಲದೆ, ಅವುಗಳನ್ನು ಮೊಗ್ಗಿನ ಕೆಳಗೆ ಕತ್ತರಿಸಿದರೆ ಅಲ್ಲಿ ಎಲೆಗಳು ಮೊಳಕೆಯೊಡೆಯುತ್ತವೆ.
ಸುಮಾರು 3 ಜಾತಿಯ ತಾಳೆ ಮರಗಳಿವೆ, ಇದನ್ನು ಜಗತ್ತಿನಾದ್ಯಂತ ವಿತರಿಸಲಾಗಿದೆ. ಹೆಚ್ಚು ವೈವಿಧ್ಯತೆಯನ್ನು ಹೊಂದಿರುವ ಪ್ರದೇಶಗಳು ನಿಸ್ಸಂದೇಹವಾಗಿ ಉಷ್ಣವಲಯ ಮತ್ತು ಉಪೋಷ್ಣವಲಯವಾಗಿವೆ, ಆದರೆ ಹಿಮವನ್ನು ಚೆನ್ನಾಗಿ ತಡೆದುಕೊಳ್ಳುವಂತಹವುಗಳನ್ನು ನಾವು ಕಾಣುತ್ತೇವೆ, ಉದಾಹರಣೆಗೆ
ಟ್ರಾಕಿಕಾರ್ಪಸ್ ಫಾರ್ಚೂನಿ (-15ºC ವರೆಗೆ)
ದಿ ನ್ಯಾನೊರ್ಹೋಪ್ಸ್ ರಿಚಿಯಾನಾ (20ºC ವರೆಗೆ) ಅಥವಾ ರಾಫಿಡೋಫಿಲಮ್ ಹಿಸ್ಟ್ರಿಕ್ಸ್ (-23ºC ವರೆಗೆ).
ತಾಳೆ ಕುಟುಂಬ, ಅರೆಕೇಶಿಯ, ಇದು ತುಂಬಾ ವೈವಿಧ್ಯಮಯವಾಗಿದೆ. ಕಾಂಡವನ್ನು ಹೊಂದಿರುವ ಜಾತಿಗಳಿವೆ, ಇಲ್ಲದಿರುವ ಇತರವುಗಳಿವೆ; ಆರೋಹಿಗಳು ಇದ್ದಾರೆ, ಮತ್ತು ಕೆಲವು 30 ಮೀಟರ್ ವರೆಗೆ ಬೆಳೆಯುತ್ತವೆ, ಅದು ಆಕಾಶವನ್ನು ಅದರ ಎಲೆಗಳಿಂದ ಸ್ಪರ್ಶಿಸಲು ಬಯಸಿದಂತೆ(ಸೆರಾಕ್ಸಿಲಾನ್ ಕುಲದಂತೆಯೇ. ಇದರ ಎಲೆಗಳು ಹೆಚ್ಚುವರಿಯಾಗಿ ಪಿನ್ನೇಟ್ ಆಗಿರಬಹುದು ಎಲೆಗಳಂತೆ ಫೀನಿಕ್ಸ್ ಕ್ಯಾನರಿಯೆನ್ಸಿಸ್ಅಥವಾ ವೆಬ್‌ಬೆಡ್.
ನಿಮ್ಮ ಮೂಲದ ಸ್ಥಳ ಮತ್ತು ನಿಮ್ಮ ಸ್ಥಳ ಮತ್ತು ಕಾಳಜಿಯನ್ನು ಅವಲಂಬಿಸಿ, ತಾಳೆ ಮರಗಳು ಹೊಂದಿಕೊಳ್ಳುತ್ತವೆ. ಉದಾಹರಣೆಗೆ, ಒಂದು ಮಾದರಿಯು ಸೂರ್ಯನಿಗೆ ಹೆಚ್ಚು ಒಡ್ಡಿಕೊಂಡಾಗ, ಅದರ ಎಲೆಗಳು ಹೆಚ್ಚು ಕಠಿಣವಾಗುತ್ತವೆ; ಮತ್ತೊಂದೆಡೆ, ನಾವು ಅದನ್ನು ನೆರಳಿನಲ್ಲಿ ಹೊಂದಿದ್ದರೆ, ಅದು ಮೃದುವಾಗಿರುತ್ತದೆ, ಹೆಚ್ಚು ‘ಮೃದುವಾಗಿರುತ್ತದೆ’..ಭಾರತ, ಬರ್ಮ, ಶ್ರೀಲಂಕಾ ಮುಂತಾದ ದೇಶಗಳ ಶುಷ್ಕ ಹಾಗೂ ಮರಳು ನೆಲವಿರುವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಈ ದೇಶಗಳ ಸಮುದ್ರತೀರಗಳಲ್ಲಿ ಇದನ್ನು ಸಾಮಾನ್ಯವಾಗಿ ಕಾಣಬಹುದು.
