ಅಂಕಣ ಸಂಗಾತಿ

ಪ್ರಸ್ತುತ

ಅಂಚೆಯ ಹಂಚುವವರಿಗೆ ಧನ್ಯವಾದಗಳ ಗೌರವ

ಓಲೆಯ ಹಂಚಲು ಹೊರಡುವೆ ನಾನು

ತೋರಲು ಆಗಸದಲಿ ಬಿಳಿಬಾನು

ಮನೆಯಲಿ ನೀವು ಬಿಸಿಲಲಿ ನಾನು

ಕಾಗದ ಬಂತು ಕಾಗದವು

    ದಿನಕರ ದೇಸಾಯಿ ಅವರ ಕವಿತೆಯನ್ನು ಮೂರು ದಶಕಗಳ ಹಿಂದೆ ಕಲಿತು ರಾಗವಾಗಿ ಹಾಡಿದ ನೆನಪು ಇನ್ನು ಹಸಿರಾಗಿದೆ. ಆ ಹಾಡಿನ ತಾಕತ್ತೇ ಅಂಥಾದ್ದು.

    ಅಕ್ಟೋಬರ್ ೯ ವಿಶ್ವ ಅಂಚೆ ದಿನವಾದ್ದರಿಂದ ಅಂಚೆಯ ಬಗ್ಗೆ ನಮಗೆಷ್ಟು ನೋಡೋಣ.

    ‘ಪೋಸ್ಟ್’ ಅಥವಾ ‘ಪತ್ರ ತಗೋರಿ’ ಎಂದು ಕೂಗಿದ ಕೂಡಲೇ ಓಡಿ ಬಂದು ಪತ್ರ ತೆಗೆದುಕೊಂಡು ನಮ್ಮವರು ನಮಗಾಗಿ ತಮ್ಮ ಮಾತುಗಳಲ್ಲಿ ಬರೆದುದನ್ನು ಒಂದೇ ಉಸಿರಿಗೆ ಓದಿದ್ದು ಇಂದಿಗೂ ಸವಿನೆನಪೇ. ‘ನೀನೇ ಓದಿ ಹೇಳಣ್ಣಾ’ ಎಂದು ಅಂಚೆಯಣ್ಣನೊAದಿಗೇ ಓದಿಸಿ ಕೈ ಬಿಡುವ ಓದದವರೂ ಇದ್ದರು ಆಗ. ಈಗ ಮನೆಗೊಂದು ಪೋಸ್ಟ್ ಬಾಕ್ಸ್ ಇದ್ದು ಪೋಸ್ಟ್ ಮ್ಯಾನ್ ಬಂದು ಹೋದುದೇ ಗೊತ್ತಾಗುವುದಿಲ್ಲ . ಅಲ್ಲದೇ ಪತ್ರ ಓದಿಸುವ ಅನಕ್ಷರಸ್ಥರೂ ಈಗ ತುಂಬಾ ಕಡಿಮೆ. ಆ ವಿಷಯದಲ್ಲಿ ಅಂಚೆಯಣ್ಣ ನಿರಾಳವಾಗಿದ್ದಾನೆ.

    ಅಂದಿಗೆ ಪತ್ರ ಬರೆಯುವುದೂ , ಪತ್ರಕ್ಕೆ ಕಾಯುವುದೂ , ಮರಳಿ ಪತ್ರಿಸುವುದೂ ಒಂದು ಸಂತಸದ ವಿಷಯಗಳೇ ಆಗಿದ್ದವು.

   ಹೀಗೆ ಪರಸ್ಪರ ಮಾಹಿತಿ ವಿನಿಮಯಕ್ಕಾಗಿ ಶುರುವಾದ ಅಂಚೆ ಶತಮಾನಗಳವರೆಗೆ ತನ್ನ ಅಸ್ತಿತ್ವ ಉಳಿಸಿಕೊಂಡಿರುವುದು ಅದರ ಹೆಚ್ಚುಗಾರಿಕೆಯಾಗಿದೆ.  ಇಂದು ಮೊಬೈಲ್, ಮೇಲ್‌ಗಳ ಡಿಜಿಟಲ್ ಯುಗದಲ್ಲೂ ಕೆಲವು ವಿಷಯ ಸಂದರ್ಭಗಳಿಗೆ ಪತ್ರಗಳೇ ಅವಶ್ಯ ಅನಿವಾರ್ಯವೂ  ಆಗಿರುವುದು, ಮತ್ತು ಕೆಲವು ಮಾಧ್ಯಮಗಳು ಅಂಚೆ ವಿಳಾಸವನ್ನಷ್ಟೇ ಕೊಡುವುದು ಈ ಪತ್ರ ಸಂಸ್ಕೃತಿ ಉಳಿಸುವ ಉದ್ದೇಶವೇ ಆಗಿರಲು ಸಾಧ್ಯ. ಅಂಚೆ ಅಂದಾಕ್ಷಣ ಪತ್ರ ಅಷ್ಟೇ ಅಲ್ಲ ವಿಮೆ, ಉಳಿತಾಯ ದಿಪಾಸಿಟ್ ನಂತಹ ಸವಲತ್ತುಗಳೂ ಇಲ್ಲುಂಟು. ಇದು ಸರಕಾರಿ ಭದ್ರತೆಯಾಗಿರುವುದರಿಂದ ಯಾವುದೇ ಭಯ ಅನುಮಾನಗಳಿಲ್ಲದೇ ಇಲ್ಲಿ ಖಾತೆ ತೆರೆಯಬಹುದಾಗಿದೆ.

