ಅಂಕಣ ಸಂಗಾತಿ

ಪ್ರಸ್ತುತ

ಪ್ರಯೋಗ

     ಜೀವನ ಶೈಲಿ ಎಂದೊಡನೆ ಕೇವಲ ತಿನ್ನುವುದು,  ಕುಡಿಯುವುದು ಅಂತಲ್ಲ.  ನಾವು ಏನು ಯೋಚನೆ ಮಾಡ್ತೀವಿ. ಹೇಗೆ ಮಾತಾಡ್ತೀವಿ ಎನ್ನುವುದು ಸಹ ಆಗಿದೆ ನಾನು ಏನಕ್ಕೆ ಕೂಗಾಡ್ತೀನಿ ಅಂದುಕೊಂಡರೆ ಸುಮ್ಮನೆ ಯೋಚಿಸಿದರೆ .. ತಿಳಿದಿರಲಿ ಆ ಕೂಗಾಟ ವಾತಾವರಣದ ಮೇಲೆ ಒಂದು ರೀತಿಯ ಕಂಪನ ಅಲೆಗಳು ವೈಬ್ರೇಶನ್ ಅಂತಾರಲ್ಲ ಅದನ್ನ ಸೃಷ್ಟಿ ಮಾಡುತ್ತದೆ . ಅದರಿಂದ ಮೊದಲು ಕೂಗಾಡಿದ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಆ ಪರಿಣಾಮ ಸೂಕ್ಷ್ಮವಾಗಿರುತ್ತದೆ. ಒಂದು ನೋಟವು ಒಂದು ರೀತಿಯ ವೈಬ್ರೇಶನ್ ಕ್ರಿಯೇಟ್ ಮಾಡುತ್ತದೆ ಎಂದರೆ ನಂಬಲೇಬೇಕು. ಉದಾಹರಣೆಗೆ . ಒಂದು ಸಭೆ.  ಉಪನ್ಯಾಸ ನಡೆದಿರುತ್ತದೆ. ಒಂದು ಮೊಬೈಲ್ ರಿಂಗ್ ಆಗುತ್ತದೆ ಆ ವ್ಯಕ್ತಿ ಇನ್ನೇನು ಅದನ್ನು ಮ್ಯೂಟ್ ಮಾಡಲು ಮೊಬೈಲ್ ತೆಗೆಯುತ್ತಾನೆ. ಅಷ್ಟರಲ್ಲಿ ಇಡೀ ಸಭೆಯ ಕಣ್ಣುಗಳು ಅವನನ್ನು ದುರುಗಟ್ಟಲು ಶುರುವಾಗುತ್ತದೆ. ಆ ವ್ಯಕ್ತಿಯ ಕೈ  ನಡುಗತೊಡಗುತ್ತದೆ. ಮೊಬೈಲ್ ಮ್ಯೂಟ್ ಮಾಡಲು ಸಾಧ್ಯವಾಗದೆ ಪಕ್ಕದವರ ಕೈಗೆ ಕೊಟ್ಟು ‘ದಯವಿಟ್ಟು ಮ್ಯೂಟ್ ಮಾಡಿ’ ಅನ್ನುತ್ತಾನೆ. ಇಲ್ಲಿ ಆ ಸುತ್ತಲೂ ನೋಟಗಳು ಬೀರಿದ ವೈಬ್ರೇಶನ್ ಹೇಗಿತ್ತು ನೋಡಿ ,  ಅದನ್ನು ಸಹಜ ವೆಂಬಂತೆ ಸುಮ್ಮನಿರುವವರು ಎಷ್ಟು ಜನ?  ನಾವು?  ನೀವು?  ಸಮಾಧಾನವಾಗಿರುವಿರಾದರೆ ನೀವು ಆ ವೈಬ್ರೇಶನ್ ಎಫೆಕ್ಟ್ ಬಲ್ಲವರಾಗಿರುತ್ತೀರಿ. ಮತ್ತು ಸುಮ್ಮನಿದ್ದುಕೊಂಡೆ ಸುಮ್ಮನಿರುವುದನ್ನು ಕಲಿಸುವವರಾಗಿರುತ್ತೀರಿ.