ಈ ತಾಳೆ ಮರ ಎಲ್ಲರಿಗೂ ಚಿರಪರಿಚಿತ.ತಾಳೆಯ ಇಂಚಿಂಚು ಬಲ್ಲವರು ಅದರ ರುಚಿಯನ್ನು ಅರಿತಿರುತ್ತಾರೆ.ಈ ತಾಳೆಮರ ತೆಂಗಿನ ಮರದ
ಕಾಂಡದಂತೆ ಇದರ ಕಾಂಡವೂ ಇದೆ; ಕವಲುಗಳಿಲ್ಲದೆ ಉರುಳೆಯಾಕಾರ, ಇದರ ಎತ್ತರ 15-20ಮೀ. ಕೆಲವು ಸಲ 30ಮೀ. ಎತ್ತರಕ್ಕೂ ಬೆಳೆಯುವುದುಂಟು. ಮರದ ತುದಿಯಲ್ಲಿ 30-40 ಬೀಸಣಿಗೆಯಾಕಾರದ ಎಲೆಗಳಿವೆ. ಒಂದೊಂದು ಎಲೆಗೂ 1/2-1 ಮೀ. ಉದ್ದದ ತೊಟ್ಟು ಉಂಟು. ತೊಟ್ಟು, ಕಾಂಡ ಕಪ್ಪು ಬಣ್ಣದ್ದು, ಇದರ ಹೊರಕವಚ ಕೂಡ ಗಟ್ಟಿಯಾದ ನೀಳವಾದ ನಾರುಗಳಿಂದ ರಚಿತವಾಗಿದೆ. ಮಧ್ಯದ ದಿಂಡು ಮಾತ್ರ ಮೃದುವಾಗಿದ್ದು ಪಿಷ್ಟದ ಹರಳುಗಳಿಂದ ತುಂಬಿದ ಕೋಶಗಳಿಂದ ರೂಪಿತವಾಗಿದೆ. ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ತಾಳೆಮರ ಹೂ ಬಿಡುತ್ತದೆ. ಹೂಗಳಲ್ಲಿ ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆಯಾಗಿದ್ದು ಭಿನ್ನಮರಗಳಲ್ಲಿ ಅರಳುವುವು. ಹೂ ಗೊಂಚಲಿನ ದಿಂಡನ್ನು ಕೊಯ್ದರೆ, ಅದರಿಂದ ಸಿಹಿಯಾದ ರಸ ಸೋರುತ್ತದೆ. ಫಲ ದಪ್ಪಗಾತ್ರದ್ದು. ಇದರ ಹೊರಕವಚದಲ್ಲಿ ನಾರು ಉಂಟು. ಹಣ್ಣಿನ ಒಳಗೆ ಮೂರು ಅಂಕಣಗಳಿದ್ದು ಒಂದೊಂದು ಅಂಕಣದಲ್ಲಿ ಒಂದೊಂದು ಬೀಜ ಇದೆ. ಎಳೆಯ ಹಣ್ಣಿನ ತಿರುಳು ಮೃದುವಾಗಿಯೂ ಸಿಹಿಯಾಗಿಯೂ ಇದ್ದು ನೀರಿನಿಂದ ಕೂಡಿದೆ. ಹಣ್ಣಿಗೆ ತಾಟಿನುಂಗು, ಸಿಹಿನುಂಗು, ತಾಳಿಬೊಂಡ ಎಂಬ ಹೆಸರುಗಳುಂಟು. ಎಳನೀರನ್ನು ಉಪಯೋಗಿಸುವಂತೆ ತಾಟಿನುಂಗನ್ನು ಬಳಸುವುದಿದೆ. ಹಣ್ಣಾದಾಗ ಇದರ ಮೃದುಭಾಗ ಗಟ್ಟಿಯಾಗಿ ಮೂಳೆಯಂತ ತಿರುಳಾಗುತ್ತದೆ. ಬೀಜ ಮೊಳೆಯುವಾಗ ಬೇಳೆ ಹಾಲಿನ ಬಣ್ಣವಾಗಿದ್ದು, ತಿನ್ನಲು ರುಚಿಯಾಗಿರುತ್ತದೆ.