     ಇದೇ ಒಂದೆರಡು ದಶಕಗಳ ಹಿಂದೆ ದಸರಾ, ದೀಪಾವಳಿ, ಯುಗಾದಿ ಹೊಸವರುಷ,ರಾಖಿ ಹಬ್ಬಗಳಂತಹ ಪ್ರಮುಖ ದಿನಗಳಿಗೆ ಗ್ರೀಟಿಂಗ್ಸ್ ಖರೀದಿ ಮಾಡಲೆಂದೇ ಒಂದು ದಿನ ವಿನಿಯೋಗವಾಗುತಿತ್ತು. ಚೆಂದನೆಯ ಅರ್ಥಪೂರ್ಣ ಶುಭಾಶಯ ಪತ್ರ ಆರಿಸಿ ತಂದು ಅಲ್ಲಿ ನಮ್ಮ ಭಾವನೆಗಳನ್ನು ಹರವಿ ಹಾರೈಸಿ,ಶುಭಕೋರಿ ಪೋಸ್ಟ್ ಮಾಡಿದರೆ ಒಂದು ಅನಿರ್ವಚನೀಯ ಆನಂದ.

   ಆ ನಂತರ ಅಂಚೆಯಣ್ಣ ಮನೆ ಮುಂದೆ ಹಾಯ್ದು ಹೋದರೆ ಸಾಕು ಪತ್ರ ಬಂದಿದ್ದರೆ ಕೊಡುತ್ತಾನೆಂದು ಗೊತ್ತಿದ್ದರೂ  ‘ಅಣ್ಣಾ ನಮ್ಮ ಪತ್ರವೇನಾದರೂ ಬಂದಿದೆಯೇ’ ಎಂದು ಕೇಳದೇ ಇರಲು ಆಗುತ್ತಲೇ ಇರಲಿಲ್ಲ.

    ಪುರಾಣಗಳಲ್ಲಿ ಪಕ್ಷಿ, ಪಾರಿವಾಳಗಳು ಅಂಚೆ ಹಕ್ಕಿಗಳಾಗಿ ಬಳಕೆಯಲ್ಲಿದ್ದರೆ ನಂತರ ಮಹಾರಾಜರ ಕಾಲದಲ್ಲಿ ಅಕ್ಷರಗಳ ಸುತ್ತೋಲೆ ಬಿಡಿಸಿ ಹಿಡಿದು ಓದುವುದೇ ಒಂದು ಘನತೆ. ಕಾಳಿದಾಸನ ಶಾಕುಂತಲೆ ಕತೆಯಲ್ಲಿ ಬರುವ ಮೇಘ ಸಂದೇಶವೂ ಒಂದು ಅಂಚೆಯೇ.

   ಎಂಗೇಜಮೆAಟ್ ಆದ ಹುಡುಗರ ಪತ್ರ ತವರಿಗೆ ಹೋದ ಹೆಂಡತಿಗೆ ಗಂಡ ಬರೆದ ಪತ್ರ ಆ ಪತ್ರ ಓದಲು ಏಕಾಂತ ಅರಸುವ ಮುಜುಗರ ಅವರನ್ನು ಕಾಡಿಸುವ ಸಡಗರ ಪತ್ರದಿಂದಷ್ಟೇ ಸಿಗಲು ಸಾಧ್ಯ. ‘ಹಾಯ್ ಹ್ಯಾಪಿ ಬರ್ತಡೇ’ ಎಂದು ಮೆಸೇಜ್ ಹಾಕಿ ವಿಷ್ ಮಾಡುವುದಕ್ಕೂ ಒಂದು ಚೆಂದನೆಯ ಪತ್ರ ಬರೆದು ಹಾರೈಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ಮೆಸೇಜನಲ್ಲಿ ಸಪ್ಪೆ, ಒಣ ನಿರ್ಜೀವ ಮಾತುಗಳಿದ್ದರೆ ಪತ್ರದಲ್ಲಿ ರುಚಿ, ಸತ್ವ, ಕಚಗುಳಿ, ರೋಮಾಂಚನ ಸಂವೇದನೆಗಳAತಹ ನವರಸಗಳಿರುತ್ತವೆ.