ಎಲ್ಲಾ ಚಿಕ್ಕ ಪುಟ್ಟ ಘಟನೆಗಳಿಗೂ ನಾವು ಯೋಚಿಸಿ ತಲೆಕೆಡಿಸಿಕೊಳ್ಳುತ್ತೇವೆ? ಈ ಮಾತನ್ನು ನಾವು ನಮ್ಮನ್ನು ಒಮ್ಮೆಯಾದರೂ ಕೇಳಿಕೊಂಡಿದ್ದೇವೆಯೇ ಅದು ನಮಗೆ ಅಭ್ಯಾಸವಾಗಿಬಿಟ್ಟಿದೆ. ಒಂದು ರಸ್ತೆ ಗುಂಡಿ, ದಿನಾಲು ನಾವು ಅದೇ ರಸ್ತೆಯಲ್ಲಿ ನಡೆಯಬೇಕು. ನಡೆಯುವಾಗಲೆಲ್ಲ ಅದನ್ನು ನೋಡಿ ‘ಯಾವಾಗ ಮುಚ್ಚುತ್ತಾರೆ? ಈ ಸರ್ಕಾರ ಏನು ಮಾಡುತ್ತಿದೆ? ಎಷ್ಟು ತೊಂದರೆ ?’ ಎಂಬ ನೆಗೆಟಿವ್ ಯೋಚನೆಗಳನ್ನು ಮಾಡುವುದರ ಮೂಲಕ ನಮ್ಮ ಎನರ್ಜಿ ಲಾಸ್ ಮಾಡಿಕೊಳ್ಳುತ್ತೇವೆ ಎಂಬುದು ನಮ್ಮ ಗಮನಕ್ಕೆ ಬರುವುದೇ ಇಲ್ಲ ಅಲ್ವಾ‍?  ಈಗ ನಾವು ಏನು ಮಾಡಬಹುದು.? ಗುಂಡಿಯ ದಾರಿಯಲ್ಲೇ ಸಹಜವಾಗಿ ಸಾಗಬೇಕು. ಇಲ್ಲವಾ ..ಬೇರೆ ದಾರಿಯಲ್ಲಿ ಬೇಕಾದಲ್ಲಿಗೆ ಹೋಗಬೇಕು. ಸಿಂಪಲ್ ತಾನೇ ? ಅರ್ಥವಿಲ್ಲದ ಉಪಯೋಗವಿಲ್ಲದ ಯೋಚನೆಗಳಿಂದ ನಮ್ಮ ತಲೆಯನ್ನು ತುಂಬಿಕೊಂಡು ನಾವು ಬಲಹೀನ ಭಾವನೆಯಿಂದ ಬಳಲಬೇಕೇಕೆ? ಮಾಡಬೇಕಾದುದಿಷ್ಟೇ… ಬದಲಾಗದ ಸನ್ನಿವೇಶಗಳ ಸಂದರ್ಭಗಳಿಗೆ ನಾವು ಪ್ರತಿಕ್ರಿಯಿಸುವುದನ್ನು ನಿಲ್ಲಿಸಬೇಕು. ‘ಅಯ್ಯೋ ಏನ್ ಟ್ರಾಫಿಕ್ ಛೇ!’ ಎನ್ನುತ್ತಿದ್ದರೆ ಟ್ರಾಫಿಕ್ ರಿಮೂವ್ ಆಗಬಲ್ಲದೆ? ಒಂದು ನಿಮಿಷ ಎರಡು ನಿಮಿಷ ನಿಲ್ಲಲೇ ಬೇಕು ಸಾಗಲೇಬೇಕು. ಅದಕ್ಕೆ ಪೇಚಾಡಿ ನಮ್ಮ ಎನರ್ಜಿ ಲಾಸ್ ಯಾಕೆ ಮಾಡಿಕೊಳ್ಳಬೇಕು? ಹೀಗಾಯ್ತು… ಹೀಗಾಯ್ತು ಎನ್ನುತ್ತಿದ್ದರೆ ಆಗಿದ್ದು ಬದಲಾಗದು ಅಂದಮೇಲೆ ಅದನ್ನು ಹೇಗೆ ಸ್ವೀಕರಿಸಬೇಕು? ಮುಂದೆ ಏನು ಮಾಡಬಹುದು?  ಎನ್ನುವುದೇ ಸರಿಯಾದ ವಿಧಾನವಲ್ಲವೇ ? ಇದು ಗೊತ್ತಿದ್ದು ಗಾಬರಿಗೊಳ್ಳುವುದು ಹತಾಶರಾಗುವುದು ಆಗಿ ಆದವರ ಬಗ್ಗೆ ಯೋಚಿಸಿ ತಾವು ವೀಕ್ ಆಗಿ ಇಲ್ಲದ ಕಾಯಿಲೆಗೆ ಆಹ್ವಾನ ಕೊಡುವುದು ಎಷ್ಟರಮಟ್ಟಿಗೆ ಸರಿ? ಈ ನಿಟ್ಟಿನಲ್ಲಿ ನಮ್ಮನ್ನು ನಾವೇ ಒಂದಿಷ್ಟು ಪ್ರಶ್ನೆಗೆ ಒಡ್ಡಿಕೊಳ್ಳಬೇಕು. ನಾವು ನಮ್ಮಿಂದ ಬೇರೆಯಾಗಿ ನಿಂತು ನಮ್ಮನ್ನು ಅವಲೋಕಿಸಿಕೊಳ್ಳಬೇಕು ಇದು ನಿಧಾನ ಗತಿಯ ಬದಲಾವಣೆ. ಆದರೂ ಅದ್ಬುತ ಪರಿಣಾಮಕಾರಿ. ಎನರ್ಜಿ ಸ್ಪ್ರೆಡ್ಡಿಂಗ್ ಮೆಥೆಡ್.

