ವಿನುತ ಹಂಚಿನಮನಿ ಕವಿತೆ ಖಜಾನೆ

ನಾರಿ ನಿನಗ್ಯಾಕೇ ಆಭರಣ!

Flow Of Feelings, Painting by Dr Suresh Ega | Artmajeur

ವಸ್ತ ವಡವಿ ನಿನಗೆ ಬೇಕೇ ನಲ್ಲೆ
ಮಸ್ತ ಕಾಡಿಗೆ ಕುಂಕುಮ ಸಾಕಲ್ಲೆ

ಕುತ್ತಿಗೆ ಸುತ್ತಿರುವ ಟೀಕಿ ಕಂಠೀಸರಕೆ
ನಿನ್ನ ಶಂಖದ ಕೊರಳೇ ಶೋಭೆಯದಕೆ

ವಜ್ರದೋಲೆಯ ಮಿಂಚು ಮಂಕಾಗಿದೆ
ನಿನ್ನ ಕಣ್ಣಂಚಿನ ಸಂಚದಕೆ ಸವಾಲಾಗಿದೆ

ನತ್ತು ಮಾತ್ರ ಒತ್ತಿ ಒತ್ತಿ ಹೇಳುತಿದೆ
ನಿನ್ನ ಗತ್ತೇ ಅದನು ಸೋಲಿಸುತಿದೆ

ಕೈಗಳಲಿರುವ ಜೋಡಿ ಕಡಗ ಕಂಕಣ
ನಿನ್ನ ಬಾಳೆದಿಂಡಿನಂತಿರುವ ಕೈಗೆ ಗ್ರಹಣ

ಹೆಜ್ಜೆಯ ಗೆಜ್ಜೆ ಸೋತಿವೆ ದಣಿದು
ನಿನ್ನ ನಡಿಗೆಯ ಲಾಸ್ಯಕೆ ಕುಣಿದು

ತುಟಿಯ ರಂಗು ಮನದ ಭಾವಕೆ
ಹಿತದಿ ನಾಚುತ ಪ್ರತಿಸ್ಪರ್ಧಿಯಾಗಿದೆ

ನಡುವ ಸುತ್ತಿರುವ ಒಡ್ಯಾಣ ಪಟ್ಟಿ
ಮನಸೋತಿದೆ ನಿನ್ನ ನಡುಗೆಗೆ

ವಸ್ತ ವಡವಿ ನಿನಗ್ಯಾಕೆ ಹೆಣ್ಣೇ
ಮುಗುಳುನಗೆ ಲಜ್ಜೆ ಸಾಕಲ್ಲವೇ

******************

ಪ್ರೀತಿಯ ಆಳ

Feelings, emotion, love. Painting by Angela Seifert | Saatchi Art

ನಿನ್ನ ದ್ವೇಷದಲಿ ಅಷ್ಟು ಅಗ್ನಿಯಿಲ್ಲ
ನನ್ನ ಪ್ರೀತಿಯನದು ದಹಿಸಿ ಸುಡುವಷ್ಟು

ನಿನ್ನ ದ್ರೋಹದಲಿ ಅಷ್ಟೊಂದು ಆಳವಿಲ್ಲ
ನನ್ನ ಪ್ರೀತಿಯನದು ಮುಳುಗಿಸುವಷ್ಟು

ಯಾವನಿಗಾಗಿ ಸಾಯಲು ತಯಾರಿದ್ದೆ
ಅವನ ಸಲುವಾಗಿಯೇ ಜೀವಂತವಿದ್ದೆ

ಮುಖಚರ್ಯೆಯಿಂದ ಸುರುವಾದ ರೀತಿ
ಮನದಾಳದಲಿ ಇಳಿಯಲಾರದೇ ಪ್ರೀತಿ

ದುಃಖ ಬಾಯಿ ಮಾತಿನಿಂದ ಹೊಮ್ಮಬೇಕೆ
ವಿನೂತಳ ಕಣ್ಣಿನಿಂದ ಧುಮುಕಲಾರದೆ


ವಿನುತ ಹಂಚಿನಮನಿ

One thought on “ವಿನುತ ಹಂಚಿನಮನಿ ಕವಿತೆ ಖಜಾನೆ

Leave a Reply

Back To Top