ಕಾವ್ಯ ಸಂಗಾತಿ
ಬಿ.ಎ.ಉಪ್ಪಿನ
ʼಓ ಮಗುವೆ!

ನಿಂತ ನೀರಾಗದಿರು ಓ ಮಗುವೆ
ಸದಾ ಹರಿಯುವ ಗಂಗೆಯಂತಾಗು
ಬತ್ತುವ ಬರಡಾಗದಿರುವ ಓ ಮಗುವೆ
ಭತ್ತದ ಫಲ ಕೊಡುವ ಫಸಲಿನಂತಾಗು
ಹೆತ್ತವರಿಗೆ ಭಾರವಾಗದಿರು ಓ ಮಗುವೆ
ಹೆತ್ತವರಿಗೆ ಬಾಯಿಗೆ ತುತ್ತು ಇಡುವಂತಾಗು
ಸಮಾಜಕ್ಕೆ ಬಾದೆಯಾಗದಿರು ಓ ಮಗುವೆ
ಸಮಾಜದ ಒಳಿತನ್ನೇ ಬಯಸುವಂತಾಗು
ಮಾತು ಮಲಿನವಾಗಿ ನುಡಿಯದಿರು ಓ ಮಗುವೆ
ನುಡಿವ ಮಾತುಗಳು ಮಾಣಿಕ್ಯ ಸ್ಪಟಿಕದಂತಾಗು
ಪರರ ಹೋಲಿಸಿಕೊಳ್ಳದಿರು ಓ ಮಗುವೆ
ಅವರೆ ನಿನ್ನನೇ ಹೋಲಿಸಿಕೊಳ್ಳುವಂತಾಗು
ಕಲಿಸಿದರೆ ಗುರುವಿಗೆ ಕಳಂಕವಾಗದಿರು ಓ ಮಗುವೆ
ಕಲಿಸಿದ ಗುರುವಿನ ಕನಸಿನ ಗೋಪುರಕ್ಕೆ ಕಳಸವಾಗು
ಬಿ.ಎ.ಉಪ್ಪಿನ