                           ದಿನಕ್ಕೊಮ್ಮೆಯಾದರೂ ನಾವು ಕನ್ನಡಿ ಎದುರು  ನಿಂತು ಮುಗುಳ್ನಗುತ್ತಾ ಮಾತಾಡಿಕೊಳ್ಳಬೇಕು. ಇದು ತುಂಬಾ ಪರಿಣಾಮಕಾರಿ ಮತ್ತು ಆ ಮಾತುಗಳು ಧನಾತ್ಮಕವಾಗಿರಬೇಕು‌. ಆತ್ಮಸ್ಥೈರ್ಯ ತುಂಬುವಂತವಾಗಿರಬೇಕು. ಈ ಪ್ರಯೋಗದ ಬಗ್ಗೆ ಮುಂದಿನ ಲೇಖನಾಂಕಣದಲ್ಲಿ ಮಾತಾಡೋಣ . ಇನ್ನು ನಾವು ಮಾತು, ಗದ್ದಲ, ಮೊಬೈಲ್, ಟ್ರಾಫಿಕ್ ನೊಂದಿಗೆ ಇರುವಾಗಲೂ ಶಾಂತವಾಗಿ ಇರಬಲ್ಲೆವು ಅನಿಸುತ್ತಿದೆಯಾ?

ಸಾಮಾನ್ಯ ವಿಷಯಗಳೊಂದಿಗೆ  ಅಸಾಮಾನ್ಯರಂತೆ ಇರೋಣ ಏನಂತೀರಿ?

    ಒಂದು ಪ್ರಯೋಗ ಮಾಡಿ. ಪ್ರತಿಕ್ರಿಯಿಸಿ. ಒಂದು ಮೊಬೈಲ್ ರಿಂಗ್ ಆಗ್ತಿದೆ ಮತ್ತೆ ಮತ್ತೆ. ಅವರು ಮ್ಯೂಟ್ ಮಾಡುತ್ತಿಲ್ಲ ಆಗ ಹೇಗೆ ಪ್ರತಿಕ್ರಿಯಿಸುತ್ತೇವೆ? ಮತ್ತು ಹೇಗೆ ಪ್ರತಿಕ್ರಿಸಬಹುದು? ಒಂದು ವಾಕ್ಯದಲ್ಲಿ ಹೇಳುವಿರಾ?


ನಿಂಗಮ್ಮ ಭಾವಿಕಟ್ಟಿ ಹುನಗುಂದ

ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ  ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿ

Leave a Reply

Back To Top