ಕಾವ್ಯ ಸಂಗಾತಿ
ಗಜಲ್
ಕೆ.ಶಶಿಕಾಂತ


ಬರೆದ ಅಕ್ಷರಗಳಿಂದ ಸದಾ ಜಿನುಗುತಿದೆ ಪ್ರೀತಿ
ಕರೆವ ದನಿಗಳಿಂದ ಅನುರಣಿಸುತಿದೆ ಪ್ರೀತಿ
ಹೂಬನದಿ ಸುಳಿದಾಡಿ ಮೈಯೆಲ್ಲಾ ಗಂಧ
ಅರಸಿ ಬಂದಿಹ ದುಂಬಿ ಸಾರುತಿದೆ ಪ್ರೀತಿ
ಬಾಳಬೀದಿಯ ತುಂಬ ಸಿಂಗಾರದ ರಂಗೋಲಿ
ನಿನ್ನೆದೆ ಕುಣಿದು ನಲಿಯುತ ಚೆಲ್ಲುತಿದೆ ಪ್ರೀತಿ
ಕಾಳ ರಾತ್ರಿಯ ಭಯವ ಕರಗಿಸಿವೆ ಚುಕ್ಕೆಗಳು
ನಿನ್ನ ಕಂಗಳು ಬೆಳದಿಂಗಳ ಸುರಿಸುತಿದೆ ಪ್ರೀತಿ
ಅಂಗದೋರದ ಮಾಯಾಂಗನೆ ಚೆಲುವ ‘ಶಶಿ’
ಸಂಗವಳಿಯದ ಮಧುರಸದ ರುಚಿಯಿದೆ ಪ್ರೀತಿ