ತಾಳೆಮರದ ಸ್ವಾಭಾವಿಕ ವೃದ್ಧಿ ಬೀಜಗಳ ಮೂಲಕ ನಡೆಯುವುದು. ಬೆಳೆವಣಿಗೆಯ ಪ್ರಾರಂಭಿಕ ಹಂತಗಳಲ್ಲಿ ಕಾಂಡದ ಭೂಗತ ಭಾಗ ಮಾತ್ರ ಗಾತ್ರದಲ್ಲಿ ಹೆಚ್ಚುತ್ತದೆ. ಕಾಂಡದ ಮೇಲ್ಭಾಗ ಲಂಬಿತಗೊಂಡು ವಿಶಿಷ್ಟ ರೀತಿಯ ಕಪ್ಪು ಕಾಂಡವಾಗಿ ಬೆಳೆಯುವುದು 15-20 ವರ್ಷಗಳ ತರುವಾಯ ಮಾತ್ರ.ತಾಳೆಮರದ ಹೂಗೊಂಚಲಿನಿಂದ ಹೆಂಡವನ್ನು ಇಳಿಸುತ್ತಾರೆ. ಹೊಸದಾಗಿ ಇಳಿಸಿದ ರಸಕ್ಕೆ ನೀರಾ ಎಂದು ಹೆಸರು. ಇದರಲ್ಲಿ 12% ರಷ್ಟು ಸೂಕ್ರೋಸ್ ಉಂಟು. ಇದನ್ನು ಸರಿಯಾಗಿ ಸಂಸ್ಕರಿಸದಿದ್ದರೆ ಹುದುಗಲು ಪ್ರಾರಂಭಿಸಿ ಹೆಂಡವಾಗುತ್ತದೆ. ನೀರಾ ಮಧುರವಾದ ವಾಸನೆಯಿಂದ ಕೂಡಿದ ಸಿಹಿ ರಸ, ಇದರ ಬಣ್ಣ ಬಿಳಿ, ಇದರಲ್ಲಿ ಸಕ್ಕರೆಯೊಂದೇ ಅಲ್ಲದೆ ಯೀಸ್ಟ್ ಕೂಡ ಉಂಟು. ಇದಕ್ಕೆ ಔಷಧಿ ಗುಣಗಳಿವೆಯೆಂದೂ ಹೇಳಲಾಗಿದೆ.ಇದು ಉತ್ತೇಜಕ ಮತ್ತು ಕಫ ಹಾರಿ, ತಾಳೆಮರದ ನೀರಾದಿಂದ ಬೆಲ್ಲ ಮಾಡುವುದೂ ಉಂಟು. 2-3 ತಿಂಗಳಿನ ಎಳೆಯ ಸಸಿಯಲ್ಲಿ ಪಿಷ್ಟ ಹೆಚ್ಚಾಗಿರುತ್ತದಾಗಿ ಇದು ತಿನ್ನಲು ಯೋಗ್ಯವಾಗಿದೆ. ಕೆಲವು ವೇಳೆ ಇದರಿಂದ ಪಿಷ್ಟವನ್ನು ಉತ್ಪಾದಿಸುವುದುಂಟು. ಎಲೆಗಳ ತೊಟ್ಟಿನಲ್ಲಿ ತಂತಿಯಂತೆ ಗಟ್ಟಿಯಾಗಿರುವ ನೀಳವಾದ ನಾರು ಉಂಟು. ಈ ನಾರಿನಿಂದ ಬ್ರಷ್ ಮತ್ತು ಬರಲುಗಳನ್ನು ತಯಾರಿಸಲಾಗುತ್ತದೆ.
