ಪ್ರೇಮಾ ಅವಿನಾಶ ಕವಿತೆ-ಚಿಗುರು ಚಿವುಟಿದಂತೆ….!

ಚಿಗುರು ಚಿವುಟಿದಂತೆ….!
ಬೀಜ ಒಂದು ಮರವಾಗಿ
ನನ್ನ ಬಾಳಿಗೆ ನೆರಳಾಗಿ
ಅರೆಗಳಿಗೆ
ಚಿಗುರು ಚಿವುಟಿದಂತೆ….

ಆಸೆಗಳು ಗರಿಗೆದರಿ
ಕುಣಿಯುತಿವೆ ಎದೆಗವಚಿ
ಅರೆಗಳಿಗೆ ಚಿಗುರು
ಚಿವುಟಿದಂತೆ….

ಕನಸುಗಳು ಕಲೆ ಹಾಕಿ
ನನಸಾಗುವ ಸೋಗು ಹಾಕಿ
ಅರೆಗಳಿಗೆ ಚಿಗುರು
ಚಿವುಟಿದಂತೆ….
ನಗು ಮೊಗದ ಮಗುವೊಂದು
ಮಡಿಲು ಸೇರುವ ಮುನ್ನ
ಅರೆಗಳಿಗೆ ಚಿಗುರು
ಚಿವುಟಿದಂತೆ….


2 thoughts on “ಪ್ರೇಮಾ ಅವಿನಾಶ ಕವಿತೆ-ಚಿಗುರು ಚಿವುಟಿದಂತೆ….!

Leave a Reply

Back To Top