    ಒಂದು ಆತ್ಮೀಯ ಪತ್ರ ಮನಸಿಗೆ ಅದೆಷ್ಟು ಸಮಾಧಾನ, ಧೈರ್ಯ ಕೊಡಬಲ್ಲದು. ಅದಕ್ಕೇ ಇರಬೇಕು ಪ್ರಸಿದ್ಧ ಲೇಖಕರಾದ ರಾಬಿನ್ ಶರ್ಮಾ “ನಿಮಗೆ ಬಿಡುವಿದ್ದಾಗ ನಿಮಗೆ ಬೇಕಾದವರಿಗೆ ಪತ್ರ ಬರೆಯುವ ಅಭ್ಯಾಸವನ್ನಿಟ್ಟುಕೊಳ್ಳಿ” ಎಂದಿರುವುದು.

    ಒಂದು ಅನಾಮಧೇಯ ಪತ್ರ ನಡೆಯುತ್ತಿರುವ ಶುಭ ಕಾರ್ಯಗಳನ್ನೇ ಮುರಿಯುವ ವಿಲನ್ ಆಗಿಯೂ ಪಾತ್ರ ಮಾಡಬಲ್ಲದು.

    ಎಲ್ಲಾ ಕ್ಷೇತ್ರಗಳ್ಲೂ ಹೆಜ್ಜೆ ಇಟ್ಟಿರುವ ಮಹಿಳೆ ಅಂಚೆ ವಿಭಾಗದಲ್ಲೂ  ಕಾಣಿಸಿಕೊಂಡಿರುವುದು ಅಚ್ಚರಿ, ಮತ್ತು ಹೆಮ್ಮೆಯ ಸಂಗತಿಯಾಗಿದೆ. ಕೊಡಗು ಜಿಲ್ಲೆ ಸಿದ್ದಾಪುರದಲ್ಲಿ  ‘ಪ್ರಥಮ ಮಹಿಳಾ ಅಂಚೆ ಕಚೇರಿ’ಗೆ ಚಾಲನೆ ನೀಡಲಾಗಿದೆ.

   ಅಂಚೆಯ ಕೆಲವು ಪ್ರಥಮಗಳು ಮತ್ತು ಕುತೂಹಲ ಸಂಗತಿಗಳು

* ಭಾರತೀಯ ಅಂಚೆ ಸೇವೆ ಆರಂಭವಾಗಿದ್ದು ೧೯೬೪ ರಲಿ. ್ಲಇದರ ಮುಖ್ಯ ಕಾರ್ಯಾಲಯ ಹೊಸ ದೆಹಲಿಯಲ್ಲಿದೆ.

*  ವಿಶ್ವ ಅಂಚೆ ದಿನವನ್ನು ಅಕ್ಟೋಬರ್ ೯ ರಂದು ಆಚರಿಸುತ್ತರೆ.ಇದನ್ನು ೧೮೭೪ ರಲ್ಲಿ . ಸ್ವಿಟ್ಜರ್ ಲ್ಯಾಂಡ್ ನಲ್ಲಿ ಸ್ಥಾಪಿಸಲಾಯಿತು.  ಆದರೆ ೧೯೬೯ ರಿಂದ ಆಚರಿಸಲು  ಜಪಾನಿನ ಟೋಕಿಯೋದಲ್ಲಿ  ಘೋಷಿಸಲಾಯಿತು.

*   ಅತಿ ಹೆಚ್ಚು ಅಂಚೆ ಕಚೇರಿ ಹಿಮಾಚಲ ಪ್ರದೇಶದ ಹಿಕ್ಕಿಮ್‌ನಲ್ಲಿವೆ.

*   ಸುಧಾರಿತ ಅಂಚೆ ಕಚೇರಿ ಜಾರಿಗೆ ತಂದವರು ಬ್ರಿಟಿಷರು .

*   ಭರತಖಂಡಕ್ಕೆ ಅಂಚೆ ವ್ಯವಸ್ಥೆ ಪರಿಚಯಿಸಿದ ಕೀರ್ತಿ ‘ಲಾರ್ಡಕ್ಲೆöÊವ್’ ಗೆ ಸಲ್ಲುತ್ತದೆ’

*   ೧೯೧೧ ರಲ್ಲಿ ವೈಮಾನಿಕ ಅಂಚೆ ಜಾರಿಗೆ ಬಂದಿತು.

