ಕಾವ್ಯ ಸಂಗಾತಿ
ದಾದಾಪೀರ್ ತರೀಕೆರೆ
ಎಲ್ಲ ಬದಲಾಗಿದೆ
ನಿನ್ನ ಬಟ್ಟಲು ಕಂಗಳಲಿ ಸುರಿವ ನಶೆ
ಮೈಖಾನದ ಮದಿರೆಯ ಮೋಹ ಮರೆಸಿದೆ
ನಿನ್ನನ್ನೆ ಉಸಿರಾಡುವ ಮಜಾ ಗಾಳಿಯ ತಾಜಾತನದ ಸೊಕ್ಕು ಮುರಿದಿದೆ
ಸಂಜೆ ವಿಹಾರದ ಗಾಳಿಯಲ್ಲಿ ಆಹ್ಲಾದದ ಹಿತವಿಲ್ಲ
ನೀನು ನಡೆದಾಡಿದ ರಸ್ತೆಯಲಿ
ಜನ ರಂಗೋಲಿಯ ಬಿಡಿಸುತ್ತಿಲ್ಲ
ನಿನ್ನ ಮೀರಿದ ಕಲಾಕೃತಿಯ ರಚನೆ ಹೇಗೆ ಸಾಧ್ಯ
ಚಂದ್ರ ನೋಡಿ ಈದ್ ಮಾಡುವ ಜನರ ನಿಯ್ಯತ್ತು ಬದಲಾಗಿದೆ
ನಿನ್ನ ನೋಡಿದ ಮೇಲೆ ಮೋಡ ಮುಸುಕಿದರು ಹಬ್ಬಗಳು ನಿಲ್ಲುತ್ತಿಲ್ಲ
ಜನ್ನತ್ ಮತ್ತು ಖಯಾಮತ್ ಗಳ ಕಲ್ಪನೆ ಕೈ ಬಿಟ್ಟಾಗಿದೆ ಗೆಳತಿ
ನೀನು ಪದವಾದಾಗ ಮತ್ತು ಮೌನವಾದಾಗ ಅವೆಲ್ಲ ಕಂಡಿದ್ದೆನೆ
super