ʼನನ್ನವ್ವ ದೊಡ್ಡವ್ವʼಅಖಿಲ ಭಾರತಕನ್ನಡಸಾಹಿತ್ಯಸಮ್ಮೇಳನದಮೊದಲ ಮಹಿಳಾಅದ್ಯಕ್ಷರಾಗಿದ್ದ ಜಯದೇವಿ ತಾಯಿ ಲಿಗಾಡೆಯವರಮೊಮ್ಮಗಳು ಸವಿತಾದೇಶಮುಖ ತಮ್ಮ ಅಜ್ಜಿಯ ಜನ್ಮದಿನಕ್ಕೆ ಬರೆದಕವಿತೆ

ಸಿದ್ದನವಸುಧೆಲಿ ಸ್ಪರಿಸಿ,ಗಡಿನಾಡ ಮಗಳಾಗಿ
ಕರುನಾಡ ಸೊಸೆಯಾಗಿ ಕನ್ನಡಿಗರತಾಯಾಗಿ
ಸದಾಚಾರದ ಖಣಿ ಭಕ್ತಿರಸ ಸಾದ್ವಿಮಣಿ

ಸಮತೆಯ ಹಾಲಿನಲಿ ಮಮತೆಯ ಸಕ್ಕರೆ ಹೊನಲಿನಲಿ 

ದೊಡ್ಡ ಸಂಸಾರ ಸಾಮರಸ್ಯ
ಸಾದಿಸಿದಿ – ನೀ ನನ್ನವ್ವ ದೊಡ್ಡವ್ವ….

 ರಾಗಭೋಗ ಆಚೆ ನಿಂದೆ ಧವಲ ವಸ್ತ್ರವ
ರುದ್ರಾಕ್ಷಿ ಮಾಲೆ-ಬೆಳೆಯ ಸಿಂಗಾರವ
ವಜ್ರ ವೈಡೂರ್ಯ ಮಾಡಿ ತ್ಯಾಗವ

 ಆದರೆ ಸಂಥಿಣಿ ಯೋಗಿಣಿ ತ್ಯಾಗದ ಮಣಿ
ಸಿದ್ದನ ವರವ ಪಡೆದ  ಶಿವಯೋಗಿಣಿ
ಸತತ ಧ್ಯಾನದಿ ಅವಿರತ ದೈವಸಾಕ್ಷಾತ್ಕಾರಣಿ

ಭಾವ ಪರವಶ ಬಂಧಿ,ಮಿಥ್ಯೆ ಜೀವನದ
ಸಂತೆ ಸಾರಿದೆ ಅಬಲೆಯರ ಕಣ್ಣುವರಿಸಿ
ಕನ್ನಡ ಶಾಲೆಗಳ ತೆರಸಿದೆ- ನನ್ನವ್ವ ದೊಡ್ಡವ್ವ

ಜ್ಞಾನನಿಧಿಯ ಅರಸಿ,ಹಿಂದುಳಿದವರ
ಎಬ್ಬಿಸಿ ಕನ್ನಡದಿ ಮಹಾಕಾವ್ಯ ರಚಿಸಿ
ಕಣ್ಮಣಿಗಳ ಕಣ್ಣು ತೆರೆಸಿದಿನನ್ನವ್ವ ದೊಡ್ಡವ್ವ .

ರಜಾಕಾರರ ಬಡಿದೊಡಿಸಿದಿ ನಿರಾಶ್ರಿತರಿಗೆ 

ಆಶ್ರಯಿಸಿದಿ,ನಿಜಾಮನ ಉಲ್ಲಂಘಿಸಿ –
ಏಕೀಕರಣ ಕೈಗೂಡಿಸಿದೆ-ನನ್ನವ್ವ ದೊಡ್ಡವ್ವ…

ಸತ್ಯಕಾಯಕದಿ ಸೊನ್ನಲಿಗೆ ಕರುನಾಡ
ಸೇರದಾಗ ಶರಣರ ಬೀಡು ಕಲ್ಯಾಣನಾಡ
 ಶರಣರ ಭೂಮಿಯಲ್ಲಿ ಒಂದಾದೆ….

ದಿವ್ಯ ಜ್ಞಾನ ನಿಜ ಸಂಪದ ಪಡದೆ  
ಶರಣರ ಗತಕಾಲ ಮರುಕಳಿಸಿದೆ
ಸಿದ್ಧಶೈಲದ ಬಯಲೊಳು ಬಯಲಾದೆ ‌‌…

ಬಾರಿಸಿ ಕನ್ನಡದ ಜಯದ ಜಯಭೇರಿ
ಖುಷಿ ಶರಣರ ವಂಶ ಶುಭ ಕಳೆ ಕಲಶವಾದೆ
ನೀ- ನನ್ನವ್ವ ದೊಡ್ಡವ್ವ …….


7 thoughts on “ʼನನ್ನವ್ವ ದೊಡ್ಡವ್ವʼಅಖಿಲ ಭಾರತಕನ್ನಡಸಾಹಿತ್ಯಸಮ್ಮೇಳನದಮೊದಲ ಮಹಿಳಾಅದ್ಯಕ್ಷರಾಗಿದ್ದ ಜಯದೇವಿ ತಾಯಿ ಲಿಗಾಡೆಯವರಮೊಮ್ಮಗಳು ಸವಿತಾದೇಶಮುಖ ತಮ್ಮ ಅಜ್ಜಿಯ ಜನ್ಮದಿನಕ್ಕೆ ಬರೆದಕವಿತೆ

  1. ಅತ್ಯುತ್ತಮ ಕವನ ಮೇಡಂ

  2. ಮನದಾಳದಿಂದ ಬಂದ ಮಾತುಗಳು..ಅಭಿನಂದನೆಗಳು ಅಕ್ಕ.

Leave a Reply

Back To Top