ಯ.ಮಾ.ಯಾಕೊಳ್ಳಿ ಚುಟುಕುಗಳು

ಕಾವ್ಯ ಸಂಗಾತಿ

ಯ.ಮಾ.ಯಾಕೊಳ್ಳಿ ಚುಟುಕುಗಳು


ಅವ್ವನ ಮಡಿಲು
ಎಂದೆಂದಿಗೂ ಬತ್ತದ
ಒರತೆ,ಮತ್ತೆ ಮತ್ತೆ
ಮೂಡಿ ಬರುವ ಕವಿತೆ

ಬರೆದು ತೀರಿಸಬಹುದೆ
ಹುಚ್ಚು ಕವಿಯೆ ನಿನ್ನ
ಅಕ್ಕರಗಳು
ಅವಳ ತ್ಯಾಗವ

ಒಂದೆ ದಿನ ಮೀಸಲೇ
ಜಗದ ಮೇಲಿನ ಎಲ್ಲ
ದಿನದರ್ಶಿಕೆಗಳ
ಹೆತ್ತ ಆ
ಶಕ್ತಿದೇವತೆಗೆ

ಅವ್ವ ಜಗದ
ಎಲ್ಲ ದೇವತೆಗಳ
ಹೆತ್ತ ಮಡಿಲು
೫.
ಹುಟ್ಟುತ್ರಾ ಮಗು
ಆದವನಿಗೆ ಅವ್ವ
ಬೆಳೆಯುತ್ತಾ
ಮನೆಯೊಳಗಿನ
ಮುದುಕಿಯಾದಳು

ಅವ್ವನ ಕುರಿತು
ಬರೆಯುತ್ತಾ ಹೋದೆ
ಅವಳು ನೆನಪಾದಳು

ಮತ್ತೆ ಮತ್ತೆ ಮೌನಕ್ಕೆ ಜಾರುವ ಅವಳೂ ಅವ್ವನಂತೆಯೆ ಮಾತೊಲ್ಲದವಳು


Leave a Reply

Back To Top