ಅರ್ಚನಾ ಯಳಬೇರುರವರ ಗಜಲ್

ಕಾವ್ಯ ಸಂಗಾತಿ

ಅರ್ಚನಾ ಯಳಬೇರುರವರ ಗಜಲ್

ಭಾವ ಕ್ಷುಧೆಯನು ನೀಗಿಸುವ ಪೀಯೂಷವಿದು ಕವಿತೆ
ಒಲವ ತೋಯಜಕೆ ಆಸರೆಯ ಉತ್ಪಲಿನಿಯಿದು ಕವಿತೆ

ಸಿಂಧೂರವಿದು ಅಕ್ಷಿಗಳಲಿ ಅಡಗಿದ ಸುಪ್ತ ಸ್ವಪ್ನಗಳಿಗೆ
ಮೌನದೂರಲಿ ಉರವಣಿಸುವ ಧೀರ್ಘಿಕೆಯಿದು ಕವಿತೆ

ಚಿಂತನೆಯ ಬಿಸುಪಿನಲಿ ಧಾರ್ಷ್ಟ್ಯ ಮೆರೆಯುವ ದಿವಿಜೆ
ಮನದ ಪರಿಷೆಯಲಿ ಜಿನುಗುವ ಆರುಮೆಯಿದು ಕವಿತೆ

ಅಧ್ಯಾಹಾರವಿದು ಸಮ್ಮೋದ ಸಂಕ್ಷೋಭತೆಗಳ ಗಡಣಕೆ
ನಿರವಿಸುವ ಅಸುವಿನ ಆಲಾಪದ ಸುಷುಮೆಯಿದು ಕವಿತೆ

ಚಿತ್ತ ಚಾಂಚಲ್ಯತೆಗೆ ಕುಂದಿದ ಕಸುವು ಅನೂಹ್ಯ ಅರ್ಚನಾ
ಉಷೆಯ ಉತ್ಕರ್ಷದಲಿ ಹೊಳೆಯುವ ಉಳ್ಮೆಯಿದು ಕವಿತೆ


Leave a Reply

Back To Top