ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ “ಮೂಡಣ ರವಿ”

ಮೂಡಣದಲ್ಲಿ ಹುಟ್ಟುವ ರವಿಯು
ಪಡುವಣದಲ್ಲಿ ಮುಳುಗುವನು
ನಿತ್ಯವು ಜನನ ನಿತ್ಯವು ಮರಣದ
ವರವನು ಅವನು ಪಡೆದಿಹನು

ನೇಸರ ದಿನಕರ ಭಾಸ್ಕರನೆಂಬ
ಹಲವು ಹೆಸರು ಹೊಂದಿಹನು
ಹಲವು ಬಣ್ಣದ ಮಿಶ್ರಣದಿಂದ
ಬಿಳಿಯ ಬಣ್ಣಕೆ ಬಂದಿಹನು

ಬಿಸಿಲಿಗೂ ನೆರಳಿಗೂ
ಕಾರಣನಿವನು
ಮೋಡದ ಮರೆಯಲಿ
ಚಲಿಸುವನು

ಎಲ್ಲಾ ಊರಲಿ ಇದ್ದೆ
ಇರುವನು
ನಿಮ್ಮಯ ಬೆನ್ನು ಬಿಡದೆ
ಬರುವನು

ನೆತ್ತಿಯ ಮೇಲೆ ಬಂದರೆ ರವಿಯು
ನೆಲವೇ ಸುಡುವುದು ಎಂದು ಜರಿವರು
ಮೋಡದ ಮರೆಯಲಿ ಅವಿತು ಕುಳಿತರೆ
ಬಿಸಿಲೆ ಇಲ್ಲ ಎಂದು ಕೊರಗುವರು

ರವಿಯು ಇಲ್ಲದೆ ಬೆಳಕಿಲ್ಲ
ರವಿಯು ಇಲ್ಲದೆ ಬದುಕಿಲ್ಲ


Leave a Reply

Back To Top