ನೀರಾ ಪ್ರಿಯರಿಗೆ ಕೊರತರಯಿಲ್ಲ. ನೀರಾ ಇಳಿಸುವುದಕ್ಕೆ ಮೊದಲು ಹಳೆಯ ಎಲೆಗಳನ್ನು ಕತ್ತರಿಸಿ ತೊಟ್ಟಿನ ತುದಿಯನ್ನು ಜಜ್ಜಿ ತೊಟ್ಟನ್ನು ಪಟ್ಟೆ ಪಟ್ಟೆಗಳಾಗಿ ಪ್ರತ್ಯೇಕಿಸಲಾಗುತ್ತದೆ. ಮರಕ್ಕೆ ಮೊಳೆಗಳನ್ನು ಬಡಿದು, ಈ ಪಟ್ಟೆಗಳನ್ನು ಬಾಚಿದರೆ ಮೃದು ಅಂಗಾಂಶದಿಂದ ನಾರು ಪ್ರತ್ಯೇಕಗೊಳ್ಳುತ್ತದೆ. ಈ ನಾರಿಗೆ ಬ್ಯಾಸೈನ್ ಎಂದು ಹೆಸರು.ತೊಟ್ಟಿನ ಅಂಚಿನ ಭಾಗದಿಂದ ಲಭಿಸುವ ನಾರು ಉತ್ತಮದರ್ಜೆಯದು. ನಾರು ತೆಗೆಯುವುದು ಒಂದು ಗೃಹ ಕೈಗಾರಿಕೆ, ಕೃಷ್ಣಾ, ಗೋದಾವರಿ, ತಿನ್ನವೆಲ್ಲಿ ಜಿಲ್ಲೆಗಳಲ್ಲಿ, ತಿರುವಾಂಕೂರಿನ ದಕ್ಷಿಣ ಭಾಗದಲ್ಲಿ ಈ ಕೈಗಾರಿಕೆ ಹೆಚ್ಚು. ನಾರನ್ನು ವಿವಿಧ ದರ್ಜೆಗಳಾಗಿ ವಿಂಗಡಿಸಿ 15-45 ಸೆಂ.ಮೀ. ಉದ್ದಕ್ಕೆ ಕತ್ತರಿಸಿ, ನೇರಳೆ ಕಂದು ಬಣ್ಣಕೊಟ್ಟು ಕಂತೆಗಳಾಗಿ ಕಟ್ಟಿ ಸಿದ್ಧಪಡಿಸುವರು.ಮರಗಳನ್ನು ಕತ್ತರಿಸಿ, ಸರಗಳನ್ನು ಮಾಡಿ ಗುಡಿಸಲುಗಳ ನಿರ್ಮಾಣಕ್ಕೆ ಉಪಯೋಗಿಸುತ್ತಾರೆ. ಮರಗಳ ಒಳಗಿನ ಭಾಗವನ್ನು ತೆಗೆದು ಕೊಳವೆಯನ್ನಾಗಿ ಮಾಡಿ ನೀರು ಹಾಯಿಸಲು ಉಪಯೋಗಿಸುವರು. ಎಲೆಗಳಿಂದ ಬೀಸಣಿಗೆ, ಛತ್ರಿ, ಬುಟ್ಟಿ ಮತ್ತು ಚಾಪೆಗಳನ್ನು ಮಾಡುತ್ತಾರೆ. ಮರದಿಂದ ಕಪ್ಪಾದ ಗೋಂದು ದೊರೆಯುತ್ತದೆ.
ತೊಟ್ಟಿನ ತುದಿಯಲ್ಲಿ ಬೃಹದಾಕಾರದ ಎಲೆಗಳಿರುತ್ತವೆ. ಎಲೆಯು ಬೀಸಣಿಕೆಯಾಕರ ಅಥವಾ ಮನುಷ್ಯನ ಹಸ್ತಕಾರದಲ್ಲಿ ನವಿಲುಗರಿ ಬಿಚ್ಚಿದ೦ತೆ ಇರುತ್ತದೆ. ಎಲೆಯನ್ನು ಗುಡಿಸಲು ನಿರ್ಮಾಣಕ್ಕೆ ಹಾಗೂ ತುಂಬಾ ಗೃಹೋಪಯೋಗಿ ವಸ್ತುಗಳಾಗಿ ಬಳಸುತ್ತಾರೆ..ಇದರ ಸೋಗೆ ಅಥವಾ ತೊಟ್ಟನ್ನು ಅಡಿಕೆ ಮರಗಳಿಗೆ, ಗಿಡಗಳಿಗೆ ಕಂದಕದಲ್ಲಿ ನೀರು ಹಾಯಿಸಲು ಬಳಸುತ್ತಾರೆ.ಕಾಯಿ ಬಿಟ್ಟ ನಂತರ ಮರ ಸತ್ತಂತೆಯೆ. ಅದಕ್ಕೆ ಪ್ರಕೃತಿಯ ವಿಸ್ಮಯ ಅರಿವತರು ಯಾರು ಇಲ್ಲಾ ಎನ್ನಬಹುದು. ಕೆಲವೊಮ್ಮೆ ತಾಳೆಮರ ಹೂ ಬಿಟ್ಟಿದ್ದನ್ನು ನೋಡಿ ಬರಗಾಲ ಪರಿಸ್ಥಿತಿ ಏದುರಾಗುತ್ತದೆ ಎಂದು ಕೆಲವು ಕಡೆ ಅಪನಂಬಿಕೆಯಿದೆ. ಹೂ ಬಿಟ್ಟ ತಾಳೆ ಮರವನ್ನು ಕಡಿದು ನೆಲಕ್ಕುರುಳಿಸಿರುವುದು ಇದೆ. ಇದರಿಂದ ಇಂದು ತಾಳೆಮರದ ಸಂತತಿ ಕೂಡ ಅಳಿವಿನಂಚಿನಲ್ಲಿದೆ.
