ಕಾವ್ಯ ಸಂಗಾತಿ
ಹೆಣ್ಣಿನ ಅಳಲು….!
ಮೋಹನ್ ಬಸಪ್ಪನಾಯಕ
ಕಾಡುವ ಮೃಗಗಳ ಬಾಯಿಗೆ
ಸಿಕ್ಕದೆ ಪಾರಾಗುವ ಅವಸರದಲ್ಲೇ ಎಲ್ಲ ಇಷ್ಟ, ಬಯಕೆಗಳು ಅಳಿದು ಹೋಗಿವೆ…,
ಉದುರಿ ಹೋದ ಎಷ್ಟೋ
ಕಣ್ಣ ಹನಿ ಕೆನೆಗಟ್ಟಿ
ಒಡಲ ಉರಿಗೆ ಸಾಕ್ಷಿಯಾಗಿದೆ…,
ಕಾಂಚಾಣದ ಹಮ್ಮಿನಲಿ
ಕನಿಕರವ ತೂರಿ ಕುದಿಯುವ
ಕಾಯದ ಆಸೆ ತೀರಿಸಲು
ಎಳೆದಾಡಿ ಮಾಂಸದ ತುಂಡಿನಂತೆ
ತಿಳಿದು ಹೊಸಕಿ ಹಾಕಲು
ನಿಂತಿರುವ ರಕ್ಕಸರ
ಅಟ್ಟಹಾಸಕೆ ಹೆದರುತಲೇ
ಹೆಣ್ಣಿನ ಆಯಸ್ಸು ಕಳೆದಿದೆ….,
ಕಾಮದ ಅಗ್ನಿಗೆ ಅಹುತಿ
ಆದರೂ ನೋವಿನ
ಕೂಗಿಗೆ ನ್ಯಾಯ ದೂರವಾಗಿ
ದೊಡ್ಡವರ ಕೈಯೊಳಗೆ ಸೆರೆಯಾಗಿ ಬಿಟ್ಟಿದೆ….,
ಅತ್ತರೂ, ಕಿರುಚಿದರೂ, ಸಿಕ್ಕಿದ್ದು
ಸ್ಟೇಟಸ್ ಗಳಲ್ಲಿ ಸಂತಾಪವಷ್ಟೆ…..!
ನೂರು ದಾರಿಗಳ ದಾಟಿ
ನವ ಆವಿಷ್ಕಾರಗಳ ಜಗತ್ತು
ಹುಟ್ಟಿದ್ದರೂ ಹೆಣ್ಣಿನ
ಕಣ್ಣೀರಿಗೆ ಕರಗಿ ನ್ಯಾಯ ನೀಡುವ
ಯಾವ ಯಂತ್ರವೂ ಬರಲಿಲ್ಲ..,
ಎಲ್ಲವೂ ಉಳ್ಳವರ ಒಡಲಿಗೆ
ಆಹಾರವಾಗಿದೆ…..!
ನೂರಕ್ಕೆ ನೂರು ಸತ್ಯ ಸರ್