*   ನೂತನ ಅಂಚೆ ಸೇವೆಯಲ್ಲಿ ಸ್ಪೀಡ್ ಪೋಸ್ಟ್, ಎಕ್ಸ್ಪ್ರೆಸ್ ಪಾರ್ಸಲ್, ಪಾಸ್ಪೋರ್ಟ,ಉದ್ಯೋಗ ಯೋಜನೆ, ಅಂತರಾಷ್ರೀಯ ಜನಾದೇಶ, ಡಿವಿಡೆಂದ್ ವಾರೆಂಟು ಮುಂತಾದ ಸೌಲಭ್ಯಗಳಿವೆ.

*   ದೇಶಾದ್ಯಂತ ೧,೫೫,೦೦೦ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಮತ್ತು ೫,೨೦,೧೯೧ ಅಂಚೆ ಉದ್ಯೋಗಿಗಳಿದ್ದಾರೆ.

*   ಭಾರತದಲ್ಲಿ ಮೊದಲ ಅಂಚೆ ಕಚೇರಿಯನ್ನು ‘ಈಸ್ಟ್ ಇಂಡಿಯಾ ಕಂಪನಿ’ ೧೭೭೪ ರಲ್ಲಿ’ ಕಲ್ಕತ್ತಾದಲ್ಲಿ ಸ್ಥಾಪಿಸಿತು .

*   ಭಾರತದ ಮೊದಲ ಅಂಚೆ ಚೀಟಿ ‘ಹಾರಾಡುತ್ತಿರುವ ತ್ರಿವರ್ಣ ಧ್ವಜ’ ಆಗಿತ್ತು.

*   ಅಂಚೆ ಇಲಾಖೆ ಸೇವೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

*   ಕೊರೊನಾ ಲಾಕ್‌ಡೌನ್ ನಂತಹ ಬಿಕ್ಕಟ್ಟಿನ ಸಮಯದಲ್ಲೂ ನಾಲ್ಕು ಲಕ್ಷ ಅಂಚೆ ಸಿಬ್ಬಂದಿಗಳು ಎದೆಗುಂದದೆ ಕೆಲಸ ಮಾಡಿದ್ದನ್ನು ನಾವು ಮರೆಯಬಾರದು.

*  ಅವಾಗ ಖಾಸಗಿ ಕೊರಿಯರ್ ಸೇವೆಗಳು ಇಲ್ಲದಾಗ ಜನರಿಗೆ ಅಗತ್ಯವಾದ ಔಷಧ, ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ತಲುಪಿಸಿದ್ದು ಅಂಚೆ ಇಲಾಖೆ.

*   ವಾಹನಗಳು ಹೋಗದ ಜಾಗಕ್ಕೂ ಹೋಗಿ ತರಕಾರಿ ದಿನಸಿಗಳನ್ನು ತಲುಪಿಸಿದವರು ಅಂಚೆ ಸಿಬ್ಬಂದಿ.

*   ಪ್ರವಾಹ, ಅತಿವೃಷ್ಟಿ, ಭೂಕಂಪ ಏನೇ ಆದರೂ ಅಂಚೆ ಇಲಾಖೆಯ ನಿರಂತರ ಕೆಲಸಕೆ ಅಂಚೆ ಯೋಧರಿಗೆ ನೊಬೆಲ್‌ನಂತಹ ಪ್ರತಿಷ್ಠಿತ ಪ್ರಶಸ್ತಿ ಸಿಗಬೇಕು.

*   ಇನ್ನೊಂದು ಹುಬ್ಬೇರಿಸುವ ವಿಷಯವೆಂದರೆ ಕೊರೊನಾ ಸಮಯದಲ್ಲಿ ಭಾರತೀಯ ಅಂಚೆ ಇಲಾಖೆಯವರು ಆರು ಲಕ್ಷ ಆಹಾರಗಳನ್ನು ಹಂಚಿದ್ದಾರೆ. ಅಲ್ಲದೆ ೪೨ ಕೋಟಿ ಸಹಾಯಧನವನ್ನು  ಪಿ ಎಮ್ ಕೇರ್ ನಿಧಿಗೆ ಕೊಟ್ಟಿರುವುದು ಸಣ್ಣ ಮಾತಲ್ಲ.

*   ಅದಕ್ಕೇ ಅವರು ಸಿಕ್ಕಾಗ ಕೈಮುಗಿದು ಗೌರವ ಸೂಚಿಸುವುದು ಪತ್ರ ಸ್ವೀಕರಿಸಿ ಧನ್ಯವಾದ ಹೇಳುವುದು ನಮ್ಮ ಕರ್ತವ್ಯವಲ್ಲವೇ?

 ಎಲ್ಲಾ ಅಂಚೆ ಅಣ್ಣ ಅಕ್ಕಂದಿರಿಗೆ ವಿಶ್ವ ಅಂಚೆ ದಿನದ ಶುಭಾಶಯಗಳು.


ನಿಂಗಮ್ಮ ಭಾವಿಕಟ್ಟಿ

ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ  ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿ

Leave a Reply

Back To Top