ಬಾಲ್ಯದ ಅರಿವು ತಿಳಿಯುವ ಕುತೂಹಲ ಎಲ್ಲವೂ ಒಟ್ಟೊಟ್ಟಿಗೆ ಬಂದರೆ ಒಳಿತು.ನಾನೀಗ ಪ್ರತಿದಿನ ನೋಡುವ ಅರಬೈಲ್ ಘಟ್ಟದ ಪ್ರದೇಶದಲ್ಲಿ ತಲೆಯೆತ್ತಿ ಕುಣಿದಾಡುವ ನಲಿವಿನ ಗರಿಗಳು ಪ್ರತಿಗಳಿಗೆ ಆಶೀರ್ವಾದ ಮಾಡಿದಂತೆ.ನಿನ್ನಪ್ಪನಂತವರು ಮಳೆಗಾಲ ಪ್ರಾರಂಭಕ್ಕೂ ಮುನ್ನ ನನ್ನರಸಿ ಈ ಘಟ್ಟಕ್ಕೆ ಬರುವರೆಂಬ ಸಂದೇಶ ಸಾರಿದಂತೆ.ಅರಣ್ಯ ಅಳಿದರೆ ನನ್ನ ಅಸ್ತಿತ್ವ ಅಳಿದಂತೆ ಪರೋಕ್ಷವಾಗಿ ಹೇಳಿದಂತೆ ಕಾಣುತ್ತಿತ್ತು.
ಶಿವಲೀಲಾ ಹುಣಸಗಿ
ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಶಿಕ್ಷಕಿ *ಪ್ರಕಟಿತ ಕೃತಿಗಳು- ೧)ಬಿಚ್ಚಿಟ್ಟಮನ,೨)ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು ೩) ಗಿರಿನವಿಲನೆನಪುಗಳು ೪) ಗೋರಿಯಸುತ್ತ ಸಪ್ತಪದಿ ತುಳಿದಾಗ ಕಥಾ ಸಂಕಲನ,ಜಿಲ್ಲಾಧ್ಯಕ್ಷೆ ಕೇ.ಕ.ಸಾ.ವೇದಿಕೆ.ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ
ತಾಳೆ ಮರದ ಮಹಿಮೆಯೇ ಹಾಗೆ.
ಸುಂದರ ಲೇಖನ.
ತುಂಬಾ ಅಧ್ಭುತ ಸಂದೇಶ…ಇದೇ ರೀತಿ ಇನ್ನೂ ಹೆಚ್ಚು ಹಲವು ನೀತಿಗಳನ್ನು ದೇವರು ನಿಮಗೆ ಆರೋಗ್ಯ ಆಯಸ್ಸು ನೀಡಲಿ ಎಂದು ಬೇಡಿಕೊಳ್ಳುತ್ತೇವೆ…
ಈ ಲೇಖಕಿಯರ ಬರಹ ಓದುವುದೇ ಒಂದು ಸುಯೋಗ ಯಾಕೆಂದರೆ ಬಾಲ್ಯದ ಕುರಿತಿದೆ ಆದರೆ ಪರಿಸರದಲ್ಲಿನ ತಾಳೆಮರದ ಕುರಿತು ಮನತಟ್ಟುವಂತೆ ಬರೆದ ಬರಹ ಪರೋಕ್ಷವಾಗಿ ಈ ಪರಿಸರ ನಾಶ ಮಾಡಿದರೆ ನಮ್ಮ ಅಳಿವು ನಿಶ್ಚಿತ ಎಂಬುದು ಎಚ್ಚರಿಸುತ್ತದೆ.ಶುಭವಾಗಲಿ