ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ ಧಾರವಾಡ
“ಅರಳಿದ ಮನಸು”


ಅರಳಿದ ಮನಸು
ಅದೆಂಥಾ ಸೊಗಸು
ಸಿಹಿ ಜೇನಂಥ ಕನಸು
ಸವಿದ ಮಾವು ಹಲಸು
ಬಣ್ಣದ ಓಕುಳಿಯ
ಆಡಿದಂತೆ ಭಾವವು
ನೀರಿನ ಕಾರಂಜಿಯ
ಚಿಮ್ಮಿದಂತೆ ನಲಿವು
ಒಣಗಿದ ಮರದಲ್ಲಿ
ಚಿಗುರಿದಂತೆ ಎಲೆಗಳು
ಹಸುರಿನ ಬಣದಲ್ಲಿ
ಅರಳಿದಂತೆ ಹೂಗಳು
ಉತ್ಸಾಹ ಹರುಷದಲಿ
ನವಿಲಿನಂತೆ ಕುಣಿತವು
ನವಿರಾದ ಹೆಜ್ಜೆಯಲಿ
ಕಾಲ್ಗೆಜ್ಜೆಯ ತಾಳವು
ಆಸೆಗಳ ಅಲೆಯಲ್ಲಿ
ತೇಲಿದಂತೆ ಮನವು
ಆಗಸದ ಅಂಗಳದಲಿ
ಹಾರಿದಂತೆ ತನುವು
ಜಯಶ್ರೀ ಎಸ್ ಪಾಟೀಲ
ಧಾರವಾಡ