ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ದನಿಯಡಗಿದ ಗೆಜ್ಜೆ ನಾನು..

ಕಿವಿಯನೇಕೆ ತೆರೆಯುತಿರುವೆ?

ಎದೆಯೊಳೇನ ಬಯಸುತಿರುವೆ…

ಮೆ ಕರತಾ ರಹಾ ಔರೋಂಕಿ ಕಹಿ

ಮೇರಿ ಬಾತೇ ಮೇರೆ ಮನ್ ಮೆ ಹೀ ರಹೀ..

ನೀವು ಬಯಸುವ ಮಾತನ್ನೇ ನಾನಾಡುತ್ತಿರುವೆ. ನನ್ನ ದನಿಯನ್ನೇ ನಾನು ಅಡಗಿಸಿಕೊಂಡಿರುವೆ. ಇನ್ನು ನನ್ನಲ್ಲೇನಿದೆ ಹೇಳಲು? ನಿಮಗೇನಿದೆ ಕೇಳಲು? ಭಾವಗಳೇ ಇಲ್ಲದ ಮೇಲೆ ಬತ್ತಿಹೋಗಿದೆ ಕಡಲು.

ಕಭಿ ಟೂಟ್ ಗಯ ಕಭಿ ತೋಡಾ ಗಯ

ಸೌ ಬಾರ್ ಮುಝೆ ಫಿರ್ ಜೋಡಾ ಗಯಾ..

ಎಷ್ಟು ಬಾರಿಯೆಂದು ಒಡೆದ ಕನ್ನಡಿಯ ಜೋಡಿಸಲಿ? ಚೂರಾದ ಹೃದಯವ ಇನ್ನೆಷ್ಟು ಹೊಲಿಯಲಿ? ಯೂಹಿ ಲುಟ್ ಲುಟ್ ಕೆ, ಔರ್ ಮಿಟ್ ಮಿಟ್ ಕೆ..

ಒಡೆದು ಬಿದ್ದ ಕೊಳಲು ನಾನು

ನಾದ ಬರದು ನನ್ನಲಿ..

ಅಲಂಕಾರಕ್ಕಷ್ಟೇ ಕೊಳಲ ಜೋಡಿಸಬಹುದು ನೀವು. ಆ ಮೊದಲಿನ ಸ್ವರ ಹೊರಡಿಸಬಲ್ಲಿರೇ?

ಗುಡಿಯಲ್ಲೋ ಸಮಾರಂಭದಲ್ಲೋ ನಾನು ನಗುತ್ತ ಮೆರೆಯಬಹುದು. ಆದರೆ ಅದು ನನ್ನಂತರಂಗದ ದನಿಯಾಗಬಹುದೇ, ಕೇವಲ ನಿಮ್ಮ ಒತ್ತಾಯದ ನುಡಿಸುವಿಕೆಯಾಗದೇ??

ಕಭಿ ಮಂದಿರ್ ಮೆ ಕಭಿ ಮೆಹೆಫಿಲ್ ಮೆ

ಸಜತಾ ಹೀ ರಹಾ ಹೂ ಮೆ..

ನಿಮ್ಮ ಕಾಲಿಗೆ ಕಟ್ಟುವ ಗೆಜ್ಜೆಗೆ ಎಂಥ ಮಧುರ ದನಿಯಿದೆ. ಪೂಜನೀಯ ಸ್ಥಾನವಿದೆ. ರಾಗ ತಾಳವೂ ಅದರಲ್ಲಡಗಿದೆ. ಗೊತ್ತು ನನಗೆ. ಆದರೆ ಮತ್ತೊಂದು ಸತ್ಯವೂ ಗೊತ್ತು. ಗೆಜ್ಜೆಯನ್ನು ಕಾಲಿಗಷ್ಟೇ ಕಟ್ಟುವಿರಲ್ಲದೆ ತಲೆಯ ಮೇಲಿನ ಕಿರೀಟವಾಗಿ ಎಂದೂ ಮೆರೆಸಲಾರಿರಿ.

ಅಪನೋಮೆ ರಹೆ ಯಾ ಗೇರೋಮೆ

ಘುಂಗುರು ಕೀ ಜಗಹ್ ತೋ ಹೆ ಪೈರೋಮೆ..

ಅದಕ್ಕೇ ಅಲ್ಲವೇ ನನ್ನ ಸ್ಥಾನ ಏನು ಎಂದು ಅರಿತು ನನ್ನ ಪಾಡಿಗೆ ನಾನಿರುವುದು. ನಿಮ್ಮ ತಾಳಕ್ಕೆ ಕುಣಿಯುತ್ತಿದ್ದರೂ, ನಿಮ್ಮನ್ನು ದೂಷಿಸದೆ ಅನುಸರಿಸುತ್ತಿರುವುದು. ಬಂದದ್ದನ್ನು ಸಹಿಸುತ್ತಿರುವುದು!

ಫಿರ್ ಕೈಸಾ ಗಿಲಾ ಜಗ್ ಸೆ ಜೋ ಮಿಲಾ

ಸೆಹೆತಾ ಹೀ ರಹಾ ಹೂ ಮೇ…

ಒಡೆದ ಕೊಳಲ ಪಾಡ ನೋಡು

ಇನ್ನೆಲ್ಲಿಯ ಸುಗ್ಗಿ ಎಂದು

ಮಣ್ಣಿನಲ್ಲಿ ಮಲಗಿತು

ಮುಗ್ಗಿ‌ ಮುರುಟಿ ನಲುಗಿತು…

ಅಷ್ಟೇ ಅಲ್ಲವೇ, ಉಸಿರು ನಿಲ್ಲಿಸಿದ್ದು ಕೊಳಲಾಗಲೀ, ಗೆಜ್ಜೆಯಾಗಲೀ ಅಥವಾ ದೇಹವೇ ಆಗಲಿ ಹೋಗುವುದು ಮಣ್ಣಿಗೇನೇ. ಇಷ್ಟು ಮಾತ್ರ ಅರಿತ ಮೇಲೆ ಮತ್ಯಾವ ಬೇಸರ? ಹಾಗೋ ಹೀಗೋ ಹೇಗೋ ಸಾಗೇ ಹೋಗುವುದು ಬದುಕು..

ಕಭಿ ಇಸ್ ಪಗ್ ಮೆ

ಕಭಿ ಉಸ್ ಪಗ್ ಮೆ

ಬಂಧ್ ತಾ ಹೀ ರಹಾ ಹೂ ಮೆ

ಘುಂಗುರು ಕೀ ತರ್ ಹಾ

ಬಜತಾಹೀ ರಹಾ ಹೂ ಮೆ…


ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

One thought on “

Leave a Reply

Back To Top